ಮೈಸೂರು[ಸೆ.20]: ಭಾರತ ‘ಎ’ ವಿರುದ್ಧದ 2ನೇ ಅನ​ಧಿ​ಕೃತ ಟೆಸ್ಟ್‌ನಲ್ಲಿ ದ.ಆ​ಫ್ರಿಕಾ ‘ಎ’ ತಂಡ ಭರ್ಜರಿ ಹೋರಾಟ ಪ್ರದ​ರ್ಶಿಸಿ, ದೊಡ್ಡ ಮೊತ್ತದ ಹಿನ್ನಡೆಯಿಂದ ತಪ್ಪಿ​ಸಿ​ಕೊಂಡಿತು. 

2ನೇ ಅನ​ಧಿ​ಕೃತ ಟೆಸ್ಟ್‌: ಭಾರತ ‘ಎ’ ಬೃಹತ್‌ ಮೊತ್ತ

2ನೇ ದಿನ​ದಂತ್ಯಕ್ಕೆ 159 ರನ್‌ಗೆ 5 ವಿಕೆಟ್‌ ಕಳೆ​ದು​ಕೊಂಡಿದ್ದ ದ.ಆ​ಫ್ರಿಕಾ ‘ಎ’, 3ನೇ ದಿನ​ವಾದ ಗುರು​ವಾರ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ತೋರಿತು. ನಾಯಕ ಏಡನ್‌ ಮಾರ್ಕ್​ರಮ್‌ 161 ಹಾಗೂ ವಿಯಾನ್‌ ಮಲ್ಡರ್‌ 131 ರನ್‌ ಗಳಿಸಿ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 400 ರನ್‌ ಗಳಿ​ಸಲು ನೆರ​ವಾ​ದರು. 417 ರನ್‌ ಗಳಿ​ಸಿದ್ದ ಭಾರತ ‘ಎ’ ಮೊದಲ ಇನ್ನಿಂಗ್ಸ್‌ನಲ್ಲಿ 17 ರನ್‌ಗಳ ಅಲ್ಪ ಮುನ್ನಡೆ ಸಾಧಿ​ಸಿತು. 

2ನೇ ಇನ್ನಿಂಗ್ಸ್‌ ಬ್ಯಾಟಿಂಗ್‌ ಆರಂಭಿಸಿರುವ ಭಾರತ ‘ಎ’ ದಿನ​ದಂತ್ಯಕ್ಕೆ ವಿಕೆಟ್‌ ನಷ್ಟ​ವಿ​ಲ್ಲದೆ 14 ರನ್‌ ಗಳಿ​ಸಿದ್ದು, ಒಟ್ಟಾರೆ 31 ರನ್‌ ಮುನ್ನಡೆ ಪಡೆ​ದಿದೆ. ಪಂದ್ಯ ಬಹು​ತೇಕ ಡ್ರಾದತ್ತ ಸಾಗಿದೆ. .

ಸ್ಕೋರ್‌: ಭಾರತ ‘ಎ’ 417 ಹಾಗೂ 14/0

ದಕ್ಷಿಣ ಆಫ್ರಿಕಾ ‘ಎ’ 400/10