Asianet Suvarna News Asianet Suvarna News

ವಿಶ್ವ ಕುಸ್ತಿ ಚಾಂಪಿ​ಯನ್‌ಶಿಪ್‌: ವಿನೇಶ್‌ ಫೋಗಾಟ್‌ಗೆ ಆಘಾತ

ಭಾರತದ ತಾರಾ ಕುಸ್ತಿಪಟು ವಿನೇಶ್ ಫೋಗಾಟ್ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಹಾಲಿ ಚಾಂಪಿ​ಯನ್‌ ಜಪಾನ್‌ನ ಮಯು ಮುಕ​ಯಿಡಾ ವಿರುದ್ಧ ಸೋಲುಂಡರು. ಇದರೊಂದಿಗೆ ಚಿನ್ನ ಗೆಲ್ಲುವ ಕನಸು ಭಗ್ನವಾಗಿದೆ. ಆದರೆ ಕಂಚು ಗೆಲ್ಲುವ ಅವಕಾಶವಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..  

World Wrestling Championship 2019 Vinesh Phogat Fight for Bronze
Author
Kazakhstan, First Published Sep 18, 2019, 10:06 AM IST

ನೂರ್‌-ಸುಲ್ತಾನ್‌ (ಸೆ.18): ಭಾರತದ ತಾರಾ ಕುಸ್ತಿ​ಪಟು ವಿನೇಶ್‌ ಫೋಗಾಟ್‌ ಇಲ್ಲಿ ನಡೆ​ಯು​ತ್ತಿ​ರುವ ವಿಶ್ವ ಕುಸ್ತಿ ಚಾಂಪಿ​ಯನ್‌ಶಿಪ್‌ನ 53 ಕೆ.ಜಿ ವಿಭಾಗದಲ್ಲಿ ಪ್ರಶ​ಸ್ತಿ ರೇಸ್‌ನಿಂದ ಹೊರಬಿದ್ದಿದ್ದಾರೆ. 

ಮಂಗ​ಳ​ವಾರ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಹಾಲಿ ಚಾಂಪಿ​ಯನ್‌ ಜಪಾನ್‌ನ ಮಯು ಮುಕ​ಯಿಡಾ ವಿರುದ್ಧ ವಿನೇಶ್‌ ಸೋಲುಂಡರು. ಮೊದಲ ಸುತ್ತಿನ ಪಂದ್ಯ​ದಲ್ಲಿ ವಿನೇಶ್‌ ಸ್ವೀಡನ್‌ನ ಸೋಫಿಯಾ ಮ್ಯಾಟ್ಸನ್‌ ವಿರುದ್ಧ 13-0ಯಲ್ಲಿ ಗೆದ್ದಿ​ದ್ದರು. ಮುಕ​ಯಿಡಾ ಫೈನಲ್‌ ಪ್ರವೇ​ಶಿ​ಸಿದ ಕಾರಣ, ವಿನೇಶ್‌ಗೆ ರಿಪಿಶ್ಯಾಜ್‌ ಸುತ್ತಿಗೆ ಪ್ರವೇಶ ಸಿಕ್ಕಿದ್ದು, ಕಂಚಿನ ಪದಕ ಹಾಗೂ 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಥಾನ​ಕ್ಕಾಗಿ ಹೋರಾಟ ನಡೆ​ಸ​ಲಿ​ದ್ದಾರೆ.

ಕುಸ್ತಿ ಪಟು ವಿನೇಶ್ ಪೋಗತ್ ಬದುಕು ಬದಲಿಸಿತ್ತು ಸುಷ್ಮಾ ಸ್ವರಾಜ್ ಟ್ವೀಟ್!

ರಿಪಿ​ಶ್ಯಾಜ್‌ ಸುತ್ತಿನ ಮೊದಲ ಪಂದ್ಯ​ದಲ್ಲಿ ಉಕ್ರೇನ್‌ನ ಯೂಲಿಯಾ ವಿರುದ್ಧ ಸೆಣ​ಸ​ಲಿ​ರುವ ವಿನೇಶ್‌, ಆ ಪಂದ್ಯ ಗೆದ್ದರೆ 2ನೇ ಸುತ್ತಿ​ನಲ್ಲಿ ಅಮೆ​ರಿ​ಕದ ಸಾರಾ ಹಿಲ್ಡೆಬ್ರಾಂಡ್‌ರನ್ನು ಎದು​ರಿ​ಸ​ಲಿ​ದ್ದಾರೆ. ಎರಡು ಪಂದ್ಯ​ಗ​ಳಲ್ಲಿ ಗೆದ್ದರೆ, ಕಂಚಿನ ಪದಕದ ಪಂದ್ಯಕ್ಕೆ ಪ್ರವೇಶ ಸಿಗ​ಲಿದ್ದು, ಗ್ರೀಸ್‌ನ ಪ್ರೆವೊ​ಲಾ​ರಕಿ ಜತೆ ಪೈಪೋಟಿ ನಡೆ​ಸ​ಲಿ​ದ್ದಾರೆ. 

ಕುಸ್ತಿ: ಒಂದೇ ತಿಂಗಳಲ್ಲಿ 3 ಚಿನ್ನ ಗೆದ್ದ ವಿನೇಶ್‌

ಮಹಿ​ಳೆ​ಯರ 50 ಕೆ.ಜಿ ವಿಭಾಗದ ಪ್ರಿ ಕ್ವಾರ್ಟರ್‌ನಲ್ಲಿ ಸೋಲುಂಡ ಸೀಮಾ ಬಿಸ್ಲಾ ಸಹ ರಿಪಿ​ಶ್ಯಾಜ್‌ ಸುತ್ತಿಗೆ ಪ್ರವೇಶ ಪಡೆ​ದಿದ್ದು, ಕಂಚಿನ ಪದ​ಕ​ಕ್ಕಾಗಿ ಸೆಣ​ಸ​ಲಿ​ದ್ದಾರೆ.

ಇದೇ ವೇಳೆ ಗ್ರೀಕೋ ರೋಮನ್‌ ವಿಭಾಗದಲ್ಲಿ ಭಾರತ ಪದಕ ಗೆಲ್ಲದೆ ತನ್ನ ಅಭಿ​ಯಾನ ಮುಕ್ತಾ​ಯ​ಗೊ​ಳಿ​ಸಿತು. 130 ಕೆ.ಜಿ ವಿಭಾಗದಲ್ಲಿ ರಿಪಿ​ಶ್ಯಾಜ್‌ ಸುತ್ತು ಪ್ರವೇ​ಶಿ​ಸಿದ್ದ ನವೀನ್‌, ಮೊದಲ ಪಂದ್ಯ​ದಲ್ಲಿ ಎಸ್ಟೋ​ನಿ​ಯಾದ ಹೀಕೀ ನಬಿ ವಿರುದ್ಧ ಸೋಲುಂಡು ಹೊರ​ಬಿ​ದ್ದರು.
 

Follow Us:
Download App:
  • android
  • ios