ಐಎಎಸ್ ಅಧಿಕಾರಿಗಳ ತರಬೇತಿಗೆ ಬಜೆಟ್ ಲ್ಲಿ ಭರ್ಜರಿ ಕೊಡುಗೆ
IAS ಅಧಿಕಾರಿಗಳಿಗೆ ದೇಶೀಯ ಹಾಗೂ ವಿದೇಶಿ ತರಬೇತಿಗೆ ಕೇಂದ್ರದ ಮಧ್ಯಂತರ ಬಜೆಟ್‌ನಲ್ಲಿ 241 ಕೋಟಿ ರು. ಅನುದಾನ ಪ್ರಕಟಿಸಲಾಗಿದೆ.
ನವದೆಹಲಿ: IAS ಅಧಿಕಾರಿಗಳಿಗೆ ದೇಶೀಯ ಹಾಗೂ ವಿದೇಶಿ ತರಬೇತಿ ಮತ್ತು ಮುಂದಿನ ಹಣಕಾಸು ವರ್ಷದಲ್ಲಿ ಮೂಲ ಸೌಕರ್ಯ ಸುಧಾರಣೆಗೆ ಸಿಬ್ಬಂದಿ ಸಚಿವಾಲಯಕ್ಕೆ ಬಜೆಟ್‌ನಲ್ಲಿ 241 ಕೋಟಿ ರು. ಅನುದಾನ ಪ್ರಕಟಿಸಲಾಗಿದೆ.
ಐಎಎಸ್ ಅಧಿಕಾರಿಗಳು ಮತ್ತು ಇತರ ಅಧಿಕಾರಿಗಳಿಗೆ ತರಬೇತಿ ನೀಡುತ್ತಿರುವ ದೆಹಲಿಯ ಇನ್ ಸ್ಟಿಟ್ಯೂಟ್ ಆಫ್ ಸೆಕ್ರೇಟರಿಯೇಟ್ ಟ್ರೇನಿಂಗ್ ಆ್ಯಂಡ್ ಮ್ಯಾನೇಜ್ ಮೆಂಟ್ (ಐಎಸ್‌ಟಿಎಂ) ಹಾಗೂ ಡೆಹ್ರಾಡೂನ್‌ನಲ್ಲಿರುವ ಲಾಲ್ ಬಹಾದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಶನ್(ಎಲ್‌ಬಿಎಸ್‌ಎನ್‌ಎಎ) ಮೂಲಸೌಕರ್ಯ ಸುಧಾರಣೆಗೆ 79.06 ಕೋಟಿ ರು., ಕೇಂದ್ರೀಯ ಮಾಹಿತಿ ಆಯೋಗ ಮತ್ತು ಸಾರ್ವಜನಿಕ ಉದ್ದಿಮೆಗಳ ಆಯ್ಕೆ ಮಂಡಳಿಗೆ 30.26 ಕೋಟಿ ರು. ನೀಡಲಾಗಿದೆ.