ಬೆಂಗಳೂರು(ಫೆ.01): ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡ ಗೆಲುವಿನ ಫೇವರಿಟ್ ತಂಡವಾಗಿ ಗುರುತಿಸಿಕೊಂಡಿದೆ. ಆದರೆ ಕಳೆದ 11 ಆವೃತ್ತಿಗಳಲ್ಲಿ ಪ್ರಶಸ್ತಿ ಗೆಲ್ಲಲು ವಿಫಲವಾಗಿದೆ. ಇದೀಗ ಹರಾಜಿನಲ್ಲಿ ಹೊಸ ಆಟಗಾರರನ್ನ ಖರೀದಿಸಿ ಕೆಲ ಬದಲಾವಣೆ ಮಾಡಿರುವ RCB ಬಲಿಷ್ಠ ತಂಡವನ್ನ ಕಟ್ಟಿದೆ.

ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರಲ್ಲಿ ಅತ್ಯುತ್ತಮ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡಿದರೆ ಈ ಬಾರಿ ಪ್ರಶಸ್ತಿ ಗೆಲ್ಲಲು ಅವಕಾಶವಿದೆ. ವಿರಾಟ್ ಕೊಹ್ಲಿ ನಾಯಕತ್ವದ RCB ತಂಡದ ಅತ್ಯುತ್ತಮ ಆಡೋ ಹನ್ನೊಂದರ ಬಳಗದ ವಿವರ ಇಲ್ಲಿದೆ.

ಆರಂಭಿಕರು: ವಿರಾಟ್ ಕೊಹ್ಲಿ, ಪಾರ್ಥೀವ್ ಪಟೇಲ್
ಮಧ್ಯಮ ಕ್ರಮಾಂಕ: ಎಬಿ ಡಿವಿಲಿಯರ್ಸ್, ಶಿಮ್ರೊನ್ ಹೆಟ್ಮೆಯರ್
ಆಲ್ರೌಂಡರ್ಸ್ : ಮಾರ್ಕಸ್ ಸ್ಟೊಯಿನ್ಸ್, ಶಿವಂ ದುಬೆ, ವಾಶಿಂಗ್ಟನ್ ಸುಂದರ್
ಸ್ಪಿನ್: ಯಜುವೆಂದ್ರ ಚಹಾಲ್
ವೇಗಿಗಳು: ನಥನ್ ಕೌಲ್ಟರ್ ನೈಲ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್