ಜೀನ್ಸ್ ಹಾಕಿದ್ದಕ್ಕೆ ಚೆಸ್ ಟೂರ್ನಿಯಿಂದ ಮ್ಯಾಗ್ನಸ್ ಅನರ್ಹ! ಫೆಡರೇಷನ್ ಟ್ರೋಲ್ ಮಾಡಿದ ಚೆಸ್ ಲೆಜೆಂಡ್
5 ಬಾರಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ಜೀನ್ಸ್ ಪ್ಯಾಂಟ್ ಧರಿಸಿ ಬಂದಿದ್ದಕ್ಕೆ ವಿಶ್ವ ರ್‍ಯಾಪಿಡ್ ಮತ್ತು ಬ್ಲಿಟ್ಜ್ ಚೆಸ್ ಟೂರ್ನಿಯಿಂದ ಅನರ್ಹಗೊಂಡಿದ್ದಾರೆ. ವಸ್ತ್ರ ಬದಲಾಯಿಸಲು ನಿರಾಕರಿಸಿದ್ದರಿಂದ ಟೂರ್ನಿಯಿಂದ ವಜಾಗೊಳಿಸಲಾಗಿದೆ. ಇದರ ಬೆನ್ನಲ್ಲೇ ಚೆಸ್ ಫೆಡರೇಷನ್ ಅನ್ನು ಫೋಟೋ ಹಂಚಿಕೊಂಡು ಟ್ರೋಲ್ ಮಾಡಿದ್ದಾರೆ.
ನ್ಯೂಯಾರ್ಕ್: 5 ಬಾರಿ ವಿಶ್ವ ಚಾಂಪಿಯನ್, ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ವಸ್ತ್ರ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ವಿಶ್ವ ರ್‍ಯಾಪಿಡ್ ಮತ್ತು ಬ್ಲಿಟ್ಜ್ ಚೆಸ್ ಟೂರ್ನಿಯಿಂದ ಅನರ್ಹಗೊಂಡಿದ್ದಾರೆ. ಶನಿವಾರ ಟೂರ್ನಿಗೆ ಮ್ಯಾಗ್ನಸ್ ಜೀನ್ಸ್ ಪ್ಯಾಂಟ್ ಧರಿಸಿ ಬಂದಿದ್ದರು. ಇದು ಅಂತಾರಾಷ್ಟ್ರೀಯ ಚೆಸ್ ಒಕ್ಕೂಟವಾದ ಫಿಡೆ ನಿಯಮಾವಳಿಗೆ ವಿರುದ್ಧ. ಈ ಹಿನ್ನೆಲೆಯಲ್ಲಿ ಮ್ಯಾಗ್ನಸ್‌ಗೆ 200 ಡಾಲರ್ ದಂಡ ವಿಧಿಸಿ, ಉಡುಗೆ ಬದಲಾಯಿಸಲು ಆಯೋಜಕರು ಸೂಚನೆ ನೀಡಿದ್ದಾರೆ.
ಆದರೆ ವಸ್ತ್ರ ಬದಲಾಯಿಸಲು ನಿರಾಕರಿಸಿದ್ದರಿಂದ ಟೂರ್ನಿಯಿಂದ ವಜಾಗೊಳಿಸಲಾಗಿದೆ. ಇದರಿಂದಾಗಿ ಕಾರ್ಲ್‌ಸನ್ ಆಡಬೇಕಿದ್ದ 9ನೇ ಸುತ್ತಿನ ಆಟವನ್ನು ರದ್ದುಪಡಿಸಲಾಯಿತು. ಇನ್ನು ಇದರ ಬೆನ್ನಲ್ಲೇ ನಾರ್ವೆಯ ಚೆಸ್ ದಂತಕಥೆ ಮ್ಯಾಗ್ನಸ್ ಕಾರ್ಲ್‌ಸನ್ ಚೆಸ್ ಫೆಡರೇಷನ್ ಅನ್ನು ಒಂದು ಫೋಟೋ ಹಂಚಿಕೊಳ್ಳುವ ಮೂಲಕ ವ್ಯಂಗ್ಯವಾಗಿ ಟ್ರೋಲ್ ಮಾಡಿದ್ದಾರೆ.
OOTD pic.twitter.com/9reOP6zuJv
— Magnus Carlsen (@MagnusCarlsen) December 28, 2024
ಹೌದು, ಮ್ಯಾಗ್ನಸ್ ಕಾರ್ಲ್‌ಸನ್ ಜೀನ್ಸ್ ಪ್ಯಾಂಟ್ ತೊಟ್ಟಿರುವ ಫೋಟೋದೊಂದಿಗೆ OOTD(Outfit Of The Day)ಇಂದಿನ ನನ್ನ ಉಡುಗೆ ಎಂದು ಬರೆದುಕೊಂಡಿದ್ದಾರೆ. ಇನ್ನು ಮ್ಯಾಗ್ನಸ್ ಕಾರ್ಲ್‌ಸನ್ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ ಸಾಕಷ್ಟು ವೈರಲ್ಆಗಿದೆ.
ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಭಾರತಕ್ಕೆ ಆಪತ್ಬಾಂಧವರಾದ ನಿತೀಶ್-ವಾಷಿಂಗ್ಟನ್!
ಅಂತಾರಾಷ್ಟ್ರೀಯ ಚೆಸ್ ಫೆಡರೇಷನ್ ವಿಶ್ವ ರ್‍ಯಾಪಿಡ್ ಮತ್ತು ಬ್ಲಿಟ್ಜ್ ಚೆಸ್ ಟೂರ್ನಿಯಲ್ಲಿ ವಸ್ತ್ರ ಸಂಹಿತೆ ನಿಯಮವನ್ನು ಜಾರಿಗೆ ತಂದಿದೆ. ವೃತ್ತಿಪರತೆ ಹಾಗೂ ಎಲ್ಲಾ ಸ್ಪರ್ಧಿಗಳ ನಡುವೆ ಸಾಮ್ಯತೆ ಇರಲಿ ಎನ್ನುವ ಉದ್ದೇಶದಿಂದ ಈ ವಸ್ತ್ರಸಂಹಿತೆ ಜಾರಿಗೆ ತಂದಿರುವುದಾಗಿ ಫಿಡೆ ಹೇಳಿಕೊಂಡಿದೆ.
ಮೋದಿಯನ್ನು ಭೇಟಿಯಾದ ವಿಶ್ವ ಚಾಂಪಿಯನ್ ಗುಕೇಶ್
ವಿಶ್ವ ಅತ್ಯಂತ ಕಿರಿಯ ಚೆಸ್ ಚಾಂಪಿಯನ್ ಡಿ.ಗುಕೇಶ್, ಶನಿವಾರ ಪ್ರಧಾನಿ ನರೇಂದ್ರ ಮೋದಿಯನ್ನು ಅವರ ನಿವಾಸದಲ್ಲಿ ತಮ್ಮ ಪೋಷಕರ ಜೊತೆ ಭೇಟಿಯಾದರು. ಈ ವೇಳೆ ವಿಶ್ವ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಚೆಸ್ ಬೋರ್ಡ್‌ರನ್ನು ಮೋದಿಗೆ ಗುಕೇಶ್ ಉಡುಗೊರೆಯಾಗಿ ನೀಡಿದರು.
ನಿತೀಶ್ ರೆಡ್ಡಿ ಶತಕಕ್ಕೆ ಕೈಮುಗಿದು ಆನಂದಭಾಷ್ಪ ಸುರಿಸಿದ ತಂದೆ! ಮಿಲಿಯನ್ ಡಾಲರ್ ಕ್ಷಣದ ವಿಡಿಯೋ ವೈರಲ್
ಗುಕೇಶ್‌ರ ಬಹುಮಾನದ ₹4.7 ಕೋಟಿ ತೆರಿಗೆ ಮನ್ನಾ?
ನವದೆಹಲಿ: ಹಾಲಿ ವಿಶ್ವ ಚೆಸ್ ಚಾಂಪಿಯನ್, ಭಾರತದ ಡಿ.ಗುಕೇಶ್‌ಗೆ ಬಹುಮಾನ ರೂಪದಲ್ಲಿ ₹11.34 ಕೋಟಿ ಲಭಿಸಿತ್ತು. ಇದರಲ್ಲಿ ತೆರಿಗೆ ರೂಪದಲ್ಲಿ ಬರೋಬ್ಬರಿ ₹4.7 ಕೋಟಿ ರು. ಕಡಿತಗೊಳ್ಳಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಹಲವರ ಒತ್ತಾಯದ ಬಳಿಕ ಕೇಂದ್ರ ಹಣಕಾಸು ಸಚಿವಾಲಯ ಗುಕೇಶ್‌ಗೆ ತೆರಿಗೆ ವಿನಾಯಿತಿ ನೀಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ತಮಿಳುನಾಡಿನ ಮಯಿಲಾದುಥುರೈ ಸಂಸದೆ ಆರ್.ಸುಧಾ ಈ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಪತ್ರ ಬರೆದಿದ್ದು, ಗುಕೇಶ್‌ಗೆ ತೆರಿಗೆ ವಿನಾಯಿತಿ ನೀಡಬೇಕೆಂದು ಒತ್ತಾಯಿಸಿದ್ದಾರೆ. ಇದಕ್ಕೆ ಹಣಕಾಸು ಸಚಿವಾಲಯ ಒಪ್ಪಿಗೆ ಸೂಚಿಸಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ.