Asianet Suvarna News Asianet Suvarna News

ಸಾಕ್ಷಿ ಧೋನಿ ಕುರಿತು ಬೆನ್‌ ಡಕೆಟ್‌ ಮಾಡಿದ್ದ 11 ವರ್ಷದ ಹಿಂದಿನ ಟ್ವೀಟ್‌ ವೈರಲ್‌!

ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಇಂಗ್ಲೆಂಡ್‌ ತಂಡದ ಭಾಗವಾಗಿರುವ ಬೆನ್‌ ಡಕೆಟ್‌, 11 ವರ್ಷಗಳ ಹಿಂದೆ ಎಂಎಸ್‌ ಧೋನಿ ಪತ್ನಿ ಸಾಕ್ಷಿ ಧೋನಿ ಕುರಿತಾಗಿ ಮಾಡಿರುವ ಟ್ವೀಟ್‌ ಸಾಕಷ್ಟು ವೈರಲ್‌ ಆಗಿದೆ.

Ben Duckett 11 year old tweet about Sakshi Dhoni goes viral on X san
Author
First Published Feb 5, 2024, 7:07 PM IST

ನವದೆಹಲಿ (ಜ.5): ಪ್ರವಾಸಿ ಇಂಗ್ಲೆಂಡ್‌ ತಂಡದ ಪರವಾಗಿ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಭಾಗವಾಗಿರುವ ಐದು ಪಂದ್ಯಗಳ ಟೆಸ್ಟ್‌ ಸರಣಿ ಆಡಲು ಬೆನ್‌ ಡಕೆಟ್‌ ಭಾರತಕ್ಕೆ ಬಂದಿದ್ದಾರೆ. ಎಡಗೈ ಆರಂಭಿಕ ಬ್ಯಾಟ್ಸ್‌ಮನ್‌ ಈಗಾಗಲೇ ಸರಣಿಯ ಪಂದ್ಯಗಳಲ್ಲಿ ಗಮನಸೆಳೆದಿದ್ದಾರೆ. ತಮ್ಮ ಬ್ಯಾಟಿಂಗ್‌ ನಿರ್ವಹಣೆಯ ಮೂಲಕ ಬೆನ್‌ ಡಕೆಟ್‌ ಗಮನ ಸೆಳೆದಿರುವ ಹೊತ್ತಿನಲ್ಲಿ  ಸೋಶಿಯಲ್‌ ಮೀಡಿಯಾ ಬಳಕೆದಾರರು ಅವರ ಹಳೆಯ ಟ್ವೀಟ್‌ಅನ್ನು ವೈರಲ್‌ ಮಾಡಿದ್ದಾರೆ. ಈ ಟ್ವೀಟ್‌ ಎಂಎಸ್‌ ಧೋನಿ ಅವರ ಪತ್ನಿ ಸಾಕ್ಷಿ ಧೋನಿ ಅವರ ಕುರಿತಾಗಿ ಮಾಡಿದ್ದಾರೆ. 2013ರ ಐಪಿಎಲ್‌ ಋತುವಿನಲ್ಲಿ ಸಾಕ್ಷಿ ಧೋನಿ ಅವರನ್ನು ಟಿವಿಯಲ್ಲಿ ನೋಡಿದ್ದ ಬೆನ್‌ ಡಕೆಟ್‌, ಈ ಕುರಿತಾಗಿ 2013ರ ಏಪ್ರಿಲ್‌ 7 ರಂದು ಟ್ವೀಟ್‌ ಮಾಡಿದ್ದರು. 'ಧೋನಿ ಗರ್ಲ್‌ಫ್ರೆಂಡ್‌/ವೈಫ್‌ ಈಸ್‌ ಟಾಪ್‌ ಡ್ರಾವರ್‌' ಎಂದು ಅವರು ತಮ್ಮ ಟ್ವೀಟ್‌ನಲ್ಲಿ ಬರೆದಿದ್ದರು. ಇದರ ಮೂಲ ಅರ್ಥ, ಎಂಎಸ್‌ ಧೋನಿ ಅವರ ಗರ್ಲ್‌ಫ್ರೆಂಡ್‌ ಅಥವಾ ವೈಫ್‌ ಸಖತ್‌ ಆಗಿದ್ದಾಳೆ ಎನ್ನುವುದಾಗಿದೆ.

ಆದರೆ, ಅವರಿಗೆ ಈ ಹೊತ್ತಿಗಾಗಲೇ ಎಂಎಸ್‌ ಧೋನಿ ಹಾಗೂ ಸಾಕ್ಷಿ ಸಿಂಗ್‌ ಧೋನಿ ವಿವಾಹವಾಗಿದ್ದರು ಎನ್ನುವ ಮಾಹಿತಿ ಸಿಕ್ಕಿರಲಿಲ್ಲ. 2010ರಲ್ಲೇ ಧೋನಿ ಹಾಗೂ ಸಾಕ್ಷಿ ವಿವಾಹವಾಗಿದ್ದರು. ಬೆನ್‌ ಡಕೆಟ್‌ ಅದ್ಭುತವಾಗಿ ಆಡುತ್ತಿರುವ ಹೊತ್ತಿನಲ್ಲಿ ಟ್ವಿಟರ್‌ನಲ್ಲಿ ಅವರ ಹಳೆಯ ಟ್ವೀಟ್‌ಗೆ ಕ್ರಿಕೆಟ್‌ ಅಭಿಮಾನಿಗಳು ಕಾಮೆಂಟ್‌ ಮಾಡುತ್ತಿದ್ದಾರರೆ. ಇನ್ನೂ ಕೆಲವರು ತಮ್ಮ ಟೈಮ್‌ಲೈನ್‌ನಲ್ಲಿ ಈ ಟ್ವೀಟ್‌ಅನ್ನು ರೀಪೋಸ್ಟ್‌ ಮಾಡಿದ್ದಾರೆ.

ವೈಜಾಗ್‌ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲಿ 28 ರನ್‌ ಆಟವಾಡಿದ ಬೆನ್‌ ಡಕೆಟ್‌, ಭಾನುವಾರವೇ ತಮ್ಮ ವಿಕೆಟ್‌ ಒಪ್ಪಿಸಿದ್ದರು, 2ನೇ ಟೆಸ್ಟ್‌ ಗೆಲುವಿಗೆ 332 ರನ್ ಬಾರಿಸಬೇಕಿದ್ದ ಇಂಗ್ಲೆಂಡ್‌ ತಂಡ 106 ರನ್‌ಗಳ ಸೋಲು ಕಂಡಿದೆ. ಭಾನುವಾರದ ಆಟದ ಅಂತ್ಯಕ್ಕೆ 14 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ ಇಂಗ್ಲೆಂಡ್‌ 67 ರನ್‌ ಬಾರಿಸಿತ್ತು. 

ಉರುಳಿದ ಒಂದು ವಿಕೆಟ್‌ ಬೆನ್‌ ಡಕೆಟ್‌ ಅವರದಾಗಿತ್ತು. 27 ಎಸೆತ ಎದುರಿಸಿದ ಬೆನ್‌ ಡಕೆಟ್‌ 28 ರನ್‌ ಬಾರಿಸಿದ್ದರು. ಆಫ್‌ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಅವರ ಎಸೆತವನ್ನು ಅಂದಾಜಿಸಲು ವಿಫಲವಾದ ಬೆನ್‌ ಡಕೆಟ್‌, ವಿಕೆಟ್‌ ಕೀಪರ್‌ ಕೆಎಸ್‌ ಭರತ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು.

1.60 ಲಕ್ಷದ ಐಷಾರಾಮಿ ಬ್ರಾಂಡ್‌ನ ಮಿಡಿ ಧರಿಸಿ ದುಬೈನಲ್ಲಿ ಪಾರ್ಟಿ ಮಾಡಿದ ಧೋನಿ ಪತ್ನಿ

ಇಲ್ಲಿಯವರೆಗೂ ಆಡಿರುವ ನಾಲ್ಕೂ ಇನ್ನಿಂಗ್ಸ್‌ಗಳಲ್ಲಿ ಡಕೆಟ್‌ ಉತ್ತರಮವಾಗಿ ಆಡಿದ್ದಾರೆ. ಆದರೆ, ತಮಗೆ ಸಿಕ್ಕ ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ವಿಫಲವಾಗಿದ್ದಾರೆ. 2ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಅವರು 21 ರನ್‌ ಬಾರಿಸಿದ್ದರು.

ಇವತ್ ನನ್ ಮದ್ವೆ, ಈಗಲೇ ಬಂದು ಬಿಡು, ಧೋನಿ ವಿವಾಹ ಆಮಂತ್ರಣ ಸೀಕ್ರೆಟ್ ಬಹಿರಂಗಪಡಿಸಿದ ರೈನಾ!

Follow Us:
Download App:
  • android
  • ios