ಮೆಲ್ಬರ್ನ್‌(ಡಿ.27): ಆಸ್ಪ್ರೇಲಿಯಾದ ಸಾರ್ವಕಾಲಿಕ ಶ್ರೇಷ್ಠ ನಾಯಕ ರಿಕಿ ಪಾಂಟಿಂಗ್‌ ಬುಧವಾರ ಐಸಿಸಿ ಹಾಲ್‌ ಆಫ್‌ ಫೇಮ್‌ಗೆ ಸೇರ್ಪಡೆಗೊಂಡಿದ್ದಾರೆ.  44 ವರ್ಷದ ಪಾಂಟಿಂಗ್‌ಗೆ ಭಾರತ-ಆಸ್ಪ್ರೇಲಿಯಾ ನಡುವಿನ 3ನೇ ಟೆಸ್ಟ್‌ ವೇಳೆ ಈ ಗೌರವ ನೀಡಲಾಯಿತು. ಈ ವರ್ಷ ಹಾಲ್‌ ಆಫ್‌ ಫೇಮ್‌ಗೆ ಸೇರ್ಪಡೆಗೊಳ್ಳುತ್ತಿರುವ 3ನೇ ಕ್ರಿಕೆಟಿಗ ಪಾಂಟಿಂಗ್‌.

ದ್ರಾವಿಡ್‌ಗೆ ಹಾಲ್ ಆಫ್ ಫೇಮ್ ಗೌರವ-ಸಚಿನ್ ತೆಂಡೂಲ್ಕರ್‌ಗೆ ಯಾಕಿಲ್ಲ?

ಆಸ್ಟ್ರೇಲಿಯಾ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕ ಪಾಂಟಿಂಗ್ 168 ಟೆಸ್ಟ್ ಪಂದ್ಯಗಳಲ್ಲಿ 41 ಶತಕ ಸೇರಿದಂತೆ 13,378 ರನ್ ಬಾರಿಸಿದ್ದರೆ, 375 ಏಕದಿನ ಪಂದ್ಯಗಳಲ್ಲಿ 30 ಶತಕ ಸಹಿತ 13,704 ರನ್ ಬಾರಿಸಿದ್ದಾರೆ, ಟಿ20 ಕ್ರಿಕೆಟ್’ನಲ್ಲಿ 17 ಪಂದ್ಯಗಳನ್ನಾಡಿ 401 ರನ್ ಬಾರಿಸಿದ್ದಾರೆ.

ರಾಹುಲ್ ದ್ರಾವಿಡ್‌ಗೆ ಅತ್ಯುನ್ನತ ಐಸಿಸಿ ಹಾಲ್ ಆಫ್ ಫೇಮ್ ಗೌರವ!

ಇದಕ್ಕೂ ಮುನ್ನ ಭಾರತದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಹಾಗೂ ಇಂಗ್ಲೆಂಡ್‌ನ ಮಹಿಳಾ ಆಟಗಾರ್ತಿ ಕ್ಲಾರಿ ಟೇಲರ್‌ಗೆ ಐಸಿಸಿ ಗೌರವ ದೊರೆತಿತ್ತು. ಈ ವರೆಗೂ ಒಟ್ಟು 87 ಕ್ರಿಕೆಟಿಗರು ಹಾಲ್‌ ಆಫ್‌ ಫೇಮ್‌ಗೆ ಸೇರ್ಪಡೆಗೊಂಡಿದ್ದು, ಪಾಂಟಿಂಗ್‌ 25ನೇ ಆಸ್ಪ್ರೇಲಿಯಾ ಆಟಗಾರ ಎನಿಸಿದ್ದಾರೆ.