18ನೇ ಓವರ್‌ನಲ್ಲಿ ಸುಳಿವು, ಕೊನೆಯಲ್ಲಿ ತಿರುವು, ಇಂಗ್ಲೆಂಡ್ ಮಣಿಸಿ ಫೈನಲ್ ಪ್ರವೇಶಿಸಿದ ಭಾರತ, ಬೆತೆಲ್ ಅಬ್ಬರದ ನಡುವೆ ಕೊನೆಯ ಓವರ್‌ನಲ್ಲಿ ಶಿವಂ ದುಬೆ ಮ್ಯಾಜಿಕ್ ವರ್ಕ್ ಆಗಿದೆ. ಭಾರತ ರೋಚಕವಾಗಿ ಪಂದ್ಯ ಗೆದ್ದು ಫೈನಲ್ ಪ್ರವೇಶಿಸಿದೆ.
ಮುಂಬೈ (ಮಾ.05) ಬೃಹತ್ ಮೊತ್ತ ಸಿಡಿಸಿದರೂ ಪಂದ್ಯ ಕ್ಷಣ ಕ್ಷಣಕ್ಕೂ ರೋಚಕ ತಿರುವು ಪಡೆದುಕೊಂಡಿತ್ತು. ಇಂಗ್ಲೆಂಡ್ ಸ್ಫೋಟಕ ಬ್ಯಾಟಿಂಗ್ ಭಾರತಕ್ಕೆ ತಲೆನೋವಾಗಿ ಪರಿಣಮಿಸಿತ್ತು. ಹೀಗಾಗಿ ಅಂತಿನ ನಾಲ್ಕು ಓವರ್‌ನ ಪ್ರತಿ ಎಸೆತ ಭಾರತದ ಅಭಿಮಾನಿಗಳ ಆತಂಕ ಹೆಚ್ಚಿಸಿತ್ತು. ಆದರೆ ಕೊನೆಯ ಓವರ್‌ನಲ್ಲಿ ಶತಕ ವೀರ ಬೆತೆಲ್ ವಿಕೆಟ್ ಪತನದ ಮೂಲಕ ಭಾರತ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ಅಬ್ಬರಿಸಿದ ಇಂಗ್ಲೆಂಡ್ ತಂಡವನ್ನು 246 ರನ್‌ಗೆ ಕಟ್ಟಿ ಹಾಕಿತು. ಈ ಮೂಲಕ 7 ರನ್ ಗೆಲುವು ದಾಖಲಿಸಿ ಫೈನಲ್ ಪ್ರವೇಶಿಸಿದೆ. ಮಾರ್ಚ್ 8 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ, ನ್ಯೂಜಿಲೆಂಡ್ ವಿರುದ್ದ ಟ್ರೋಫಿಗಾಗಿ ಹೋರಾಟ ನಡೆಸಲಿದೆ.
ಟೀಂ ಇಂಡಿಯಾ ಆರಂಭದಲ್ಲಿ ವಿಕೆಟ್ ಕಬಳಿಸಿದರೂ ಇಂಗ್ಲೆಂಡ್ ಅಬ್ಬರಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಲಿಲ್ಲ. ಫಿಲಿಪ್ ಸಾಲ್ಟ್ ಕೇವಲ 5 ರನ್ ಸಿಡಿಸಿ ಔಟಾದರು. ಇತ್ತ ನಾಯತ ಹ್ಯಾರಿ ಬ್ರೂಕ್ ಕೇವಲ 7 ರನ್ ಸಿಡಿಸಿ ನಿರ್ಗಮಿಸಿದರು. ಜೋಸ್ ಬಟ್ಲರ್ ಹಾಗೂ ಜೇಕಬ್ ಬೆತೆಲ್ ಜೊತೆಯಾಟದಿಂದ ಇಂಗ್ಲೆಂಡ್ ಚೇತರಿಸಿಕೊಂಡಿತು. ಬಟ್ಲರ್ 25 ರನ್ ಸಿಡಿಸಿ ಔಟಾದರು. ಆದರೆ ಬೆತೆಲ್ ಅಬ್ಬರ ಮುಂದುವರಿದಿತ್ತು.
ಟಾಮ್ ಬಾತಮ್ 17 ರನ್ ಸಿಡಿಸಿ ಔಟಾದರೂ ಬೆತೆಲ್ ಹೋರಾಟ ಭಾರತಕ್ಕೆ ತಲೆನೋವಾಗಿ ಪರಿಣಮಿಸಿತ್ತು. ವಿಲ್ ಜ್ಯಾಕ್ಸ್ ಜೊತೆ ಅಬ್ಬರಿಸಿದ ಬೆತೆಲ್ ಹಾಫ್ ಸೆಂಚುರಿ ಸಿಡಿಸಿದರು. ಇತ್ತ ವಿಲ್ ಜ್ಯಾಕ್ಸ್ 20 ಎಸೆತದಲ್ಲಿ 35 ರನ್ ಸಿಡಿಸಿ ಔಟಾದರು. ಆದರೆ ಬೆತೆಲ್ ಅಬ್ಬರ ಹಾಗೇ ಮುಂದುವರಿದಿತ್ತು. ಇದು ಭಾರತಕ್ಕೆ ಸವಾಲಾಗಿ ಪರಿಣಿಸಿತ್ತು. ಬೆತೆಲ್ ಅಬ್ಬರಿಂದ ಇಂಗ್ಲೆಂಡ್ ಗೆಲುವಿಗೆ ಕೊನೆಯ 24 ಎಸೆತದಲ್ಲಿ 61 ರನ್ ಅವಶ್ಯಕತೆ ಇತ್ತು. ಪಂದ್ಯದ ಗತಿ ಬದಲಾಗಿತ್ತು. ಆತಂಕ ಹೆಚ್ಚಾಗಿತ್ತು.
ಸೆಂಚುರಿ ಸಿಡಿಸಿದ ಬೆತೆಲ್
ಬೆತೆಲ್ ಹಾಗೂ ಸ್ಯಾಮ್ ಕುರನ್ ಜೊತೆಯಾಟ ಕ್ಷಣಕ್ಷಣಕ್ಕೂ ಟೀಂ ಇಂಡಿಯಾ ಅಭಿಮಾನಿಗಳ ತಲೆನೋವು ಹೆಚ್ಚಿಸಿತ್ತು. ಟಿ20 ವಿಶ್ವಕಪ್ ಫೈನಲ್ ಕನಸಿನ ಹಾದಿ ಕಠಿಣವಾಗ ತೊಡಗಿತ್ತು. ಬೆತೆಲ್ ಸಿಕ್ಸರ್ ಬೌಂಡರಿ ಅಬ್ಬರಿಂದ ಅಂತಿಮ 18 ಎಸೆತದಲ್ಲಿ ಇಂಗ್ಲೆಂಡ್‌ಗೆ ಕೇವಲ 45ರನ್ ಬೇಕಿತ್ತು. 18ನೇ ಓವರ್‌ನಲ್ಲಿ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ತಂಡದ ರನ್ ವೇಗಕ್ಕೆ ಬ್ರೇಕ್ ಹಾಕಿದರು. ಹೀಗಾಗಿ ಇಂಗ್ಲೆಂಡ್ ಮೇಲೆ ಒತ್ತಡ ಹೆಚ್ಚಿತು. ಆದರೆ 19ನೇ ಓವರ್‌ನ ಮೊದಲ ಎಸೆತತವೇ ಸಿಕ್ಸರ್. ಇತ್ತ ಬೆತೆಲ್ 46 ಎಸೆತದಲ್ಲಿ ಸೆಂಚುರಿ ಸಿಡಿಸಿ ಅಬ್ಬರಿಸಿದರು. ಅಲ್ಲಿಗೆ ಪಂದ್ಯ ಇಂಗ್ಲೆಂಡ್ ಕಡೆ ವಾಲಿತ್ತು. ಮರು ಎಸೆತದಲ್ಲೇ ಸ್ಯಾಮ್ ಕುರನ್ ವಿಕೆಟ್ ಪತನಗೊಂಡಿತು. ಅಷ್ಟರಲ್ಲೇ ಪಂದ್ಯದ ಗತಿ ಬದಲಾಗಿತ್ತು. ಆದರೆ ಬೆತೆಲ್ ಕ್ರೀಸ್‌ನಲ್ಲಿರುವುದೇ ಆತಂಕ ಹೆಚ್ಚಿಸಿತ್ತು.
ಅಂತಿಮ 6 ಎಸೆತದಲ್ಲಿ ಇಂಗ್ಲೆಂಡ್‌ಗೆ 30 ರನ್ ಅವಶ್ಯಕತೆ ಇತ್ತು. ಶಿವಂ ದುಬೆ ಮೊದಲ ಎಸೆತದಲ್ಲಿ ಬೆತೆಲ್ ವಿಕೆಟ್ ಪತನಗೊಂಡಿತು. ೆತೆಲ್ 103 ರನ್ ಸಿಡಿಸಿ ಔಟಾದರು. ಜೋಫ್ರಾ ಆರ್ಚರ್ 2 ಸಿಕ್ಸರ್ ಸಿಡಿಸಿ ಅಬ್ಬರಿಸಿದರು. ಇಂಗ್ಲಂಡ್ 246 ರನ್ ಸಿಡಿಸಿತು. ಈ ಮೂಲಕ ಭಾರತ 7ರನ್ ಗೆಲುವು ದಾಖಲಿಸಿ ಫೈನಲ್ ಪ್ರವೇಶಿಸಿತು.
ಭಾರತ ಇನ್ನಿಂಗ್ಸ್
ಟಾಸ್ ಸೋತು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಅಭಿಷೇಕ್ ಶರ್ಮಾ ನಿರಾಸೆ ಮೂಡಿಸಿದ್ದರು. ಇತತ್ ಸಂಜು ಸ್ಯಾಮ್ಸನ್ ಮತ್ತೆ ಸ್ಫೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸಿದರು. ಸಂಜು ಸ್ಯಾಮ್ಸನ್ 89 ರನ್ ಸಿಡಿಸಿದರು. ಇಶಾನ್ ಕಿಶನ್ 39, ಶಿವಂ ದುಬೆ 43, ಹಾರ್ದಿಕ್ ಪಾಂಡ್ಯ 27 ರನ್ ಹಾಗೂ ತಿಲಕ್ ವರ್ಮಾ 21 ರನ್ ಸಿಡಿಸಿ ಔಟಾದರು. ಭಾರತ 7 ವಿಕೆಟ್ ನಷ್ಟಕ್ಕೆ 237 ರನ್ ಸಿಡಿಸಿತು.


