ಕೊರಿಯಾ ಓಪನ್: ಮೊದಲ ಸುತ್ತಲ್ಲೇ ಸಿಂಧು, ಸೈನಾ ಔಟ್!
ವಿಶ್ವಚಾಂಪಿಯನ್ ಪಿ.ವಿ. ಸಿಂಧು, ಸೈನಾ ನೆಹ್ವಾಲ್ ಕೊರಿಯಾ ಓಪನ್ ಟೂರ್ನಿಯ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ. ಈ ಕುರಿತಾದ ವರದಿ ಇಲ್ಲಿದ ನೋಡಿ...
ಇಂಚಾನ್(ಸೆ.26): ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು, ಸೈನಾ ನೆಹ್ವಾಲ್ ಹಾಗೂ ಬಿ.ಸಾಯಿ ಪ್ರಣೀತ್, ಇಲ್ಲಿ ಬುಧವಾರದಿಂದ ಆರಂಭಗೊಂಡ ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲೇ ಸೋಲುಂಡು ಆಘಾತ ಅನುಭವಿಸಿದರು.
ವಿಶ್ವ ಚಾಂಪಿಯನ್ಶಿಪ್ ಗೆದ್ದ ಬಳಿಕ ಸಿಂಧು ಸತತ 2ನೇ ಟೂರ್ನಿಯಲ್ಲಿ ಆರಂಭಿಕ ಆಘಾತ ಕಾಣುತ್ತಿದ್ದಾರೆ. ಕಳೆದ ವಾರ ನಡೆದಿದ್ದ ಚೀನಾ ಓಪನ್‌ನ ಮೊದಲ ಸುತ್ತಿನಲ್ಲೂ ಸಿಂಧು ಪರಾಭವಗೊಂಡಿದ್ದರು. ಬುಧವಾರ ನಡೆದ ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಸಿಂಧು, ಅಮೆರಿಕದ ಬೀವೆನ್ ಜಾಂಗ್ ವಿರುದ್ಧ 7-21, 24-22, 15-21 ಗೇಮ್‌ಗಳಲ್ಲಿ ಸೋಲುಂಡರು.
ವಿಜಯ್ ಹಜಾರೆ ಟ್ರೋಫಿ: ರಾಜ್ಯಕ್ಕೆ ಮೊದಲ ಜಯದ ತವಕ!
ಸೈನಾ, ದ.ಕೊರಿಯಾದ ಕಿಮ್ ಗಾ ಯುನ್ ವಿರುದ್ಧ 21-19, 18-21, 1-8ರಲ್ಲಿ ಹಿನ್ನಡೆ ಅನುಭವಿಸಿದ್ದಾಗ ಉದರ ಬೇನೆಯಿಂದಾಗಿ ನಿವೃತ್ತಿ ಪಡೆದರು. ಡೆನ್ಮಾರ್ಕ್’ನ ಆ್ಯಂಡರ್ಸ್ ಆ್ಯಂಟೋನ್ಸೆನ್ ವಿರುದ್ಧ ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ 9-21, 7-11ರಲ್ಲಿ ಹಿಂದಿದ್ದ ಸಾಯಿ ಪ್ರಣೀತ್, ಮೊಣಕಾಲು ಗಾಯದಿಂದಾಗಿ ಹೊರನಡೆದರು.
ಕಶ್ಯಪ್‌ಗೆ ಜಯ: ಪಾರುಪಳ್ಳಿ ಕಶ್ಯಪ್ ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಚೈನೀಸ್ ತೈಪೆಯ ಲು ಛಿಯಾ ಹುಂಗ್ ವಿರುದ್ಧ 21-16, 21-16 ಗೇಮ್‌ಗಳಲ್ಲಿ ಜಯಗಳಿಸಿ 2ನೇ ಸುತ್ತಿಗೆ ಪ್ರವೇಶಿಸಿದರು.