- Home
- Sports
- Hockey
- ಆಸ್ಟ್ರೇಲಿಯಾದಲ್ಲಿ ಹೋಟೆಲ್ ಬಿಲ್ ಕಟ್ಟಲಾಗದೆ ಕಿಚನ್ ಕ್ಲೀನ್ ಮಾಡಿ ಪಾತ್ರೆ ತೊಳೆದ ಪಾಕಿಸ್ತಾನ ಹಾಕಿ ಪ್ಲೇಯರ್ಸ್!
ಆಸ್ಟ್ರೇಲಿಯಾದಲ್ಲಿ ಹೋಟೆಲ್ ಬಿಲ್ ಕಟ್ಟಲಾಗದೆ ಕಿಚನ್ ಕ್ಲೀನ್ ಮಾಡಿ ಪಾತ್ರೆ ತೊಳೆದ ಪಾಕಿಸ್ತಾನ ಹಾಕಿ ಪ್ಲೇಯರ್ಸ್!
ಆಸ್ಟ್ರೇಲಿಯಾ ಪ್ರವಾಸದಲ್ಲಿ ಪಾಕಿಸ್ತಾನದ ಹಾಕಿ ಆಟಗಾರರು ಹೋಟೆಲ್ ಬಿಲ್ ಪಾವತಿಸಲು ವಿಫಲವಾದ ಕಾರಣ ಪಾತ್ರೆ ತೊಳೆಯುವಂತಹ ಹೀನಾಯ ಸ್ಥಿತಿಯನ್ನು ಎದುರಿಸಿದ್ದಾರೆ. ಈ ಅವಮಾನಕಾರಿ ಘಟನೆಯಿಂದಾಗಿ ತಂಡದ ನಾಯಕ ಅಮ್ಮದ್ ಶಕೀಲ್ ಬಟ್, ರಾಷ್ಟ್ರೀಯ ಹಾಕಿ ಫೆಡರೇಶನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಪಾಕಿಸ್ತಾನದ ಹಾಕಿ ಆಟಗಾರರು ಹೋಟೆಲ್ ಬಿಲ್ ಪಾವತಿ ಮಾಡಲು ವಿಫಲವಾಗಿದ್ದರಿಂದ ಹೋಟೆಲ್‌ನ ಕಿಚ್ ಹಾಗೂ ಪಾತ್ರೆಗಳನ್ನು ತೊಳೆದಿದ್ದಾರೆ ಎಂದು ವರದಿಯಾಗಿದೆ. ಈ ಭಯಾನಕ ಅನುಭವದ ನಂತರ ಪಾಕಿಸ್ತಾನ ಹಾಕಿ ತಂಡದ ನಾಯಕ ಅಮ್ಮದ್ ಶಕೀಲ್ ಬಟ್ ರಾಷ್ಟ್ರೀಯ ಒಕ್ಕೂಟದ ವಿರುದ್ಧ ವಾಗ್ದಾಳಿ ನಡೆದಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಆದ ಅತ್ಯಂತ ಕೆಟ್ಟ ಅನುಭವದ ಬಳಿಕ ಬುಧವಾರ ಮುಂಜಾನೆ ಲಾಹೋರ್ ವಿಮಾನ ನಿಲ್ದಾಣಕ್ಕೆ ಹಾಕಿ ತಂಡ ವಾಪಸಾಯಿತು. ಇದರ ಬೆನ್ನಲ್ಲಿಯೇ ಬಟ್, ರಾಷ್ಟ್ರೀಯ ಒಕ್ಕೂಟದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಮತ್ತು ಆಟಗಾರರು ಈಗ ಇರುವ ಮ್ಯಾನೇಜ್‌ಮೆಂಟ್‌ನ ಅಡಿಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
"ಫೆಡರೇಶನ್‌ನ ಈಗಿನ ಮ್ಯಾನೇಜ್‌ಮೆಂಟ್‌ನೊಂದಿಗೆ ನಾವು ಕೆಲಸ ಮಾಡಲು ಸಾಧ್ಯವಿಲ್ಲ" ಎಂದು ಬಟ್ ತಿಳಿಸಿದ್ದಾರೆ. ಪಂದ್ಯ ಆಡುವ ಮುನ್ನ ನಮ್ಮ ಆಟಗಾರರು ಹೋಟೆಲ್‌ನ ಕಿಚ್ ಕ್ಲೀನ್ ಮಾಡಬೇಕಿತ್ತು. ಅಲ್ಲಿನ ಪಾತ್ರೆ ತೊಳೆಯಬೇಕಿತ್ತು. ಇಂಥ ತಂಡದಿಂದ ನಾವೇನು ನಿರೀಕ್ಷೆ ಮಾಡಲು ಸಾಧ್ಯ' ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಪಾಕಿಸ್ತಾನ ತಂಡವು ಆರಂಭದಲ್ಲಿ 12-13 ಗಂಟೆಗಳ ಕಾಲ ಸಿಡ್ನಿ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿತ್ತು ನಂತರ ಕ್ಯಾನ್‌ಬೆರಾಗೆ ಪ್ರಯಾಣಿಸಿತು. ನಗರವನ್ನು ತಲುಪಿದ ನಂತರ, ಅಲ್ಲಿನ ಹೋಟೆಲ್ ಬುಕ್ಕಿಂಗ್ ಕ್ಯಾನ್ಸಲ್ ಆಗಿತ್ತು. ಬಿಲ್‌ಗಳನ್ನು ಪಾವತಿ ಮಾಡದ ಕಾರಣ ಅವರಿಗೆ ಹೋಟೆಲ್ ರೂಮ್ ಸಿಕ್ಕಿರಲಿಲ್ಲ. ಇದರಿಂದಾಗಿ ಅವರು ತಮ್ಮ ಲಗೇಜ್‌ಗಳೊಂದಿಗೆ ರಸ್ತೆಯಲ್ಲಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಗಂಟೆಗಳ ಕಾಲ ರಸ್ತೆಯಲ್ಲಿ ಕಳೆದ ಬಳಿಕ Airbnbಯಲ್ಲಿ 13 ದಿನಗಳ ಟ್ರಿಪ್‌ಗೆ ಕೇವಲ 10 ದಿನಕ್ಕೆ ಅವರಿಗೆ ಬುಕ್ಕಿಂಗ್ ನೀಡಲಾಗಿತ್ತು. 10 ದಿನ ಬಳಿಕ, ಅವರನ್ನು ಇನ್ನಷ್ಟು ಕಳಪೆ ಹೋಟೆಲ್‌ಗೆ ಶಿಫ್ಟ್ ಮಾಡಲಾಯಿತು. ಇದರ ಪರಿಣಾಮವಾಗಿ ಆಸ್ಟ್ರೇಲಿಯಾ ಹಾಗೂ ಜರ್ಮನಿ ವಿರುದ್ಧದ ಎಲ್ಲಾ ಪಂದ್ಯಗಳಲ್ಲಿ ಸೋಲು ಕಂಡಿತು.
ಪಿಎಚ್‌ಎಫ್ ಈಗ ಸಂಕಷ್ಟದಲ್ಲಿದೆ. ಪಾಕಿಸ್ತಾನ ಕ್ರೀಡಾ ಮಂಡಳಿ (ಪಿಎಸ್‌ಬಿ) ಆಸ್ಟ್ರೇಲಿಯಾದಲ್ಲಿ ತಂಡದ ಹೋಟೆಲ್ ವೆಚ್ಚಕ್ಕಾಗಿ ನಿರ್ದಿಷ್ಟವಾಗಿ 10 ಮಿಲಿಯನ್ ರೂಪಾಯಿಗಳನ್ನು (ಸುಮಾರು $36,000) ಬಿಡುಗಡೆ ಮಾಡಿರುವುದಾಗಿ ದೃಢಪಡಿಸಿದೆ. ಆದರೆ, ಮಾಧ್ಯಮಗಳೊಂದಿಗೆ ಮಾತನಾಡಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಆಟಗಾರರಿಗೆ ಬೆದರಿಕೆ ಹಾಕಲಾಗಿದೆ ಎಂದು ಬಟ್ ಹೇಳಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

