ಬಾಲ್ ಟ್ಯಾಂಪರಿಂಗ್ ಮಾಸ್ಟರ್ ಮೈಂಡ್ ವಾರ್ನರ್ ಅಂತೆ..!

ಚೆಂಡು ವಿರೂಪ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ನಾಯಕ ಸ್ಮಿತ್‌ ಮತ್ತು ಉಪನಾಯಕ ಡೇವಿಡ್‌ ವಾರ್ನರ್‌ಗೆ ಒಂದು ವರ್ಷ ನಿಷೇಧ ಹಾಗೂ ಬೆನ್‌ ಕ್ರಾಫ್ಟ್‌ಗೆ 9 ತಿಂಗಳು ನಿಷೇಧ ಹೇರಲಾಗಿತ್ತು.

Australian Cricketer Cameron Bancroft confirms David Warner asked him to tamper with ball

ಮೆಲ್ಬರ್ನ್‌(ಡಿ.27): ಚೆಂಡು ವಿರೂಪಗೊಳಿಸಲು ಉತ್ತೇಜಿಸಿದ್ದೇ ಡೇವಿಡ್‌ ವಾರ್ನರ್‌. ತಂಡದಲ್ಲಿ ಸ್ಥಾನ ಗಟ್ಟಿಗೊಳಿಸಿಕೊಳ್ಳಲು ಮತ್ತು ಮೌಲ್ಯ ಹೆಚ್ಚಿಸಿಕೊಳ್ಳಲು ಚೆಂಡು ವಿರೂಪಕ್ಕೆ ಪ್ರಯತ್ನಿಸಬೇಕಾಯಿತು ಎಂದು ನಿಷೇಧಿತ ಆಸೀಸ್‌ ಕ್ರಿಕೆಟಿಗ ಬೆನ್‌ ಕ್ರಾಫ್ಟ್‌ ಹೇಳಿದ್ದಾರೆ. 

ಆಸ್ಟ್ರೇಲಿಯಾ ಬಾಲ್ ಟ್ಯಾಂಪರಿಂಗ್ ಪ್ರಕರಣಕ್ಕೆ ಹೊಸ ಟ್ವಿಸ್ಟ್!

ಚೆಂಡು ವಿರೂಪ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ನಾಯಕ ಸ್ಮಿತ್‌ ಮತ್ತು ಉಪನಾಯಕ ಡೇವಿಡ್‌ ವಾರ್ನರ್‌ಗೆ ಒಂದು ವರ್ಷ ನಿಷೇಧ ಹಾಗೂ ಬೆನ್‌ ಕ್ರಾಫ್ಟ್‌ಗೆ 9 ತಿಂಗಳು ನಿಷೇಧ ಹೇರಲಾಗಿತ್ತು. ‘ಪಂದ್ಯದಲ್ಲಿ ನಾವಿದ್ದ ಪರಿಸ್ಥಿತಿ ತೀರಾ ಕೆಟ್ಟದಾಗಿತ್ತು. ಈ ವೇಳೆ ಚೆಂಡು ವಿರೂಪಗೊಳಿಸಿ ಬೌಲರ್‌ಗಳಿಗೆ ಅನುಕೂಲ ಮಾಡಿಕೊಡುವಂತೆ ವಾರ್ನರ್‌ ಉತ್ತೇಜಿಸಿದರು’ ಎಂದು ಬ್ಯಾನ್‌ಕ್ರಾಫ್ಟ್‌ ಹೇಳಿದ್ದಾರೆ.

ಬಾಲ್ ಟ್ಯಾಂಪರ್ ಬಳಿಕ ಯೋಗ ಶಿಕ್ಷಕನಾಗಲು ಬಯಸಿದ್ದೆ-ಬ್ಯಾನ್‌ಕ್ರಾಫ್ಟ್ !

2018ರ ಮಾರ್ಚ್’ನಲ್ಲಿ ಕೇಪ್’ಟೌನ್’ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಬೆನ್‌ ಕ್ರಾಫ್ಟ್‌ ಚೆಂಡನ್ನು ಸ್ಯಾಂಡ್ ಪೇಪರ್’ನಿಂದ ಉಜ್ಜಿ ಚೆಂಡು ವಿರೂಪಗೊಳಿಸಿದ್ದರು. 

ಮಾರ್ಚ್’ನಲ್ಲಿ ಪಾಕ್‌ ವಿರುದ್ಧ ಸ್ಮಿತ್‌, ವಾರ್ನರ್‌ ಕಣಕ್ಕೆ?

Latest Videos
Follow Us:
Download App:
  • android
  • ios