ಅಂತಾರಾಷ್ಟ್ರೀಯ ಸ್ವಿಮ್ಮಿಂಗ್; ನಟ ಮಾಧವನ್ ಪುತ್ರನಿಗೆ ಬೆಳ್ಳಿ ಪದಕ!
ಅಂತಾರಾಷ್ಟ್ರೀಯ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ನಟ ಮಾಧವನ್ ಪುತ್ರ ಬೆಳ್ಳಿ ಪದಕ ಸಾಧನೆ ಮಾಡಿದ್ದಾರೆ. ಮಾಧವನ್ ಮಗನ ಸಾಧನೆಯನ್ನು ಬಾಲಿವುಡ್ ಸೆಲೆಬ್ರೆಟಿಗಳು ಶ್ಲಾಘಿಸಿದ್ದಾರೆ.
ಬೆಂಗಳೂರು(ಸೆ.26): ಅಂತಾರಾಷ್ಟ್ರೀಯ ಏಷ್ಯನ್ ಏಜ್ ಗ್ರೂಪ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ನಟ ಮಾಧವನ್ ಪುತ್ರ ವೇದಾಂತ್(14) ಬೆಳ್ಳಿ ಪದಕ ಗೆದ್ದಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಸ್ವಿಮ್ಮಿಂಗ್ ಟೂರ್ನಿಯಲ್ಲಿ 4x100m ಫ್ರೀ ಸ್ಟೈಲ್ ರಿಲೇಯಲ್ಲಿ ವೇದಾಂತ್ ಹಾಗೂ ತಂಡ ಬೆಳ್ಳಿ ಪದಕ ಗೆದ್ದಿದ್ದಾರೆ.
ಇದನ್ನೂ ಓದಿ: ಏಷ್ಯನ್ ಈಜು ಕೂಟ: 2ನೇ ದಿನ ಭಾರತಕ್ಕೆ 10 ಪದಕ!
14 ವರ್ಷದ ಸ್ವಿಮ್ಮಿಂಗ್ ವಿಭಾಗದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ವೇದಾಂತ್ ಮೊದಲ ಬೆಳ್ಳಿ ಪದಕ ಗೆದ್ದಿದ್ದಾರೆ. ಇದಕ್ಕೂ ಮೊದಲು ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದರು. ಪುತ್ರನ ಸಾಧನೆ ಕುರಿತು ನಟ ಮಾಧವನ್ ಸಾಮಾಜಿಕ ಜಾಲತಾಣದಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಏಷ್ಯನ್ ಈಜು ಕೂಟ: ಮೊದಲ ದಿನವೇ ಭಾರತ ಭರ್ಜರಿ ಪದಕ ಭೇಟೆ!
ಭಾರತ ರೀಲೆ ತಂಡದಲ್ಲಿ ವೇದಾಂತ್, ಸೇರಿದಂತೆ ಉತ್ಕರ್ಷ್ ಪಟೇಲ್, ಸಾಹಿಲ್ ಲಸ್ಕರ್ ಹಾಗೂ ಶೋನ್ ಗಂಗೂಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ವೇದಾಂತ್ ಬೆಳ್ಳಿ ಪದಕ ಸಾಧನೆಗೆ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಸೇರಿದಂತೆ ಹಲವು ಗಣ್ಯರು ಶುಭಕೋರಿದ್ದಾರೆ.