ನ್ಯೂಯಾರ್ಕ್(ಮೇ.02): ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಭಾರತಕ್ಕೆ ಅತೀ ದೊಡ್ಡ ರಾಜತಾಂತ್ರಿಕ ಗೆಲುವು ಸಿಕ್ಕಿದೆ. ಮೋಸ್ಟ್ ವಾಟೆಂಟ್ ಉಗ್ರ ಮಸೂದ್ ಅಜರ್‌ನನ್ನು ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆ ಘೋಷಿಸಿದೆ. ಹಲವು ಬಾರಿ ಚೀನಾ ಮಸೂದ್‌ಗೆ ಜಾಗತಿಕ ಉಗ್ರಪಟ್ಟ ನೀಡಲು ಅಡ್ಡಿಪಡಿಸಿತ್ತು. ಆದರೆ ಸತತ ಪ್ರಯತ್ನಗಳ ಬಳಿಕ ಭಾರತ ಗೆಲುವು ಸಾಧಿಸಿದೆ. ಮಸೂದ್ ಅಜರ್‌ಗೆ ಜಾಗತಿಕ ಉಗ್ರಪಟ್ಟ ನೀಡಲು ಟೀಂ ಇಂಡಿಯಾ ಮಾಜಿ ನಾಯಕ, ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ನೀತಿಗಳೇ ನೆರವಾಗಿದೆ ಅನ್ನೋ ಸತ್ಯ ಬಹಿರಂಗವಾಗಿದೆ.

ಇದನ್ನೂ ಓದಿ: ಕೊನೆಗೂ ಭಾರತಕ್ಕೆ ಜಯ; ಮಸೂದ್ ಅಜರ್ ಉಗ್ರ ಎಂದು ಘೋಷಿಸಿದ ವಿಶ್ವಸಂಸ್ಥೆ

ಭಾರತದ ಈ ರಾಜತಾಂತ್ರಿಕ ಗೆಲುವಿಗೆ ಮುಖ್ಯ ಕಾರಣ ವಿಶ್ವಸಂಸ್ಥೆಯ ನಮ್ಮ ರಾಯಭಾರಿ ಸಯ್ಯದ್ ಅಕ್ಬರುದ್ದೀನ್. ಸಯ್ಯದ್ ಅಕ್ಬರುದ್ದೀನ್, ಎಂ.ಎಸ್.ಧೋನಿ ಅಭಿಮಾನಿ. ಧೋನಿ ಮೈದಾನದಲ್ಲಿ ಕೊನೆಯ ಎಸೆತದವರೆಗೂ ಹೋರಾಡುತ್ತಾರೆ. ಇಷ್ಟೇ ಅಲ್ಲ ಯಾವುದೇ ಸಂದರ್ಭದಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳುವುದಿಲ್ಲ. ಅಂತಿಮ ಓವರ್‌ನಲ್ಲಿ ಅದೆಷ್ಟೇ ರನ್ ಬೇಕಿದ್ದರೂ ಅಷ್ಟೇ ತಾಳ್ಮೆಯಿಂದ ಪಂದ್ಯ ಫಿನೀಶ್ ಮಾಡುತ್ತಾರೆ. ಇದೇ ಫಾರ್ಮುಲಾವನ್ಮು ಸಯ್ಯದ್ ಅಕ್ಬರುದ್ದೀನ್ ಮಸೂದ್ ಅಜರ್ ವಿರುದ್ಧದ ಹೋರಾಟದಲ್ಲೂ ಪ್ರಯೋಗಿಸಿದ್ದಾರೆ.

ಇದನ್ನೂ ಓದಿ: ಗೆಲುವಿನ ಬಳಿಕ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ನೀಡಿದ ಧೋನಿ!

ಮಸೂದ್‌ಗೆ ಜಾಗತಿಕ ಉಗ್ರಪಟ್ಟ ನೀಡುವ ಭಾರತದ ಹೋರಾಟಕ್ಕೆ ಸತತ 4 ಬಾರಿ ಚೀನಾ ಅಡ್ಡಿಪಡಿಸಿತ್ತು.  ಆದರೆ  ಸಯ್ಯದ್ ಅಕ್ಬರುದ್ದೀನ್ ಪ್ರಯತ್ನ ನಿಲ್ಲಿಸಲಿಲ್ಲ. ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ಧೋನಿ ರೀತಿಯಲ್ಲೇ ಮುಂದುವರಿದ್ದಾರೆ. ಸತತ ಪ್ರಯತ್ನಗಳ ಬಳಿಕ ಮಸೂದ್ ಅಜರ್‌ಗೆ ಜಾಗತಿ ಉಗ್ರ ಪಟ್ಟ ಎಂದು ವಿಶ್ವಸಂಸ್ಥೆಯಿಂದ ಘೋಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

 

ನಾನು ಧೋನಿ ಅಪ್ರೋಚ್ ಹಾಗೂ ಶೈಲಿಯಲ್ಲಿ ನಂಬಿಕೆ ಇಟ್ಟಿದ್ದೇನೆ. ಯಾವುದೇ ಸಂದರ್ಭದಲ್ಲೂ ಬಿಟ್ಟುಕೊಡಲು ತಯಾರಿಲ್ಲ. ನನ್ನ ಸಮಯ ಮುಗಿಯಿತು ಅಂದುಕೊಂಡಿಲ್ಲ, ಇನ್ನು ಸಾಧ್ಯವಿಲ್ಲ ಎಂದು ಹತಾಶನಾಗಿಲ್ಲ. ಗುರಿ ಮುಟ್ಟುವ ತನಕ ಹೋರಾಟ ನಿಲ್ಲಿಸುವುದಿಲ್ಲ. ಧೋನಿಯ ಇದೇ ನೀತಿ ನನಗೂ ಸಹಕಾರಿಯಾಯಿತು ಎಂದು ಸಯ್ಯದ್ ಅಕ್ಬರುದ್ದೀನ್ ಹೇಳಿದ್ದಾರೆ.

ಇದನ್ನೂ ಓದಿ: CSK ಯಶಸ್ಸಿನ ಗುಟ್ಟೇನು- ನಾಯಕ ಧೋನಿ ಬಿಚ್ಚಿಟ್ಟ ಸೀಕ್ರೆಟ್!

ಜೈಶ್ ಎ ಮೊಹಮ್ಮದ್  ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್, ಭಾರತದಲ್ಲಿ ನಡೆದ ಹಲವು ವಿಧ್ವಂಸಕ ಕೃತ್ಯಗಳ ರೂವಾರಿ. 2001ರಲ್ಲಿ ಸಂಸತ್ತಿನ ಮೇಲೆ ನಡೆದ ದಾಳಿ, 2016ರ ಪಠಾಣ್ ಕೋಟ್ ದಾಳಿ ಹಾಗೂ ಇತ್ತೀಚೆಗೆ ನಡೆಗ ಪುಲ್ವಾಮಾ ದಾಳಿಯಲ್ಲೂ ಜೈಶ್ ಎ ಮೊಹಮ್ಮದ್ ಸಂಘಟನೆಯ ಪಾತ್ರವಿರುವುದು ಸ್ಪಷ್ಟವಾಗಿತ್ತು.