ಚೆನ್ನೈ(ಮೇ.02): ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 80 ರನ್ ಭರ್ಜರಿ ಗೆಲುವು ದಾಖಲಿಸಿದ ಚೆನ್ನೈ ಸೂಪರ್ ಕಿಂಗ್ಸ್ ಇದೀಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಡೆಲ್ಲಿ ವಿರುದ್ಧದ ಗೆಲುವಿನಲ್ಲಿ ನಾಯಕ ಎಂ.ಎಸ್.ಧೋನಿ ಪ್ರಮುಕ ಪಾತ್ರ ನಿರ್ವಹಿಸಿದ್ದರು. ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್‌ನಲ್ಲಿ ಮಿಂಚಿದ ಧೋನಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಗೆಲುವಿನ ಬಳಿಕ ಧೋನಿ, ಕ್ರೀಡಾಂಗದಲ್ಲಿದ್ದ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ನೀಡಿದರು.

ಇದನ್ನೂ ಓದಿ: MI Vs SRH ಸಂಭವನೀಯ ಟೀಂ- ಉಭಯ ತಂಡದಲ್ಲೂ ಮಹತ್ತರ ಬದಲಾವಣೆ!

ಡೆಲ್ಲಿ ವಿರುದ್ಧ ಧೋನಿ ಕೇವಲ 22 ಎಸೆತದಲ್ಲಿ 44 ರನ್ ಸಿಡಿಸಿದ್ದರು. ಇನ್ನು 3 ಸ್ಟಂಪ್ ಮೂಲಕ ಚೆನ್ನೈ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದರು. ಗೆಲುವಿನ ಬಳಿಕ ಧೋನಿ ಅಭಿಮಾನಿಗಳಿಗೆ ಟೆನಿಸ್ ಬಾಲ್ ಉಡುಗೊರೆಯಾಗಿ ನೀಡಿದರು. ಕ್ರೀಡಾಂಗಣದಲ್ಲಿ ನರೆದಿದ್ದ ಅಭಿಮಾನಿಗಳತ್ತ ತೆರಳಿದ ಧೋನಿ ಟೆನಿಸ್ ಬಾಲ್ ನೀಡಿದರು.

 

 

ಇದನ್ನೂ ಓದಿ: ಆರ್‌ಸಿಬಿ ಪ್ಲೇ-ಆಫ್ ಕನಸು ಛಿದ್ರಗೊಳ್ಳಲು ಈ ಮೂವರು ಕಾರಣ!

ಧೋನಿ ಕೈಯಿಂದ ಬಾಲ್ ಪಡೆದ ಅಭಿಮಾನಿಗಳು ಸಂತಸದಲ್ಲಿ ತೇಲಾಡಿದರು. ಡೆಲ್ಲಿ ವಿರುದ್ಧದ ಗೆಲುವಿನ ಬಳಿಕ CSK 9 ಗೆಲುವಿನೊಂದಿಗೆ 18 ಅಂಕ ಸಂಪಾದಿಸಿತು. ಇಷ್ಟೇ ಅಲ್ಲ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು.