ಇಮ್ರಾನ್ ಖಾನ್ ಮಾಜಿ ಪತ್ನಿಯಿಂದ ಸ್ಫೋಟಕ ಮಾಹಿತಿ ಬಹಿರಂಗ..!
ದಕ್ಕೂ ಮೊದಲು ಇಮ್ರಾನ್ 1995ರಲ್ಲಿ ಜೆಮಿಮಾ ಗೋಲ್ಡ್’ಸ್ಮಿತ್ ಅವರನ್ನು ವರಿಸಿದ್ದರು. 2004ರಲ್ಲಿ ಇಮ್ರಾನ್ 9 ವರ್ಷಗಳ ದಾಂಪತ್ಯ ಬದುಕಿಗೆ ಅಂತ್ಯ ಹಾಡಿ, 2015ರಲ್ಲಿ ರೆಹಾಮ್ ಖಾನ್’ರನ್ನು ವಿವಾಹವಾಗಿದ್ದರು. ಆ ಬಳಿಕ 2018ರ ಆರಂಭದಲ್ಲಿ ಧಾರ್ಮಿಕ ಗುರು ಬುಶ್ರಾ ಮನೇಕ ಅವರನ್ನು ವರಿಸಿದ್ದಾರೆ.
ಇಸ್ಲಾಮಾಬಾದ್[ಜೂ.07]: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ವಾಸೀಂ ಅಕ್ರಂ ಖಾಸಗಿ ಬದುಕಿನ ಬಗ್ಗೆ ಕ್ರಿಕೆಟಿಗ ಕಂ ರಾಜಕಾರಣಿ ಇಮ್ರಾನ್ ಖಾನ್ ಮಾಜಿ ಪತ್ನಿ ರೆಹಾಮ್ ಖಾನ್ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ ಎನ್ನಲಾಗಿದ್ದು, ಈ ಕುರಿತಂತೆ ವಾಸೀಂ ಅಕ್ರಂ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಹೌದು, ಇಮ್ರಾನ್ ಖಾನ್ ಮಾಜಿ ಪತ್ನಿ ರೆಹಾಮ್ ಖಾನ್, ತಮ್ಮದೇ ಹೆಸರಿನ ’ರೆಹಾಮ್ ಖಾನ್’ ಹೆಸರಿನ ಪುಸ್ತಕ ಹೊರ ತರುತ್ತಿದ್ದು ಆ ಪುಸ್ತಕದಲ್ಲಿ ವಾಸೀಂ ಅಕ್ರಂ ದಿವಂಗತ ಪತ್ನಿಯ ಖಾಸಗಿ ಬದುಕಿನ ಬಗ್ಗೆ ಉಲ್ಲೇಖವಾಗಿದೆ ಎನ್ನಲಾಗಿದ್ದು, ಈ ವಿಚಾರ ಆನ್’ಲೈನ್’ನಲ್ಲಿ ಸೋರಿಕೆಯಾಗಿದ್ದು ಪಾಕಿಸ್ತಾನದ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ದ ಟೈಮ್ಸ್ ಆಫ್ ಇಂಡಿಯಾ ವರದಿಯಂತೆ, ’ವಾಸೀಂ ಅಕ್ರಂ ತನ್ನ ಲೈಂಗಿಕ ಕಲ್ಪನೆಗಳನ್ನು ಈಡೇರಿಸಿಕೊಳ್ಳಲು ದಿವಂಗತ ಪತ್ನಿಯನ್ನು ಬಳಸಿಕೊಂಡಿದ್ದರು ಎಂದು ಆರೋಪಿಸಿದ್ದಾರೆ. ಅಕ್ರಂ ಓರ್ವ ಕಪ್ಪು ವ್ಯಕ್ತಿಯನ್ನು ಬಳಸಿಕೊಂಡು ತನ್ನ ಕಣ್ಣೆದುರೇ ಆತನೊಂದಿಗೆ ತನ್ನ ಪತ್ನಿಯನ್ನು ಲೈಂಗಿಕ ಕ್ರಿಯೆ ನಡೆಸಲು ಅವಕಾಶ ಮಾಡಿಕೊಟ್ಟಿದ್ದರು’ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಸೋರಿಕೆಯಾದ ಪುಸ್ತಕದ 402ನೇ ಪುಟ ಹಾಗೂ 572ನೇ ಪುಟದಲ್ಲಿ ಈ ಕುರಿತಂತೆ ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ. ಇದೊಂದು ಕಪೋಲ ಕಲ್ಪಿತ ಕಟ್ಟುಕಥೆಯಾಗಿದ್ದು, ರೆಹಾಮ್ ಖಾನ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಪತ್ರಕರ್ತೆಯಾಗಿದ್ದ ರೆಹಾಮ್ ಖಾನ್ ಅವರನ್ನು ತೆಹ್ರಕ್-ಇ-ಇನ್ಸಾಫ್ ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್ ಜನವರಿ 2015ರಲ್ಲಿ 2ನೇ ವಿವಾಹವಾಗಿದ್ದರು. ಆ ಬಳಿಕ ಅದೇ ವರ್ಷದ ಅಕ್ಟೋಬರ್’ನಲ್ಲಿ ವಿಚ್ಚೇದನ ನೀಡಿದ್ದರು. ಇದಕ್ಕೂ ಮೊದಲು ಇಮ್ರಾನ್ 1995ರಲ್ಲಿ ಜೆಮಿಮಾ ಗೋಲ್ಡ್’ಸ್ಮಿತ್ ಅವರನ್ನು ವರಿಸಿದ್ದರು. 2004ರಲ್ಲಿ ಇಮ್ರಾನ್ 9 ವರ್ಷಗಳ ದಾಂಪತ್ಯ ಬದುಕಿಗೆ ಅಂತ್ಯ ಹಾಡಿ, 2015ರಲ್ಲಿ ರೆಹಾಮ್ ಖಾನ್’ರನ್ನು ವಿವಾಹವಾಗಿದ್ದರು. ಆ ಬಳಿಕ 2018ರ ಆರಂಭದಲ್ಲಿ ಧಾರ್ಮಿಕ ಗುರು ಬುಶ್ರಾ ಮನೇಕ ಅವರನ್ನು ವರಿಸಿದ್ದಾರೆ.