ವಿಶಾಖಪಟ್ಟಣಂ(ಅ.05): ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸಿದೆ. 4ನೇ ದಿನದಾಟದಲ್ಲಿ ಸೌತ್ ಆಫ್ರಿಕಾ ತಂಡಕ್ಕೆ 395 ರನ್ ಟಾರ್ಗೆಟ್ ನೀಡಿದ ಟೀಂ ಇಂಡಿಯಾ ಗೆಲುವಿನ ವಿಶ್ವಾಸದಲ್ಲಿದೆ. 3ನೇ ದಿನದಾಟದಲ್ಲಿ ಸೌತ್ ಆಫ್ರಿಕಾ ನಾಯಕ ಕ್ವಿಂಟನ್ ಡಿಕಾಕ್ ಫೋಟೋ ವೈರಲ್ ಆಗಿದೆ. ಭಾರತದ ಸ್ಪಿನ್ನರ್ ಯಜುವೇಂದ್ರ ಚಹಾಲ್ ರೀತಿಯಲ್ಲಿ ಪೋಸ್ ನೀಡಿರುವ ಡಿಕಾಕ್‌ಗೆ ಇದೀಗ ಸ್ವತಃ ಚಹಾಲ್ ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ಹೊಸ ಬ್ಯುಸಿನೆಸ್ ಆರಂಭಿಸಿದ ಚಹಲ್‌..!

ಭಾರತದ 2ನೇ ಇನಿಂಗ್ಸ್ ಬ್ಯಾಟಿಂಗ್ ವೇಳೆ ಕ್ವಿಂಟನ್ ಡಿಕಾಕ್ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾರಣ ಈ ಹಿಂದೆ ಚಹಾಲ್ ಇದೇ ಭಂಗಿಯಲ್ಲಿನ ಫೋಟೋ ಸಖತ್ ಸುದ್ದಿಯಾಗಿತ್ತು. ಇದೀಗ ಡಿಕಾಕ್ ಕೂಡ ಚಹಾಲ್ ರೀತಿಯಲ್ಲಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ. ಯಜುವೇಂದ್ರ ಚಹಾಲ್ ಕಾಪಿ ಮಾಡಿದ್ದೀರಿ. ಚಹಾಲ್ ಅನುಕರಣೆ ಮಾಡಿದ್ದೇಕೆ? ಎಂದು ಟ್ವಿಟರಿಗರು ಪ್ರಶ್ನಿಸಿದ್ದಾರೆ. ಅಭಿಮಾನಿಗಳು ಚಹಾಲ್ ಹಾಗೂ ಡಿಕಾಕ್ ಫೋಟೋ ಎಡಿಟ್ ಮಾಡಿ ಹರಿಬಿಟ್ಟಿದ್ದಾರೆ. ಇದೀಗ ಇದೇ ಫೋಟೋವನ್ನು ಟ್ವೀಟ್ ಮಾಡಿರುವ ಚಹಾಲ್, ನನ್ನ ಅನುಕರಣೆ ಮಾಡುವುದು ನಿಮ್ಮಿಂದ ಸಾಧ್ಯವಿಲ್ಲ ಎಂದು ಚಹಾಲ್ ಹೇಳಿದ್ದಾರೆ.

 

ಇದನ್ನೂ ಓದಿ: ಕೊಹ್ಲಿ, ABD ಜೊತೆ ಚಹಾಲ್ ಗಲ್ಲಿ ಡ್ಯಾನ್ಸ್

2019ರ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ದದ ಪಂದ್ಯದಲ್ಲಿ ಚಹಾಲ್ ಆಡೋ 11ರ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಈ ವೇಳೆ ಆಟಗಾರರಿಗೆ ನೀರು, ಪಾನೀಯ ಹಿಡಿದು ಬೌಂಡರಿ ಲೈನ್‌ ಹೊರಗಡೆ  ಇದೇ ಭಂಗಿಯಲ್ಲಿ ಕಾಣಿಸಿಕೊಂಡಿದ್ದರು. ಅಂದು ಟ್ವಿಟರಿಗರು ಚಹಾಲ್‌ನನ್ನು ಟ್ರೋಲ್ ಮಾಡಲಾಗಿತ್ತು. ವಿಶಾಖಪಟ್ಟಣಂ ಟೆಸ್ಟ್ ಪಂದ್ಯದಲ್ಲಿ ಡಿಕಾಕ್ ಈ ರೀತಿ ಕಾಣಿಸಿಕೊಂಡಿರುವುದು ಮತ್ತೆ ಟ್ರೋಲ್ ಆಗಿದೆ. ಚಹಾಲ್ ಶೈಲಿ ಅನುಕರಣೆ ಎಂದು ಟ್ವಿಟರ್‌ನಲ್ಲಿ ಅಭಿಮಾನಿಗಳು ಹೇಳಿದ್ದಾರೆ.

ಇದನ್ನೂ ಓದಿ: ಸ್ಪಿನ್ನರ್‌ ಚಹಲ್‌ ಕಾಲೆಳೆದ ಮಹಿಳಾ ಕ್ರಿಕೆಟರ್‌ ಸ್ಮೃತಿ

ಮೊದಲ ಇನ್ನಿಂಗ್ಸ್‌ನಲ್ಲಿ ಸೆಂಚುರಿ ಸಿಡಿಸಿದ ಸೌತ್ ಆಫ್ರಿಕಾ ನಾಯಕ ಕ್ವಿಂಟನ್ ಡಿಕಾಕ್, ಇದೀಗ ಎರಡನೇ ಇನಿಂಗ್ಸ್‌ನಲ್ಲಿ ತಂಡವನ್ನು ಸೋಲಿನಿಂದ ಪಾರು ಮಾಡಲು ಸಜ್ಜಾಗಿದ್ದಾರೆ.