ಮೆಲ್ಬರ್ನ್(ಡಿ.27): ಚೇತೇಶ್ವರ್ ಪೂಜಾರ ಆಕರ್ಷಕ ಶತಕ ಹಾಗೂ ನಾಯಕ ವಿರಾಟ್ ಕೊಹ್ಲಿ ದಾಖಲೆಯ ಅರ್ಧಶತಕ ಸಿಡಿಸೋ ಮೂಲಕ ಭಾರತ, ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದ ದ್ವಿತೀಯ ದಿನವೂ ಮೇಲುಗೈ ಸಾಧಿಸಿದೆ. 

2 ವಿಕೆಟ್ ನಷ್ಟಕ್ಕೆ 215 ರನ್‌ಗಳೊಂದಿಗೆ ದಿನದಾಟ ಮುಂದುವರಿಸಿದ ಟೀಂ ಇಂಡಿಯಾಗೆ ಚೇತೇಶ್ವರ್ ಪೂಜಾರ ಹಾಗೂ  ವಿರಾಟ್ ಕೊಹ್ಲಿ ಜೊತೆಯಾಟ ನೆರವಾಯಿತು. ಪೂಜಾರ 17ನೇ ಸೆಂಚುರಿ ಸಿಡಿಸಿ ಮಿಂಚಿದರು. 280 ಎಸೆತಗಳಲ್ಲಿ ಪೂಜಾರ ಶತಕ ದಾಖಲಿಸಿದರು. ಈ ಮೂಲಕ ಸುದೀರ್ಘ ಎಸೆತ ಎದುರಿಸಿ ಸೆಂಚುರಿ ಸಿಡಿಸಿದ ಹೆಗ್ಗಳಿಕೆಗೂ ಪಾತ್ರರಾದರು.

ಇದನ್ನೂ ಓದಿ: ಟೀಂ ಇಂಡಿಯಾ 443 ರನ್’ಗಳಿಗೆ ಡಿಕ್ಲೇರ್

ವಿರಾಟ್ ಕೊಹ್ಲಿ 82 ರನ್ ಸಿಡಿಸಿ ಔಟಾದರು. ಈ ಮೂಲಕ ಕೊಹ್ಲಿ ಕ್ಯಾಲೆಂಡರ್ ವರ್ಷದಲ್ಲಿ 1138ರನ್ ಸಿಡಿಸಿದರು. ಇಷ್ಟೇ ಅಲ್ಲ, ರಾಹುಲ್ ದ್ರಾವಿಡ್ ದಾಖಲೆಯನ್ನೂ ಮುರಿದರು. 2002ರ ಕ್ಯಾಲೆಂಡರ್ ವರ್ಷದಲ್ಲಿ ದ್ರಾವಿಡ್ 1137 ರನ್ ಸಿಡಿಸಿದ್ದರು. ಇದೀಗ ಈ ದಾಖಲೆಯನ್ನ ಕೊಹ್ಲಿ ಬ್ರೇಕ್ ಮಾಡಿದ್ದಾರೆ.

ಇದನ್ನೂ ಓದಿ: ಬಾಲ್ ಟ್ಯಾಂಪರಿಂಗ್ ಮಾಸ್ಟರ್ ಮೈಂಡ್ ವಾರ್ನರ್ ಅಂತೆ..!

ಶತಕ ಸಿಡಿಸೋ ವಿಶ್ವಾಸದಲ್ಲಿದ್ದ ಅಜಿಂಕ್ಯ ರಹಾನೆ 34 ರನ್ ಕಾಣಿಕೆ ನೀಡಿದರು. ಆದರೆ ಟೆಸ್ಟ್‌ಗೆ ಕಮ್‌ಬ್ಯಾಕ್ ಮಾಡಿದ ರೋಹಿತ್ ಶರ್ಮಾ 63 ರನ್ ಸಿಡಿಸೋ ಮೂಲಕ 10ನೇ ಅರ್ಧಶತಕ ದಾಖಲಿಸಿದರು. ರಿಷಬ್ ಪಂತ್ 39 ರನ್ ಸಿಡಿಸಿದರೆ, ರವೀಂದ್ರ ಜಡೇಜಾ 4 ರನ್ ಸಿಡಿಸಿ ಔಟಾದರು. ಭಾರತ 7 ವಿಕೆಟ್ ನಷ್ಟಕ್ಕೆ 443 ರನ್ ಸಿಡಿಸಿದ ವೇಳೆ ನಾಯಕ ವಿರಾಟ್ ಕೊಹ್ಲಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು.

ಇದನ್ನೂ ಓದಿ: ಐಸಿಸಿ ಹಾಲ್‌ ಆಫ್‌ ಫೇಮ್‌ಗೆ ಪಾತ್ರರಾದ ಪಾಂಟಿಂಗ್‌

ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ದಿನದಾಟದ  ಅಂತ್ಯದಲ್ಲಿ 6 ಓವರ್ ಎದುರಿಸಿತು. ವಿಕೆಟ್ ಕಬಳಿಸೋ ಲೆಕ್ಕಾಚಾರದಲ್ಲಿದ್ದ ಕೊಹ್ಲಿ ಪಡೆಗೆ ನಿರಾಸೆಯಾಯಿತು. ಕಾರಣ ಆಸಿಸ್ ಆರಂಭಿಕರು ವಿಕೆಟ್ ಕೈಚೆಲ್ಲದೆ ಕ್ರೀಸ್ ಕಚ್ಚಿ ನಿಂತರು.  ದಿನದಾಟದ ಅಂತ್ಯದಲ್ಲಿ ಆಸಿಸ್ ವಿಕೆಟ್ ನಷ್ಟವಿಲ್ಲದೆ 8 ರನ್ ಸಿಡಿಸಿದೆ.