ಸಂಜು ಸೇರಿ ಭಾರತದ ಸವಾರಿ, ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ 254 ರನ್ ಗುರಿ. ವಾಂಖೆಡೆಯಲ್ಲಿನ ಸ್ಫೋಟಕ ಬ್ಯಾಟಿಂಗ್‌ನಿಂದ ಭಾರತ ಟಿ20 ವಿಶ್ವಕಪ್‌ನಲ್ಲಿ ದಾಖಲೆಯ 253 ರನ್ ಸಿಡಿಸಿದೆ. 

ಮುಂಬೈ (ಮಾ.05) ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಫೋಟಕ ಬ್ಯಾಟಿಂಗ್‌ಗೆ ಇಂಗ್ಲೆಂಡ್ ಕಂಗಾಲಾಗಿದೆ. ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ಶಿವಂ ದುಬೆ, ಹಾರ್ದಿಕ್ ಪಾಂಡ್ಯ ಅಬ್ಬರದಿಂದ ಭಾರತ 7 ವಿಕೆಟ್ ಕಳೆದುಕೊಂಡು 253 ರನ್ ಸಿಡಿಸಿದೆ. ಈ ಮೂಲಕ ಇಂಗ್ಲೆಂಡ್ ತಂಡಕ್ಕೆ ಬೃಹತ್ ಟಾರ್ಗೆಟ್ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಂಜು ಸ್ಯಾಮ್ಸನ್ ಅಬ್ಬ

ಸೆಮಿಫೈನಲ್ ಪಂದ್ಯದಲ್ಲಿ ಭಾರತ ಟಾಸ್ ಸೋತಿತ್ತು. ಹೀಗಾಗಿ ಮೊದಲು ಬ್ಯಾಟಿಂಗ್ ಇಳಿಯಬೇಕಾದ ಅನಿವಾರ್ಯತೆ ಎದುರಾಗಿತ್ತು. ಆದರೆ ಸಂಜು ಸ್ಯಾಮ್‌ಸನ್ ಆರಂಭ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿತ್ತು. ಆದರೆ ಇಂದು ಕೂಡ ಅಭಿಷೇಕ್ ಶರ್ಮಾ ನಿರಾಸೆ ಮೂಡಿಸಿದರು. ಕೇವಲ 9 ರನ್ ಸಿಡಿಸಿ ನಿರ್ಗಮಿಸಿದರು. ಇಶಾನ್ ಕಿಶನ್ ಜೊತೆ ಸೇರಿದ ಸಂಜು ಸ್ಯಾಮ್ಸನ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿರು. ಇತ್ತ ಸಂಜು ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು.

ಇಶಾನ್ ಕಿಶನ್ 18 ಎಸೆತದಲ್ಲಿ 39 ರನ್ ಸಿಡಿಸಿ ಔಟಾದರು. ಇತ್ತ ಸಂಜು ಸ್ಯಾಮ್ಸನ್ 42 ಎಸೆತದಲ್ಲಿ 89 ರನ್ ಸಿಡಿಸಿದರು. ಶತಕದ ಸನಿಹದಲ್ಲಿ ಔಟಾದರು. ನಾಯಕ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಆರ್ಡರ್ ಬದಲಾಯಿಸಿದೂರ ಅಬ್ಬರಿಸಲಿಲ್ಲ. 11 ರನ್ ಸಿಡಿಸಿ ಔಟಾದರು. ಶಿವಂ ದುಬೆ ಅಬ್ಬರದಿಂದ ಭಾರತ ಮತ್ತೆ ರನ್ ವೇಗ ಹೆಚ್ಚಿಸಿತ್ತು. ದುಬೆ 25 ಎಸೆತದಲ್ಲಿ 43 ರನ್ ಸಿಡಿಸಿದರು.

ಹಾರ್ದಿಕ್ ಪಾಂಡ್ಯ ಹಾಗೂ ತಿಲಕ್ ವರ್ಮಾ ಜೊತೆಯಾಟ ಭಾರತಕ್ಕೆ ನೆರವಾಯಿತು. ತಿಲಕ್ ವರ್ಮಾ 21 ರನ್ ಸಿಡಿಸಿದರು. ಹಾರ್ದಿಕ್ ಪಾಂಡ್ಯ 27 ರನ್ ಸಿಡಿಸಿ ರನೌಟ್ ಆದರು. ಭಾರತ 7 ವಿಕೆಟ್ ನಷ್ಟಕ್ಕೆ 253 ರನ್ ಸಿಡಿಸಿತು.