ಚೆನ್ನೈ(ಏ.25): ಚೆನ್ನೈ ಸೂಪರ್ ಕಿಂಗ್ಸ್ ಯಶಸ್ಸಿನ ಗುಟ್ಟೇನು? ಅನ್ನೋದು ಎಲ್ಲರ ಪ್ರಶ್ನೆ. ಪ್ರತಿ ಆವೃತ್ತಿಯಲ್ಲೂ ಚೆನ್ನೈ ಪ್ಲೇ ಆಫ್ ಸ್ಥಾನ ಭದ್ರಪಡಿಸಿಕೊಳ್ಳುತ್ತಿದೆ. 3 ಬಾರಿಯ ಚಾಂಪಿಯನ್ ತಂಡ ಕೂಡ ಹೌದು. ಹೀಗಾಗಿ ಸಹಜವಾಗಿ ಯಶಸ್ಸಿಗೆ ಕಾರಣವೇನು ಅನ್ನೋ ಪ್ರಶ್ನೆ ಎಲ್ಲರಲ್ಲೂ ಮೂಡುತ್ತಿದೆ. ಇದಕ್ಕೆ ಧೋನಿ ಅಷ್ಟೇ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಪ್ಲೇ ಆಫ್ ಲೆಕ್ಕಾಚಾರ: ಗೆಲ್ಲಲೇಬೇಕಾದ ಒತ್ತಡದಲ್ಲಿ KKR!

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಸ್ಸಿನ ಸೀಕ್ರೆಟ್‌ಗಳಲ್ಲಿ ಧೋನಿ ಕೇವಲ ಒಂದು ಸೀಕ್ರೆಟ್ ಮಾತ್ರ ಬಿಚ್ಚಿಟ್ಟಿದ್ದಾರೆ. ಇನ್ನುಳಿದ  ಸೀಕ್ರೆಟ್ ನಿವೃತ್ತಿಯಾಗುವ ವರೆಗೂ ಬಿಚ್ಚಿಡೋದಿಲ್ಲ ಎಂದು ಧೋನಿ ಹೇಳಿದ್ದಾರೆ. ಯಸಸ್ಸಿನ ಮಂತ್ರ ಎಲ್ಲರಿಗೂ ಹೇಳಿದರೆ, ಹರಾಜಿನಲ್ಲಿ ನನ್ನನ್ನು ಯಾರೂ ಖರೀದಿಸುವುದಿಲ್ಲ. ಅದು ವ್ಯಾಪರ ರಹಸ್ಯವಿದ್ದಂತೆ ಎಂದಿದ್ದಾರೆ. 

ಇದನ್ನೂ ಓದಿ: ಕೊಹ್ಲಿ - ಡೇಲ್ ಸ್ಟೇನ್ ಅಪ್ಪುಗೆ- ಟ್ವಿಟರ್‌ನಲ್ಲಿ ಮೆಚ್ಚುಗೆ!

ಒಂದು ರಹಸ್ಯ ಬಿಚ್ಚಿಟ್ಟಿರುವ ಧೋನಿ, ಮಾಲೀಕರು ಹಾಗೂ ಅಭಿಮಾನಿಗಳ ಬೆಂಬಲ  CSK ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದಿದ್ದಾರೆ. ಇದನ್ನ ಹೊರತು ಪಡಿಸಿದರೆ ಇನ್ಯಾವ ಮಾಹಿತಿಯನ್ನೂ ನಿವೃತ್ತಿವರೆಗೂ ಘೋಷಿಸುವುದಿಲ್ಲ ಎಂದಿದ್ದಾರೆ.