ಒಂದಲ್ಲ, ಎರಡಲ್ಲ, ಬರೋಬ್ಬರಿ 6 ಸೋಲು. ಇದು RCB ಅಭಿಮಾನಿಗಳ ನಿರೀಕ್ಷೆಯನ್ನೇ ಬುಡಮೇಲು ಮಾಡಿದೆ. ಆಟಗಾರರ ಆತ್ಮವಿಶ್ವಾಸವನ್ನೇ ಕಸಿದುಕೊಂಡಿದೆ. IPL ಟೂರ್ನಿಯಲ್ಲಿ RCB ಪ್ರದರ್ಶನ ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲಾಗುತ್ತಿದೆ.
ಬೆಂಗಳೂರು(ಏ.08): 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಸತತ 6 ಸೋಲು ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಆಟಗಾರರು ಆತ್ಮವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ. ಇತ್ತ ಫ್ಲೇ ಆಫ್ ಅವಕಾಶ ಕೂಡ ಕಠಿಣವಾಗಿದೆ. ಪ್ರಯೋಗ, ಪ್ರಯತ್ನಗಳೆಲ್ಲವೂ ಫಲ ನೀಡಿಲ್ಲ.
ಇದನ್ನೂ ಓದಿ: ಸೋತರೂ ಡೆಲ್ಲಿ ಜತೆಗೆ ನಂ.1 ಸ್ಥಾನ ಹಂಚಿಕೊಂಡ RCB..!
RCB ಇಂದು ಗೆಲ್ಲುತ್ತೆ, ನಾಳೆ ಗೆಲ್ಲುತ್ತೆ ಎಂದು ಬೆಂಬಲಿಸಿದ ಅಭಿಮಾನಿಗಳಿಗೆ ಬೇಸರವಾಗಿದೆ. ಸೋಲಿನ ನಡುವೆಯೂ ಅಭಿಮಾನಿಗಳು RCBಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ RCB ತಂಡ ಹಾಗೂ ಅಭಿಮಾನಿಗಳನ್ನು ಟ್ರೋಲ್ ಮಾಡಲಾಗುತ್ತಿದೆ.
