Asianet Suvarna News Asianet Suvarna News

ವಿಶ್ವ ಕುಸ್ತಿ ಚಾಂಪಿ​ಯನ್‌ಶಿಪ್‌ 2020ರ ಒಲಿಂಪಿಕ್ಸ್‌ಗೆ ಭಜ​ರಂಗ್‌, ರವಿ

ವಿಶ್ವ ನಂ.1 ಕುಸ್ತಿಪಟು ಭಜರಂಗ್ ಪೂನಿಯಾ ಹಾಗೂ ರವಿ ದಹಿಯಾ 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಂಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Indian Wrestler Bajrang Punia loses controversial bout but qualifies for Tokyo Olympics 2020
Author
Kazakhstan, First Published Sep 20, 2019, 11:54 AM IST

ಕಜಕಸ್ತಾನ(ಸೆ.20): ವಿಶ್ವ ನಂ.1 ಕುಸ್ತಿ​ಪಟು ಭಜ​ರಂಗ್‌ ಪೂನಿಯಾ, ಇಲ್ಲಿ ನಡೆ​ಯು​ತ್ತಿ​ರುವ ವಿಶ್ವ ಕುಸ್ತಿ ಚಾಂಪಿ​ಯನ್‌ಶಿಪ್‌ನ 65 ಕೆ.ಜಿ ವಿಭಾ​ಗದ ಸೆಮಿ​ಫೈ​ನಲ್‌ನಲ್ಲಿ ವಿವಾ​ದಾ​ತ್ಮಕ ತೀರ್ಪಿಗೆ ಬಲಿ​ಯಾಗಿ ಚಿನ್ನದ ಪದಕ ಗೆಲ್ಲುವ ಅವ​ಕಾಶದಿಂದ ವಂಚಿತರಾದರು. ಇದಕ್ಕೂ ಮುನ್ನ ಅವರು ಸೆಮೀಸ್‌ ಪ್ರವೇ​ಶಿ​ಸುವ ಮೂಲಕ 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಪ್ರವೇಶ ಪಡೆ​ದರು.

ಇನ್ನು 57 ಕೆ.ಜಿ ವಿಭಾ​ಗದ ಸೆಮಿ​ಫೈ​ನಲ್‌ಗೇರುವ ಮೂಲಕ, ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ರವಿ ದಹಿಯಾ, ಅಂತಿಮ 4ರ ಸುತ್ತಿನ ಪಂದ್ಯ​ದಲ್ಲಿ ಪರಾ​ಭ​ವ​ಗೊಂಡರು. ಈ ಇಬ್ಬರು ಶುಕ್ರ​ವಾರ ಕಂಚಿನ ಪದ​ಕ​ಕ್ಕಾಗಿ ಸೆಣ​ಸ​ಲಿ​ದ್ದಾರೆ.

ವಿಶ್ವ ಕುಸ್ತಿ ಚಾಂಪಿ​ಯನ್‌ಶಿಪ್‌: ವಿನೇಶ್‌ ಫೋಗಾಟ್‌ಗೆ ಆಘಾತ

ಮೊದಲ ಸುತ್ತಿ​ನಿಂದಲೂ ಎದು​ರಾ​ಳಿ​ಗಳ ಮೇಲೆ ಸವಾರಿ ಮಾಡುತ್ತಾ ನಿರಾ​ಯಾಸವಾಗಿ ಸೆಮಿ​ಫೈ​ನಲ್‌ ಪ್ರವೇ​ಶಿ​ಸಿದ್ದ ಭಜ​ರಂಗ್‌ಗೆ, ಅಂತಿಮ 4ರ ಸುತ್ತಿ​ನಲ್ಲಿ ಸ್ಥಳೀಯ ಕುಸ್ತಿ​ಪಟು ದೌಲತ್‌ ನಿಯಾಜ್‌ಬೆಕೊವ್‌ ಎದು​ರಾ​ದರು. 2-9ರಿಂದ ಹಿಂದಿ​ದ್ದ ಭಜ​ರಂಗ್‌, ಕೊನೆ ಕೆಲ ಕ್ಷಣಗಳಲ್ಲಿ ಆಕ​ರ್ಷಕ ಪ್ರದ​ರ್ಶನ ನೀಡಿ 9-9ರಲ್ಲಿ ಸಮ​ಬಲ ಸಾಧಿ​ಸಿ​ದರೂ, ರೆಫ್ರಿ​ಗಳು ದೌಲತ್‌ ಪರ ತೀರ್ಪು ನೀಡಿ​ದರು. ಪಂದ್ಯದ ವೇಳೆ ಸ್ಥಳೀಯ ಕುಸ್ತಿ​ಪ​ಟು​ವಿಗೆ ಚೇತ​ರಿ​ಸಿ​ಕೊ​ಳ್ಳಲು ಹೆಚ್ಚಿನ ಸಮಯ ನೀಡಿದ ರೆಫ್ರಿ​ಗಳು, ಅವ​ರಿಂದ 3 ಬಾರಿ ತಪ್ಪಾ​ದರೂ ಭಜ​ರಂಗ್‌ಗೆ ಅಂಕ ನೀಡ​ಲಿಲ್ಲ. ಪಂದ್ಯದ ನಡುವೆಯೇ ಭಜರಂಗ್‌, ರೆಫ್ರಿ​ಗ​ಳನ್ನು ಪ್ರಶ್ನಿ​ಸಿ​ದರೂ ಯಾವುದೇ ಪ್ರಯೋ​ಜ​ನ​ವಾ​ಗ​ಲಿಲ್ಲ. ಇನ್ನು 57 ಕೆ.ಜಿ ಸೆಮಿಫೈನಲ್‌ನಲ್ಲಿ ವಿಶ್ವ ಚಾಂಪಿಯನ್‌ ರಷ್ಯಾದ ಜೌರ್‌ ಉಗೇವ್‌ ವಿರುದ್ಧ ರವಿ 4-6ರಿಂದ ಸೋಲುಂಡರು.

ಹೇಳದೆ ಕೇಳದೆ ಶಿಬಿರ ತೊರೆದ ಸಾಕ್ಷಿಗೆ ಕುಸ್ತಿ ಫೆಡರೇಷನ್‌ ಚಾಟಿ!

ಪೂಜಾ​ಗಿಲ್ಲ ಕಂಚು: ಮಹಿ​ಳೆ​ಯರ 59 ಕೆ.ಜಿ ವಿಭಾ​ಗದಲ್ಲಿ ಕಂಚಿನ ಪದ​ಕ​ಕ್ಕಾಗಿ ನಡೆದ ಪಂದ್ಯ​ದಲ್ಲಿ ಭಾರ​ತದ ಪೂಜಾ ದಂಢಾ, ಚೀನಾದ ಕ್ಸಿಂಗ್ರು ಪೀ ವಿರುದ್ಧ 3-5ರಲ್ಲಿ ಸೋಲುಂಡರು. ರಿಯೋ ಒಲಿಂಪಿಕ್ಸ್‌ ಕಂಚು ವಿಜೇತೆ ಸಾಕ್ಷಿ ಮಲಿಕ್‌ 62 ಕೆ.ಜಿ ವಿಭಾ​ಗದ ಮೊದಲ ಸುತ್ತಿ​ನಲ್ಲೇ ಸೋಲುಂಡು ನಿರಾಸೆ ಅನು​ಭ​ವಿ​ಸಿ​ದರು.

Follow Us:
Download App:
  • android
  • ios