ಮೊಹಾಲಿ(ಏ.10): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ  ಪಂದ್ಯಕ್ಕಾಗಿ ಮೊಹಾಲಿಯಲ್ಲಿ ಬೀಡು ಬಿಟ್ಟಿದೆ. 12ನೇ ಆವೃತ್ತಿಯಲ್ಲಿ RCB ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ. ತಂಡದ ಆಟಗಾರರೆಲ್ಲಾ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ತಂಡದ ಆರಂಭಿಕ ಆಟಗಾರ ಪಾರ್ಥೀವ್ ಪಟೇಲ್ ಮಾತ್ರ ಬಹುತೇಕ ಎಲ್ಲಾ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಆದರೆ ಪಾರ್ಥೀವ್ ಪ್ರತಿ ನಿಮಿಷವೂ ಆತಂಕದಲ್ಲೇ ಬ್ಯಾಟ್ ಬೀಸುತ್ತಿದ್ದಾರೆ.

ಇದನ್ನೂ ಓದಿ: RCB ಸತತ ಸೋಲು - ಕಂಗೆಟ್ಟ ಅಭಿಮಾನಿಯಿಂದ TV ಪುಡಿ ಪುಡಿ!

ಪಾರ್ಥೀವ್ ಪಟೇಲ್ ತಂದೆ ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಿದ್ದಾರೆ. ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾರ್ಥೀವ್ ಪಟೇಲ್ ತಂದೆ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಆಸ್ಪತ್ರೆ ದಾಖಲಾಗಿದ್ದಾರೆ. ವಿಶೇಷ ವೈದ್ಯರ ತಂಡ ಪಾರ್ಥೀವ್ ಪಟೇಲ್ ತಂದೆಗೆ ಚಿಕಿತ್ಸೆ ನೀಡುತ್ತಿದೆ. ಇತ್ತ ಪಾರ್ಥೀವ್ ಪಟೇಲ್ ಬ್ಯಾಟಿಂಗ್ ಮುಗಿಸಿ ಅಥವಾ ಫೀಲ್ಡಿಂಗ್ ಮುಗಿಸಿ ನೇರವಾಗಿ ಡ್ರೆಸ್ಸಿಂಗ್ ರೂಂ ತೆರಳಿ ಮೊಬೈಲ್ ಫೋನ್ ಪರಿಶೀಲಿಸುತ್ತಿದ್ದಾರೆ. ಯಾವುದೇ ನೋವಿನ ಸುದ್ದಿ ಬಾರದಿರಲಿ ಎಂದು ಪಾರ್ಥಿಸುತ್ತಾರೆ.

ಇದನ್ನೂ ಓದಿ: IPL 2019: ಸತತ 6ನೇ ಸೋಲು- ಟ್ವಿಟರ್‌ನಲ್ಲಿ RCB ಟ್ರೋಲ್!

ಇನ್ನಿಂಗ್ಸ್ ಮುಗಿಸಿದ ತಕ್ಷಣ ನಾನು ಫೋನ್ ನೋಡುತ್ತೇನೆ. ವೈದ್ಯರಿಂದ ಯಾವುದೇ ಬ್ಯಾಡ್ ನ್ಯೂಸ್ ಬರದಿಲಿ ಎಂದು ಪ್ರಾರ್ಥಿಸಿ ಫೋನ್ ನೋಡುತ್ತೇನೆ ಎಂದು ಪಾರ್ಥೀವ್ ಪಟೇಲ್ ಹೇಳಿದ್ದಾರೆ. ಪಾರ್ಥೀವ್ ಪಟೇಲ್ ತಂದೆಯ ಅನಾರೋಗ್ಯದಿಂದ ಆರಂಭಿಕ ಆಟಗಾರನಿಗೆ ಶೇಕಡಾ 100 ರಷ್ಟು ಪ್ರದರ್ಶನ ನೀಡುಲ ಸಾಧ್ಯವಾಗುತ್ತಿಲ್ಲ. ಆದರೆ RCB ತಂಡದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಏಕೈಕ ಆಟಗಾರ ಪಾರ್ಥೀವ್ ಪಟೇಲ್.

ಇದನ್ನೂ ಓದಿ: ಬೀಮರ್ ಎಸೆತ: ಸಿರಾಜ್‌ಗೆ ಗೇಟ್ ಪಾಸ್- ಚಹಾರ್‌ಗೆ ಅವಕಾಶ; ಯಾಕೆ ಹೀಗೆ?

ಮೈದಾನಕ್ಕಿಳಿದಾಗ ನಾನು ಕ್ರಿಕೆಟ್ ಬಿಟ್ಟು ಬೇರೇನು ಯೋಚನೆ ಮಾಡುವುದಿಲ್ಲ. ಆದರೆ ಇನ್ನಿಂಗ್ಸ್ ಮುಗಿಸಿ ಡ್ರೆಸ್ಸಿಂಗ್ ರೂಂ ತೆರಳುತ್ತಿದ್ದಂತೆ ನನ್ನ ಹೃದಯ ಬಡಿತ ಹೆಚ್ಚಾಗುತ್ತೆ. ಕುಟುಂಬ, ವೈದ್ಯರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ತಾಯಿ ಹಾಗೂ ಪತ್ನಿ ಆಸ್ಪತ್ರೆಯಲ್ಲೇ ಇದ್ದಾರೆ. ಚಿಕಿತ್ಸೆ ವಿಚಾರದಲ್ಲಿ ಕೆಲವೊಮ್ಮೆ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತೆ. ಅದು ತುಂಬಾ ಕಷ್ಟ ಎಂದು ಪಾರ್ಥೀವ್ ಪಟೇಲ್ ಹೇಳಿದ್ದಾರೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.