ಆಸ್ಟ್ರೇಲಿಯಾ ವಿರುದ್ದ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಸದ್ಯ 521 ರನ್ ಸಿಡಿಸೋ ಮೂಲಕ ದಾಖಲೆ ಬರೆದಿರುವ ಚೇತೇಶ್ವರ್ ಪೂಜಾರ ಟೀಂ ಇಂಡಿಯಾ ಗೆಲುವಿನ ರೂವಾರಿಯಾಗಿದ್ದಾರೆ. ಕಾಂಗರೂ ನಲೆದಲ್ಲಿ ಅಬ್ಬರಿಸುತ್ತಿರುವ ಪೂಜಾರೆಗೆ ಬಿಸಿಸಿಐ ಭರ್ಜರಿ ಗಿಫ್ಟ್ ನೀಡಲು ಸಜ್ಜಾಗಿದೆ.
ಮುಂಬೈ(ಜ.04): ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಟೆಸ್ಟ್ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಆಡಿಲೇಡ್, ಮೆಲ್ಬರ್ನ್ ಹಾಗೂ ಇದೀಗ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸೋ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಸರಣಿಯಲ್ಲಿ ಟೀಂ ಇಂಡಿಯಾ ಮುನ್ನಡೆಗೆ ಕಾರಣವಾಗಿರುವ ಪೂಜಾರಾಗೆ ಬಿಸಿಸಿಐ ಭರ್ಜರಿ ಗಿಫ್ಟ್ ನೀಡಲು ಮುಂದಾಗಿದೆ.
ಇದನ್ನೂ ಓದಿ: ಸಿಡ್ನಿ ಟೆಸ್ಟ್: ಎರಡನೇ ದಿನ ಭಾರತದ್ದೇ ದರ್ಬಾರ್
ಬಿಸಿಸಿಐ ಸಿಒಎ ವಿನೋದ್ ರೈ ಹೊಸ ಪ್ರಸ್ತಾವನೆ ಮಂದಿಟ್ಟಿದ್ದಾರೆ. ಬಿಸಿಸಿಐ ವಾರ್ಷಿಕ ಒಪ್ಪಂದದಲ್ಲಿ ಸದ್ಯ ಪೂಜಾರ ಎ ಕೆಟಗರಿಯಲ್ಲಿದ್ದಾರೆ. ಇದೀಗ ಆಸಿಸ್ ಪ್ರವಾಸದಲ್ಲಿ ಅಬ್ಬರಿಸಿದ ಪೂಜಾರಾಗೆ ಎ ಪ್ಲಸ್ ಗ್ರೇಡ್ ನೀಡಲು ಬಿಸಿಸಿಐ ಮುಂದಾಗಿದೆ. ಎ ಗ್ರೇಡ್ ಆಟಗಾರರಿಗೆ ಸದ್ಯ ವಾರ್ಷಿಕ ಸಂಭಾವನೆ 5 ಕೋಟಿ. ಇದೀಗ ಪೂಜಾರಾ ಎ ಗ್ರೇಡ್‌ನಿಂದ ಎ ಪ್ಲಸ್ ಗ್ರೇಡ್‌ಗೆ ಬಡ್ತಿ ಪಡೆದರೆ ವಾರ್ಷಿಕ 7 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ.
ಇದನ್ನೂ ಓದಿ: ಭಾರತದ ಹೊಡೆತಕ್ಕೆ ನಲುಗಿದ ಆಸ್ಟ್ರೇಲಿಯಾ- ಟ್ವಿಟರಿಗರ ಅದ್ಭುತ ಪ್ರತಿಕ್ರಿಯೆ!
ಎ ಪ್ಲಸ್ ಗ್ರೇಡ್‌ನಲ್ಲಿ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಹಾಗೂ ಶಿಖರ್ ಧವನ್ ಸ್ಥಾನ ಪಡೆದಿದ್ದಾರೆ. ಇವರೆಲ್ಲಾ ವಾರ್ಷಿಕ 7 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಇನ್ನು ಬಿ ಹಾಗೂ ಸಿ ಗ್ರೇಡ್ ಕ್ರಿಕೆಟಿಗರಿಗೆ ಕ್ರಮಾವಾಗಿ 3 ಮತ್ತು 2 ಕೋಟಿ ರೂಪಾಯಿ ನೀಡಲಾಗುತ್ತಿದೆ.
ಇದನ್ನೂ ಓದಿ: ಸಿಡ್ನಿ ಟೆಸ್ಟ್: ಪೂಜಾರ ದ್ವಿಶತಕ ಜಸ್ಟ್ ಮಿಸ್..!
ಟೆಸ್ಟ್ ಬ್ಯಾಟ್ಸ್‌ಮನ್ ಅನ್ನೋ ಕಾರಣಕ್ಕೆ ಐಪಿಎಲ್ ಹರಾಜಿನಲ್ಲಿ ಬಿಕರಿಯಾಗದೇ ಉಳಿದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಸದ್ಯ ವಿರಾಟ್ ಕೊಹ್ಲಿ ಬಳಿಕ ಗರಿಷ್ಠ ಟೆಸ್ಟ್ ಶತಕ ಸಿಡಿಸಿದ ಹೆಗ್ಗಳಿಕೆಗೂ ಪೂಜಾರ ಪಾತ್ರರಾಗಿದ್ದಾರೆ. ಕೊಹ್ಲಿ 25 ಸೆಂಚುರಿ ಸಿಡಿಸಿದ್ದರೆ, ಪೂಜಾರ 18 ಶತಕ ಸಿಡಿಸಿದ್ದಾರೆ. ಇಷ್ಟಾದರೂ ಪೂಜಾರಾಗೆ ಸರಿಯಾದ ಗೌರವ ಸಿಕ್ಕಿಲ್ಲ ಅನ್ನೋ ಮಾತುಗಳು ಬಲವಾಗಿ ಕೇಳಿಬಂದಿದೆ. ಹೀಗಾಗಿ ಪೂಜಾರಾಗೆ ಎ ಪ್ಲಸ್ ಗ್ರೇಡ್ ನೀಡಲು ಬಿಸಿಸಿಐ ಮುಂದಾಗಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 4, 2019, 9:19 PM IST