ನವದೆಹಲಿ(ಫೆ.02): ಕೇಂದ್ರ ಸರ್ಕಾರ ಶುಕ್ರವಾರ ಮಧ್ಯಂತರ ಬಜೆಟ್‌ನಲ್ಲಿ ಕ್ರೀಡೆಗೆ ಹೆಚ್ಚುವರಿ ₹214.20 ಕೋಟಿ ನೆರವು ಘೋಷಿಸಿದೆ. ಕಳೆದ ವರ್ಷ ₹2002.72 ಕೋಟಿ ಹಂಚಿಕೆಯಾಗಿತ್ತು. 2019- 20ರ ಹಣಕಾಸು ವರ್ಷದಲ್ಲಿ ಕ್ರೀಡೆಗೆ ₹2216.92 ಕೋಟಿ ಮೀಸಲಿಡಲಾಗಿದೆ.

ಐಎಎಸ್ ಅಧಿಕಾರಿಗಳ ತರಬೇತಿಗೆ ಬಜೆಟ್ ಲ್ಲಿ ಭರ್ಜರಿ ಕೊಡುಗೆ

ವಿತ್ತ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಮಧ್ಯಂತರ ಬಜೆಟ್ ಮಂಡಿಸಿದರು. ಈ ಬಾರಿ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್)ಕ್ಕೆ ಮೀಸಲಿಡುವ ಮೊತ್ತ, ರಾಷ್ಟ್ರೀಯ ಕ್ರೀಡಾಭಿವೃಧ್ಧಿ ನಿಧಿ (ಎನ್‌ಎಸ್‌ಡಿಎಫ್), ಕ್ರೀಡಾಪಟುಗಳಿಗೆ ನೀಡುವ ಪ್ರೋತ್ಸಾಹ ಧನದಲ್ಲಿ ಭಾರೀ ಏರಿಕೆಯಾಗಿದೆ. ಸಾಯ್‌ಗೆ ಹೆಚ್ಚುವರಿ ₹55 ಕೋಟಿ ನೆರವು ಘೋಷಿಸಲಾಗಿದೆ. ಕಳೆದ ವರ್ಷ ₹395 ಕೋಟಿ ಹಂಚಿಕೆಯಾಗಿತ್ತು. ಆ ಮೊತ್ತವನ್ನು ಈ ಬಾರಿ ₹450 ಕೋಟಿಗೆ ಏರಿಕೆ ಮಾಡಲಾಗಿದೆ. ದೇಶದ ಕ್ರೀಡಾಪಟುಗಳಿಗೆ ರಾಷ್ಟ್ರೀಯ ಶಿಬಿರಗಳು, ಕ್ರೀಡಾ ಪರಿಕರಗಳು ಹಾಗೂ ಇನ್ನಿತರ ಸೌಕರ್ಯಗಳನ್ನು ಸಾಯ್ ಪೂರೈಸಲಿದೆ.

ಐಪಿಎಲ್ 2019: ಇಲ್ಲಿದೆ RCB ತಂಡದ ಬೆಸ್ಟ್ ಪ್ಲೇಯಿಂಗ್ ಇಲೆವೆನ್ !

ಇದೇ ವೇಳೆ, ರಾಷ್ಟ್ರೀಯ ಕ್ರೀಡಾಭಿವೃದ್ಧಿ ನಿಧಿ ₹2 ಕೋಟಿಯಿಂದ ₹70 ಕೋಟಿಗೆ ಏರಿಕೆ ಮಾಡಲಾಗಿದೆ. ಕ್ರೀಡಾಪಟುಗಳ ಪ್ರೋತ್ಸಾಹಧನವನ್ನು ₹62 ಕೋಟಿಯಿಂದ ₹89 ಕೋಟಿಗೆ ಏರಿಸಲಾಗಿದೆ. ಕ್ರೀಡಾಪಟುಗಳಿಗೆ ಬಹುಮಾನ ಮೊತ್ತ ರೂಪದಲ್ಲಿ ನೀಡಲು ಹೆಚ್ಚುವರಿ ₹94.07 ಕೋಟಿ ನೆರವು ಘೋಷಿಸಲಾಗಿದೆ. ಬಹುಮಾನ ಮೊತ್ತಕ್ಕಾಗಿ ಕಳೆದ ವರ್ಷ ಹಂಚಿಕೆಯಾಗಿದ್ದ ₹316.93 ಕೋಟಿ ಮೊತ್ತ ಈ ವರ್ಷ ₹411 ಕೋಟಿಗೆ ಏರಿಕೆಯಾಗಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಖೇಲೋ ಇಂಡಿಯಾ ಕಿರಿಯರ ಕ್ರೀಡಾಕೂಟಕ್ಕೆ ₹550.69 ಕೋಟಿ ಬದಲಿಗೆ ಮುಂದಿನ ಆವೃತ್ತಿಯಿಂದ ₹601 ಕೋಟಿ ಮೀಸಲಿಡುವುದಾಗಿ ಘೋಷಿಸಲಾಗಿದೆ.