Asianet Suvarna News Asianet Suvarna News

ಅನಧಿಕೃತ ಟೆಸ್ಟ್‌: ಭಾರತಕ್ಕೆ 1-0 ಸರಣಿ ಜಯ

ಭಾರತ ’ಎ’ ಹಾಗೂ ದಕ್ಷಿಣ ಆಫ್ರಿಕಾ ’ಎ’ ತಂಡಗಳ ನಡುವಿನ 2ನೇ ಅನಧಿಕೃತ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಇದರೊಂದಿಗೆ ಎರಡು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಅಂತರದಲ್ಲಿ ಕೈವಶ ಮಾಡಿಕೊಂಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

India A vs South Africa 2nd unofficial Test ends in a draw
Author
Mysuru, First Published Sep 21, 2019, 9:52 AM IST

ಮೈಸೂರು[ಸೆ.21]: ಆರಂಭಿಕ ಬ್ಯಾಟ್ಸ್‌ಮನ್‌ ಪ್ರಿಯಾಂಕ್‌ ಪಾಂಚಾಲ್‌ ಶತಕ ಹಾಗೂ ಕರ್ನಾಟಕದ ಕರುಣ್‌ ನಾಯರ್‌ ಅಜೇಯ ಅರ್ಧಶತಕದ ನೆರವಿನಿಂದ ಭಾರತ ‘ಎ’, ದಕ್ಷಿಣ ಆಫ್ರಿಕಾ ‘ಎ’ ವಿರುದ್ಧದ 2ನೇ ಅನಧಿಕೃತ ಟೆಸ್ಟ್‌ ಪಂದ್ಯ ಡ್ರಾದಲ್ಲಿ ಅಂತ್ಯವಾಗಿದೆ. ಇದರೊಂದಿಗೆ ಭಾರತ ತಂಡ 2 ಪಂದ್ಯಗಳ ಸರಣಿಯಲ್ಲಿ 1-0 ಯಿಂದ ಸರಣಿ ಜಯಿಸಿದೆ. ಇದಕ್ಕೂ ಮುನ್ನ ನಡೆದ 5 ಅನಧಿಕೃತ ಏಕದಿನ ಸರಣಿಯಲ್ಲೂ ಭಾರತ 4-1 ರಿಂದ ಸರಣಿ ಜಯಿಸಿತ್ತು. ಆಫ್ರಿಕಾ, ಏಕದಿನ ಹಾಗೂ ಟೆಸ್ಟ್‌ನಲ್ಲಿ ಸೋಲುಂಡು ನಿರಾಸೆಯಿಂದ ತವರಿಗೆ ಮರಳಿದೆ.

2ನೇ ಅನ​ಧಿ​ಕೃತ ಟೆಸ್ಟ್‌: ಭಾರತಕ್ಕೆ ದ. ಆ​ಫ್ರಿಕಾ ತಿರು​ಗೇ​ಟು

4ನೇ ಹಾಗೂ ಕೊನೆಯ ದಿನವಾದ ಶುಕ್ರವಾರ 17 ರನ್‌ಗಳ ಮುನ್ನಡೆಯೊಂದಿಗೆ ವಿಕೆಟ್‌ ನಷ್ಟವಿಲ್ಲದೇ 14 ರನ್‌ಗಳಿಂದ 2ನೇ ಇನ್ನಿಂಗ್ಸ್‌ ಮುಂದುವರೆಸಿದ ಭಾರತ ತಂಡ, ಪಾಂಚಾಲ್‌ (109), ಅಭಿಮನ್ಯು ಈಶ್ವರನ್‌ (37) ಹಾಗೂ ಕರುಣ್‌ ನಾಯರ್‌ (51*) ರನ್‌ನಿಂದಾಗಿ ದಿನದಂತ್ಯಕ್ಕೆ 3 ವಿಕೆಟ್‌ ನಷ್ಟಕ್ಕೆ 202 ರನ್‌ಗಳಿಸಿತು. ಭರವಸೆ ಬ್ಯಾಟ್ಸ್‌ಮನ್‌ ಶುಭ್‌ಮನ್‌ ಗಿಲ್‌ ಶೂನ್ಯಕ್ಕೆ ನಿರ್ಗಮಿಸಿ ನಿರಾಸೆ ಮೂಡಿಸಿದರು. ಆಫ್ರಿಕಾ ಪರ ಡೇನ್‌ ಪೆಡಿಟ್‌ 2 ವಿಕೆಟ್‌ ಪಡೆದರು.

2ನೇ ಅನ​ಧಿ​ಕೃತ ಟೆಸ್ಟ್‌: ಭಾರತ ‘ಎ’ ಬೃಹತ್‌ ಮೊತ್ತ

70 ಓವರ್‌ಗಳ ಆಟ ನಡೆದರೂ ಭಾರತದ ಎಲ್ಲಾ ವಿಕೆಟ್‌ ಕೀಳುವಲ್ಲಿ ಆಫ್ರಿಕಾ ಬೌಲರ್‌ಗಳು ವಿಫಲರಾದರು. ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು. ಭಾರತ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 17 ರನ್‌ಗಳ ಅಲ್ಪ ಮುನ್ನಡೆ ಸಾಧಿಸಿತ್ತು.

ಸ್ಕೋರ್‌:

ಭಾರತ ‘ಎ’ 417 ಮತ್ತು 202/3,

ದ.ಆಫ್ರಿಕಾ ‘ಎ’ 400/10

ಪಂದ್ಯಶ್ರೇಷ್ಠ: ಏಡನ್‌ ಮಾರ್ಕ್ರಮ್‌
 

Follow Us:
Download App:
  • android
  • ios