ಇಂಚಾನ್‌[ಸೆ.27]: ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾ​ವ​ಳಿಯ ಪುರು​ಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ಗೆ ಭಾರ​ತದ ಪಾರುಪಳ್ಳಿ ಕಶ್ಯಪ್‌ ಪ್ರವೇ​ಶಿ​ಸಿ​ದ್ದಾರೆ. 

ಕೊರಿಯಾ ಓಪನ್‌: ಮೊದಲ ಸುತ್ತಲ್ಲೇ ಸಿಂಧು, ಸೈನಾ ಔಟ್‌!

ಗುರು​ವಾರ ನಡೆದ 2ನೇ ಸುತ್ತಿನ ಪಂದ್ಯ​ದ​ಲ್ಲಿ ಕಶ್ಯಪ್‌, ಮಲೇ​ಷ್ಯಾದ ಡರೆನ್‌ ಲೀವ್‌ ವಿರುದ್ಧ 21-17, 11-21, 21-12 ಗೇಮ್‌ಗಳಲ್ಲಿ ಗೆಲು​ವು ಸಾಧಿ​ಸಿ​ದರು. 56 ನಿಮಿಷಗಳ ಕಾಲ ನಡೆದ ಪಂದ್ಯ​ದಲ್ಲಿ ಭಾರ​ತೀಯ ಆಟ​ಗಾರನಾಗಿ ಭಾರೀ ಪೈಪೋಟಿ ಎದು​ರಾ​ಯಿತು.

4 ತಿಂಗ​ಳಲ್ಲಿ 26 ಕೆ.ಜಿ ತೂಕ ಇಳಿ​ಸಿದ ಸಾನಿ​ಯಾ!

ಶುಕ್ರ​ವಾರ ನಡೆ​ಯ​ಲಿ​ರುವ ಕ್ವಾರ್ಟರ್‌ ಫೈನಲ್‌ ಪಂದ್ಯ​ದಲ್ಲಿ ಕಶ್ಯಪ್‌, ಡೆನ್ಮಾರ್ಕ್’ನ ಜಾನ್‌ ಒ ಜಾರ್ಗೆ​ನ್ಸನ್‌ ವಿರುದ್ಧ ಸೆಣ​ಸ​ಲಿ​ದ್ದಾರೆ. ಕಶ್ಯಪ್‌, ಟೂರ್ನಿ​ಯಲ್ಲಿ ಉಳಿ​ದು​ಕೊಂಡಿ​ರು​ವ ಭಾರ​ತದ ಏಕೈಕ ಸ್ಪರ್ಧಿಯಾಗಿದ್ದು ಪ್ರಶಸ್ತಿ ಗೆಲ್ಲುವ ಗುರಿ ಹೊಂದಿ​ದ್ದಾರೆ.

ಅಂತಾರಾಷ್ಟ್ರೀಯ ಸ್ವಿಮ್ಮಿಂಗ್; ನಟ ಮಾಧವನ್ ಪುತ್ರನಿಗೆ ಬೆಳ್ಳಿ ಪದಕ!

ಕೊರಿಯಾ ಓಪನ್‌ ಓಪನ್ ಮೊದಲ ಸುತ್ತಿನಲ್ಲೇ ಪಿ.ವಿ. ಸಿಂಧು, ಸೈನಾ ನೆಹ್ವಾಲ್ ಹಾಗೂ ಬಿ.ಸಾಯಿ ಪ್ರಣೀತ್‌ ಆಘಾತಕಾರಿ ಸೋಲು ಕಂಡು ಹೊರ ಬಿದ್ದಿದ್ದರು.