ಮಾಜಿ ಹೆಂಡತಿಗೆ ಇಮ್ರಾನ್ ವಿಚ್ಛೇದನ ಕೊಟ್ಟಿದ್ದು ಸಣ್ಣ ವಿಷಯಕ್ಕೆ
ಆ್ಯಂಕರ್ ರೆಹಮ್ ದಾಂಪತ್ಯ ಯಾವ ವಿಷಯಕ್ಕೆ ಬ್ರೇಕಪ್ ಆಯ್ತು ಅನ್ನೋ ರಹಸ್ಯ ಬಯಲಾಗಿದೆ. ಸ್ವತಃ ರೆಹಮ್ ಅವ್ರೇ ಬಹಿರಂಗಗೊಳಿಸಿದ್ದಾರೆ.
ಇಸ್ಲಾಮಾಬಾದ್(ನ.1): ಪಾಕಿಸ್ತಾನದ ಮಾಜಿ ಕ್ರಿಕೆಟಿಗ, ರಾಜಕಾರಣಿ ಇಮ್ರಾನ್‌ಖಾನ್ ಹಾಗೂ ಬಿಬಿಸಿಯ ಮಾಜಿ ಆ್ಯಂಕರ್ ರೆಹಮ್ ದಾಂಪತ್ಯ ಯಾವ ವಿಷಯಕ್ಕೆ ಬ್ರೇಕಪ್ ಆಯ್ತು ಅನ್ನೋ ರಹಸ್ಯ ಬಯಲಾಗಿದೆ. ಸ್ವತಃ ರೆಹಮ್ ಅವ್ರೇ ಬಹಿರಂಗಗೊಳಿಸಿದ್ದಾರೆ. ಕಳೆದ ಅ.31 ರಂದು ವಿವಾಹ ವಾರ್ಷಿಕೋತ್ಸವದ ಗಿಫ್ಟ್ ಕೊಡುವಂತೆ ಹಾಸ್ಯದೊಂದಿಗೆ ನಗುತ್ತಾ ಕೇಳಿದ್ದೆ. ಆದರೆ ಅವರು ಡಿವೋರ್ಸ್ ನೀಡಿದರು ಅಂತಾ ಇಮ್ರಾನ್ ಖಾನ್ ಮಾಜಿ ಪತ್ನಿ ರೆಹಮ್ ಹೇಳಿದ್ದಾರೆ. ಈ ರೀತಿ ಮತ್ತೆ ಯಾರಿಗೂ ಮಾಡದಂತೆ ಪ್ರಾರ್ಥಿಸುತ್ತೇನೆ ಎಂದು ಇಮ್ರಾನ್ ಖಾನ್ ಮಾಜಿ ಪತ್ನಿ ಹೇಳಿದ್ದಾರೆ. ಮದುವೆಯಾಗಿ 10 ತಿಂಗಳು ಕಳೆಯುವುದರೊಳಗೆ ಇಮ್ರಾನ್ - ರೆಹಮ್ ದಾಂಪತ್ಯ ಮುರಿದು ಬಿದ್ದಿತ್ತು.