ಮದುವೆಯಾದ ಬೆನ್ನಲ್ಲೇ ಇಮ್ರಾನ್ ಖಾನ್ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ..!
ಇಮ್ರಾನ್ ಖಾನ್ ರಾಜಕೀಯ ಭವಿಷ್ಯ ಬಹುತೇಕ ಸಂಧ್ಯಾಕಾಲದಲ್ಲಿದೆ ಎಂದಿರುವ ರೆಹಾಮ್, ಇಮ್ರಾನ್ ನಂಬಿಕೆಗೆ ಅರ್ಹನಲ್ಲ ಎಂದು ಆರೋಪಿಸಿದ್ದಾರೆ.
ಇಸ್ಲಾಮಾಬಾದ್(ಫೆ.23): ಪಾಕಿಸ್ತಾನ್ ತೆಹ್ರಿಕ್ ಇ-ಇನ್ಸಾಪ್ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಮೂರನೇ ಮದುವೆಯಾದ ಬೆನ್ನಲ್ಲೇ ಪಾಕಿಸ್ತಾನದ ಪ್ರಧಾನಿ ಕನಸು ಕಾಣುತ್ತಿದ್ದಾರೆ ಎಂದು ಮಾಜಿ ಪತ್ನಿ ರೆಹಾಮ್ ಖಾನ್ ಹೇಳಿದ್ದಾರೆ.
ಕಳೆದ ಭಾನುವಾರ 65 ವರ್ಷದ ಇಮ್ರಾನ್ ಖಾನ್ ಬುಸ್ರಾ ಮನೇಕ ಅವರನ್ನು ವರಿಸಿದ್ದರು. 'ಅಡಿಯಿಂದ ಮುಡಿಯವರೆಗೆ ಬಟ್ಟೆಯನ್ನು ಧರಿಸುವ ಮನೇಕರನ್ನು ಇಮ್ರಾನ್ ಸಾಕಷ್ಟು ಮಂದಿಯನ್ನು ದೂರಮಾಡಿಕೊಂಡಿದ್ದಾರೆ. ಇದರ ಪರಿಣಾಮ ಮುಂದಿನ 4 ತಿಂಗಳಿನಲ್ಲಿ ಬರುವ ಪಾಕಿಸ್ತಾನ ಚುನಾವಣೆ ಇಮ್ರಾನ್ ರಾಜಕೀಯ ಭವಿಷ್ಯದ ಅವನತಿಗೆ ವೇದಿಕೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಇಮ್ರಾನ್ ಖಾನ್ ರಾಜಕೀಯ ಭವಿಷ್ಯ ಬಹುತೇಕ ಸಂಧ್ಯಾಕಾಲದಲ್ಲಿದೆ ಎಂದಿರುವ ರೆಹಾಮ್, ಇಮ್ರಾನ್ ನಂಬಿಕೆಗೆ ಅರ್ಹನಲ್ಲ ಎಂದು ಆರೋಪಿಸಿದ್ದಾರೆ.