ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳ ಭರ್ಜರಿ ಬ್ಯಾಟಿಂಗ್ ಪ್ರದರ್ಶನಕ್ಕೆ ಆಸ್ಟ್ರೇಲಿಯಾ ಬೌಲರ್‌ಗಳು ಬಳಲಿ ಬೆಂಡಾಗಿ ಹೋಗಿದ್ದಾರೆ. 2 ದಿನ ಟೀಂ ಇಂಡಿಯಾ ಅಬ್ಬರಿಸಿ ಬೊಬ್ಬಿರಿಯಿತು. ಆದರೆ ಬೌಲಿಂಗ್ ಮಾಡಿ ಸುಸ್ತಾದ ಆಸಿಸ್ ಬೌಲರ್‌ಗಳ ಪರಿಸ್ಥಿತಿ ಹೇಳತೀರದು. ಈ ಕುರಿತು ಟ್ವಿಟರಿಗರ ಪ್ರತಿಕ್ರಿಯೆ ಇಲ್ಲಿದೆ.
ಸಿಡ್ನಿ(ಜ.04): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 4ನೇ ಟೆಸ್ಟ್ ಪಂದ್ಯ 2ನೇ ದಿನದಾಟ ಮುಕ್ತಾಯಗೊಂಡಿದೆ. ಆರಂಭಿಕ 2 ದಿನವೂ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಅದ್ಬುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಭಾರತ 7 ವಿಕೆಟ್ ನಷ್ಟಕ್ಕೆ 622 ರನ್ ಸಿಡಿಸಿ ಡಿಕ್ಲೇರ್ ಮಾಡಿಕೊಂಡಿದೆ.
ಇದನ್ನೂ ಓದಿ: ಏಕದಿನ ಸರಣಿಗೆ ಬಲಿಷ್ಠ ಆಸಿಸ್ ತಂಡ ಪ್ರಕಟ
ಚೇತೇಶ್ವರ್ ಪೂಜಾರ 193 ರನ್, ರಿಷಬ್ ಪಂತ್ ಅಜೇಯ 159, ರವೀಂದ್ರ ಜಡೇಜಾ 81 ರನ್ ಸಿಡಿಸಿದರು. ಮೊದಲ ದಿನದಲ್ಲಿ ಮಯಾಂಕ್ ಅರ್ಗವಾಲ್ 77 ರನ್ ದಾಖಲಿಸಿದ್ದರು. ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳ ಅಬ್ಬರಕ್ಕೆ ಆಸಿಸ್ ಬೌಲರ್‌ಗಳು ನಲುಗಿ ಹೋಗಿದ್ದಾರೆ. ಆಸಿಸ್ ಬೌಲರ್‌ಗಳ ಪರಿಸ್ಥಿತಿ ಕುರಿತು ಟ್ವಿಟರಿಗರು ಅದ್ಬುತ ಪ್ರತಿಕ್ರೆಯೆ ನೀಡಿದ್ದಾರೆ.
;
