ಸಿಡ್ನಿ ಟೆಸ್ಟ್: ಸೋಲಿನ ಸುಳಿಗೆ ಸಿಲುಕಿದ ಆಸ್ಟ್ರೇಲಿಯಾಗೆ ಮಳೆ ಆಸರೆ!

ಭಾರತ ವಿರದ್ಧದ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಫಾಲೋ- ಆನ್ ಭೀತಿಗೆ ಸಿಲುಕಿದೆ.  3ನೇ ದಿನದಾಟದಲ್ಲಿ ಆಲೌಟ್ ಸನಿಹಕ್ಕೆ ಬಂದ ಆಸಿಸ್ ತಂಡವನ್ನ ಮಳೆ ಕಾಪಾಡಿದೆ. 3ನೇ ದಿನದಾಟದ ಹೈಲೈಟ್ಸ್ ಇಲ್ಲಿದೆ.

India vs Australia test Indian spinners strikes and host in trouble day 3 at sydney

ಸಿಡ್ನಿ(ಜ.05): ಭಾರತ ವಿರುದ್ದದ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರಿ ಹಿನ್ನಡೆ ಅನುಭವಿಸಿರುವ ಆಸ್ಟ್ರೇಲಿಯಾ ತಂಡಕ್ಕೆ 3ನೇ ದಿನದಾಟದಲ್ಲಿ ಮಳೆ ಆಸರೆಯಾಗಿದೆ. ಬ್ಯಾಡ್ ಲೈಟ್ ಕಾರಣದಿಂದ ನಿಗಿದಿತ ಸಮಯಕ್ಕಿಂತ ಮೊದಲೆ ಪಂದ್ಯವನ್ನ ದಿನದಾಟ ಅಂತ್ಯಗೊಳಿಸಲಾಯಿತು. ಸದ್ಯ ಆಸ್ಟ್ರೇಲಿಯಾ 6 ವಿಕೆಟ್ ನಷ್ಟಕ್ಕೆ 236 ರನ್ ಸಿಡಿಸಿದೆ. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 386ರನ್ ಹಿನ್ನಡಯಲ್ಲಿದೆ. 

ಇದನ್ನೂ ಓದಿ:  ಧೋನಿಗಿಂತ ಹೆಚ್ಚು ಸೆಂಚುರಿ ಸಿಡಿಸಲಿದ್ದಾರೆ ಪಂತ್: ಪಾಂಟಿಂಗ್ ಭವಿಷ್ಯ!

ಮೊದಲ ದಿನ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 622 ರನ್ ಸಿಡಿಸಿ ಡಿಕ್ಲೇರ್ ಮಾಡಿಕೊಂಡಿತು. ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ದಿನದಾಟದ ಅಂತ್ಯದಲ್ಲಿ ವಿಕೆಟ್ ನಷ್ಟವಿಲ್ಲದೆ 22 ರನ್ ಸಿಡಿಸಿತು. 3ನೇ ದಿನದ ಮೊದಲ ಸೆಶನ್‌ನಲ್ಲಿ ಆಸ್ಟ್ರೇಲಿಯಾ ದಿಟ್ಟ ಹೋರಾಟ ನೀಡಿತು.  

ಉಸ್ಮಾನ್ ಖವಾಜ 27 ರನ್ ಸಿಡಿಸಿ ಔಟಾದರು. ಆದರೆ ಮಾರ್ಕಸ್ ಹ್ಯಾರಿಸ್ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ನೂರರ ಗಡಿ ದಾಟಿತು. ಲಂಚ್ ವೇಳೆ ಆಸ್ಟ್ರೇಲಿಯಾ 1 ವಿಕೆಟ್ ನಷ್ಟಕ್ಕೆ 122 ರನ್ ಸಿಡಿಸಿತ್ತು. ಭೋಜನ ವಿರಾಮದ ಬಳಿಕ ಆಸ್ಟ್ರೇಲಿಯಾ ತಂಡಕ್ಕೆ ರವೀಂದ್ರ ಜಡೇಜಾ ಶಾಕ್ ನೀಡಿದರು.

ಇದನ್ನೂ ಓದಿ: ಆಸಿಸ್‌ನಲ್ಲಿ ಅಬ್ಬರಿಸುತ್ತಿರುವ ಪೂಜಾರಗೆ ಬಿಸಿಸಿಐನಿಂದ ಬಂಪರ್ ಗಿಫ್ಟ್!

ಮಾರ್ಕಸ್ ಹ್ಯಾರಿ 79 ರನ್ ಸಿಡಿಸಿ ಔಟಾದರು. ಶಾನ್ ಮಾರ್ಶ್ ಕೇವಲ 8 ರನ್ ಸಿಡಿಸಿ ನಿರ್ಗಮಿಸಿದರು. ಮಾರ್ನಸ್ ಲಬ್ಸ್‌ಶ್ಯಾಗ್ನೆ 38 ರನ್ ಕಾಣಿಕೆ ನೀಡಿದರು. ಕುಲ್ದೀಪ್ ಯಾದವ್ ಹಾಗೂ ಜಡೇಜಾ ಸ್ಪಿನ್ ಮೋಡಿಗೆ ಸಿಲುಕಿದ ಆಸಿಸ್ ವಿಕೆಟ್ ಉಳಿಸಿಕೊಳ್ಳಲು ಪರದಾಡಿತು.

ಟ್ರಾವಿಸ್ ಹೆಡ್ 20 ಹಾಗೂ ನಾಯಕ ಟಿಮ್ ಪೈನೆ 5 ರನ್ ಸಿಡಿಸಿ ನಿರ್ಗಮಿಸಿದರು. ಈ ವೇಳೆ ಬ್ಯಾಡ್ ಲೈಟ್ ಕಾರಣದಿಂದ 3ನೇ ದಿನದಾಟ ಅಂತ್ಯಗೊಳಿಸಲಾಯಿತು. ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 6 ವಿಕೆಟ್ ನಷ್ಟಕ್ಕೆ 236 ರನ್ ಸಿಡಿಸಿದೆ. ಪೀಟರ್ ಹ್ಯಾಂಡ್ಸ್‌ಕಾಂಬ್ ಹಾಗೂ ಪ್ಯಾಟ್ ಕಮಿನ್ಸ್ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ: ಭಾರತದ ಹೊಡೆತಕ್ಕೆ ನಲುಗಿದ ಆಸ್ಟ್ರೇಲಿಯಾ- ಟ್ವಿಟರಿಗರ ಅದ್ಭುತ ಪ್ರತಿಕ್ರಿಯೆ!

386 ರನ್ ಹಿನ್ನಡೆಯಲ್ಲಿರುವ ಆಸ್ಟ್ರೇಲಿಯಾ ಫಾಲೋ -ಅನ್ ಭೀತಿಯಲ್ಲಿದೆ. ಆದರೆ 3ನೇ ದಿನದಾಟದಲ್ಲಿ ಮಳೆ ಮೋಡ ಕಾರಣದಿಂದ ಆಸಿಸ್ ಆಲೌಟ್‌ನಿಂದ ಪಾರಾಗಿದೆ. ಇದೀಗ ಪಂದ್ಯದ ಕುತೂಹಲ ನಾಲ್ಕನೇ ದಿನದತ್ತ ವಾಲಿದೆ.  ಭಾರತದ ಪರ ಕುಲ್ದೀಪ್ ಯಾದವ್ 3, ರವೀಂದ್ರ ಜಡೇಜಾ 2 ಹಾಗೂ ಮೊಹಮ್ಮದ್ ಶಮಿ 1 ವಿಕೆಟ್ ಕಬಳಿಸಿದರು.

Latest Videos
Follow Us:
Download App:
  • android
  • ios