ಆಧ್ಯಾತ್ಮಿಕ ಸಲಹೆಗಾರ್ತಿಯನ್ನು ವರಿಸಿದ 65ರ ಇಮ್ರಾನ್ ಖಾನ್
ಇಮ್ರಾನ್ ಖಾನ್ ಅವರಿಗೆ ಇದು ಮೂರನೇ ವಿವಾಹವಾಗಿದ್ದು 1995ರಲ್ಲಿ ಬ್ರಿಟಿಷ್ ಪ್ರಜೆ ಜಮೀಮಾ ಗೋಲ್ಡ್'ಸ್ಮಿತ್, 2015ರಲ್ಲಿ ಟಿವಿ ನಿರೂಪಕಿ ರಹೀಮ್ ಖಾನ್ ಮದುವೆಯಾಗಿದ್ದರು.
ಲಾಹೋರ್(ಫೆ.19): ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಾಗೂ ತಹ್ರಿಕ್ -ಎ-ಇನ್ಸಾನ್ ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್ ತಮ್ಮ ಆಧ್ಯಾತ್ಮಿಕ ಸಲಹೆಗಾರ್ತಿ ಬುಶ್ರಾ ಮನೇಕಾ ಅವರನ್ನು ಲಾಹೋರ್'ನಲ್ಲಿ ನಡೆದ ಸರಳ ವಿವಾಹ ಸಮಾರಂಭದಲ್ಲಿ ವರಿಸಿದರು.
ಇಮ್ರಾನ್ ಖಾನ್ ಅವರಿಗೆ ಇದು ಮೂರನೇ ವಿವಾಹವಾಗಿದ್ದು 1995ರಲ್ಲಿ ಬ್ರಿಟಿಷ್ ಪ್ರಜೆ ಜಮೀಮಾ ಗೋಲ್ಡ್'ಸ್ಮಿತ್, 2015ರಲ್ಲಿ ಟಿವಿ ನಿರೂಪಕಿ ರಹೀಮ್ ಖಾನ್ ಮದುವೆಯಾಗಿದ್ದರು. ದಂಪತಿಗಳ ಸಂಬಂಧ 10 ತಿಂಗಳಲ್ಲಿಯೇ ಕೊನೆಗೊಂಡಿತ್ತು. ಇಬ್ಬರೊಂದಿಗೂ ವಿಚ್ಚೇದನ ಪಡೆದಿದ್ದರು. ಬುಶ್ರಾ ಮನೇಕಾ ಅವರನ್ನು ಕೆಲವು ವರ್ಷಗಳ ಹಿಂದೆಯೇ ಭೇಟಿಯಾಗಿದ್ದ ಇಮ್ರಾನ್ ಸ್ನೇಹ ಹಾಗೇಯೇ ಮುಂದುವರಿದಿತ್ತು.
ಮನೇಕಾ ಅವರಿಗೂ ಇದು 2ನೇ ಮದುವೆ. ಈ ಮೊದಲು ಹಿರಿಯ ಅಬಕಾರಿ ಅಧಿಕಾರಿಯೊಬ್ಬರನ್ನು ವಿವಾಹವಾಗಿದ್ದರು. ಮದುವೆ ಸಮಾರಂಭದ ಭಾವಚಿತ್ರವನ್ನು ಪಿಟಿಐ ಪಕ್ಷ ಬಿಡುಗಡೆ ಮಾಡಿದೆ. ಮೊದಲ ಪತ್ನಿಗೆ ಇಬ್ಬರು ಮಕ್ಕಳಿದ್ದಾರೆ.