ಬೆಂಗಳೂರು(ಏ.09): ಕ್ರಿಕೆಟ್‌ನಲ್ಲಿ ಸೋಲು ಗೆಲುವು ಸಹಜ. ಅದರಲ್ಲೂ ಐಪಿಎಲ್ ಪಂದ್ಯದ ಫಲಿತಾಂಶ ಊಹಿಸಲು ಸಾಧ್ಯವಿಲ್ಲ. ಆದರೆ ಒಂದಲ್ಲ ಎರಡಲ್ಲ, ಸತತ 6 ಸೋಲು ಮಾತ್ರ ಯಾರೂ ಸಹಿಸುವುದಿಲ್ಲ. ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸದ್ಯದ ಪರಿಸ್ಥಿತಿ. ಇಂದು ಗೆಲ್ಲುತ್ತೆ, ನಾಳೆ ಗೆಲ್ಲುತ್ತೆ ಎಂದು ಪ್ರತಿದಿನ ತಂಡವನ್ನು ಬೆಂಬಲಿಸಿದ ಅಭಿಮಾನಿಗಳು RCB ಸೋಲಿಗೆ ಹತಾಶೆ ವ್ಯಕ್ತಪಡಿಸಿದ್ದಾರೆ. ಇದೀಗ RCB ತಂಡದ 6ನೇ ಸೋಲನ್ನು ಸಹಿಸದ ಅಭಿಮಾನಿ ಟಿವಿಯನ್ನೇ ಪುಡಿ ಪುಡಿ ಮಾಡಿದ ಘಟನೆ ನಡೆದಿದೆ.

ಇದನ್ನೂ ಓದಿ: IPL ಟೂರ್ನಿಯಲ್ಲಿ ಕನ್ನಡಿಗರದ್ದೇ ಕಮಾಲ್- ಯಾವ ತಂಡದಲ್ಲಿ ಯಾರಿದ್ದಾರೆ?

ಎಪ್ರಿಲ್ 5 ರಂದು ಕೋಲ್ಕತಾ ನೈಟ್ ರೈಡರ್ಸ್ ವಿರುದ್ದ ನಡೆದ ಪಂದ್ಯದಲ್ಲಿ RCB ಮತ್ತೆ ಸೋಲನ್ನೇ ಅಪ್ಪಿಕೊಂಡಿತು. ಪಂದ್ಯ ವೀಕ್ಷಿಸುತ್ತಿದ್ದ ಅಭಿಮಾನಿ 6ನೇ ಸೋಲಿಗೆ ರೊಚ್ಚಿಗೆದ್ದಿದ್ದ. ತಂಡ ಸೋಲಿನ ಗೆರೆ ದಾಟುತ್ತಿದ್ದಂತೆ ತಾಳ್ಮೆ ಕಳೆದುಕೊಂಡ ಅಭಿಮಾನಿ ಬ್ಯಾಟ್‌ನಿಂದ ಟಿವಿಯನ್ನು ಪುಡಿ ಮಾಡಿದ್ದಾನೆ.

ಇದನ್ನೂ ಓದಿ: IPL 2019: ಚೆನ್ನೈನಿಂದ ಫೈನಲ್ ಪಂದ್ಯ ಸ್ಥಳಾಂತರ, ಬೆಂಗ್ಳೂರಿಗೆ ಶಿಫ್ಟ್ ?

ಅಭಿಮಾನಿ ಮೊದಲ ಏಟಿಗೆ ಟಿವಿ ಪುಡಿಯಾಗಿದೆ. ಆದರೆ ಕಮೆಂಟರಿ ಕೇಳಿಸುತ್ತಿತ್ತು. ವೀಕ್ಷಕ ವಿವರಣೆಯಿಂದ ಮತ್ತೆ ರೊಚ್ಚಿಗೆದ್ದ ಅಭಿಮಾನಿ ಟಿವಿಯನ್ನು ಪುಡಿ ಮಾಡಿದ್ದಾನೆ. ಏಪ್ರಿಲ್. 13 ರಂದು ಮೊಹಾಲಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಎದುರಿಸಲಿದೆ.