ಮೆಲ್ಬರ್ನ್[ಡಿ.27]: ಟೀಂ ಇಂಡಿಯಾ ಬ್ಯಾಟ್ಸ್’ಮನ್’ಗಳ ಜವಾಬ್ದಾರಿಯುತ ಪ್ರದರ್ಶನದ ನೆರವಿನಿಂದ ಮೊದಲ ಇನ್ನಿಂಗ್ಸ್’ನಲ್ಲಿ ವಿರಾಟ್ ಕೊಹ್ಲಿ ಪಡೆ 7 ವಿಕೆಟ್‌ ಕಳೆದುಕೊಂಡು 443 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿದೆ.

ಟಾಸ್ ಗೆದ್ದು ಮೊದಲು ಆಯ್ದುಕೊಂಡ ಭಾರತ ಮೊದಲ ದಿನದಂತ್ಯಕ್ಕೆ 2 ವಿಕೆಟ್ ಕಳೆದುಕೊಂದು 215 ರನ್ ಬಾರಿಸಿತ್ತು. ಇನ್ನು ಎರಡನೇ ದಿನದಾಟದಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಭಾರತಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು.

ನಾಯಕ ವಿರಾಟ್ ಕೊಹ್ಲಿ 82 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಪೂಜಾರ 17ನೇ ಟೆಸ್ಟ್ ಶತಕ ಸಿಡಿಸಿ ಸಂಭ್ರಮಿಸಿದರು. ಬರೋಬ್ಬರಿ 319 ಎಸೆತಗಳಲ್ಲಿ 10 ಬೌಂಡರಿ ಸಹಿತ 106 ರನ್ ಬಾರಿಸಿ ಪೂಜಾರ ವಿಕೆಟ್ ಒಪ್ಪಿಸಿದರು. ಆ ಬಳಿಕ ಜತೆಯಾದ ರಹಾನೆ[34 ರನ್]-ರೋಹಿತ್ ಜೋಡಿ ತಂಡಕ್ಕೆ ಉತ್ತಮ ರನ್ ಕಾಣಿಕೆ ನೀಡಿತು. ರೋಹಿತ್ ಶರ್ಮಾ ಅಜೇಯ 63 ರನ್ ಸಿಡಿಸಿದರೆ, ರಿಷಭ್ ಪಂತ್ 39 ರನ್ ಚಚ್ಚಿ ತಂಡದ ಮೊತ್ತವನ್ನು ನಾನೂರರ ಗಡಿ ದಾಟಿಸಿದರು.

ಸಂಕ್ಷಿಪ್ತ ಸ್ಕೋರ್:
ಭಾರತ: 443/7
ಚೇತೇಶ್ವರ್ ಪೂಜಾರ: 106
ಪ್ಯಾಟ್ ಕಮ್ಮಿನ್ಸ್: 72/

[* ವಿವರ ಅಪೂರ್ಣ]