ಮೈಸೂರು(ಸೆ.19): ದಕ್ಷಿಣ ಆಫ್ರಿಕಾ ‘ಎ​’ ವಿರು​ದ್ಧದ 2ನೇ ಅನ​ಧಿ​ಕೃತ ಟೆಸ್ಟ್‌ನಲ್ಲಿ ಭಾರತ ‘ಎ’ ತಂಡ ಮೇಲುಗೈ ಸಾಧಿ​ಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 417 ರನ್‌ಗಳ ಬೃಹತ್‌ ಮೊತ್ತ ಗಳಿ​ಸಿದ ಭಾರತ ತಂಡ, 2ನೇ ದಿನ​ದಂತ್ಯಕ್ಕೆ ದ.ಆ​ಫ್ರಿಕಾ ತಂಡವನ್ನು 5 ವಿಕೆಟ್‌ಗೆ 159 ರನ್‌ಗಳಿಗೆ ನಿಯಂತ್ರಿ​ಸಿತು. ಇನ್ನೂ 258 ರನ್‌ ಹಿನ್ನಡೆಯಲ್ಲಿ​ರುವ ಪ್ರವಾಸಿ ತಂಡ, ದೊಡ್ಡ ಮೊತ್ತದ ಮುನ್ನಡೆ ಬಿಟ್ಟು​ಕೊ​ಡುವ ಭೀತಿಗೆ ಸಿಲು​ಕಿದೆ.

ಗಿಲ್‌ ಮಿಂಚಿನಾಟ, ಭಾರತ ‘ಎ’ ಮೇಲು​ಗೈ

ಮೊದಲ ದಿನ​ದಂತ್ಯಕ್ಕೆ 3 ವಿಕೆಟ್‌ಗೆ 233 ರನ್‌ ಗಳಿ​ಸಿದ್ದ ಭಾರ​ತ ‘ಎ’, 2ನೇ ದಿನ​ವಾದ ಬುಧ​ವಾರ ಉತ್ತಮ ಬ್ಯಾಟಿಂಗ್‌ ನಡೆ​ಸಿತು. ಕರುಣ್‌ ನಾಯರ್‌ (78), ನಾಯಕ ವೃದ್ಧಿ​ಮಾನ್‌ ಸಾಹ (60), ಆಲ್ರೌಂಡರ್‌ ಶಿವಂ ದುಬೆ (68) ಅರ್ಧ​ಶ​ತಕ ಬಾರಿಸಿ ತಂಡ 400 ರನ್‌ ದಾಟಲು ನೆರ​ವಾ​ದರು. 

ಸ್ಟಂಪ್ ಕಿತ್ತೆಸೆದ ವಿರಾಟ್...ಯಾರ ಮೇಲೆ ಇಂಥಾ ಸಿಟ್ಟು..ವಿಡಿಯೋ ವೈರಲ್

ಮೊದಲ ಇನ್ನಿಂಗ್ಸ್‌ ಆರಂಭಿ​ಸಿದ ದ.ಆ​ಫ್ರಿಕಾ ‘ಎ’ ತಂಡ, ಭಾರ​ತದ ಸ್ಪಿನ್‌ ದಾಳಿಗೆ ಕುಸಿ​ಯಿತು. ಶಾಬಾಜ್‌ ನದೀ​ಮ್‌ ಹಾಗೂ ಕುಲ್ದೀಪ್‌ ಯಾದವ್‌ 2 ವಿಕೆಟ್‌ ಕಿತ್ತರು. ನಾಯಕ ಏಡನ್‌ ಮಾರ್ಕ್​ರಮ್‌ ಏಕಾಂಗಿ ಹೋರಾಟ ನಡೆ​ಸು​ತ್ತಿದ್ದು ಅಜೇಯ 83 ರನ್‌ ಗಳಿಸಿ 3ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದು​ಕೊಂಡಿ​ದ್ದಾರೆ.

ಸ್ಕೋರ್‌:

ಭಾರತ ‘ಎ’ 417

ದ.ಆಫ್ರಿಕಾ ‘ಎ’ 159/5

(2ನೇ ದಿನದಂತ್ಯಕ್ಕೆ)