ಬೆಂಗಳೂರು(ಮಾ.29): ಐಪಿಎಲ್ 12ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆರಂಭಿಕ 2 ಪಂದ್ಯ ಸೋತು ನಿರಾಸೆ ಅನುಭವಿಸಿದೆ. ಸೋಲು RCB ಆಟಗಾರರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಮುಂದಿನ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡೋ ಛಲ RCB ತಂಡದಲ್ಲಿದೆ. ಇದೀಗ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೆ ಸಜ್ಜಾಗುತ್ತಿರುವ RCB ಇದೀಗ ರಿಲಾಕ್ಸ್  ಮೂಡ್‌ಗೆ ಜಾರಿದೆ.

ಇದನ್ನೂ ಓದಿ: IPL 2019: ಕ್ರಿಸ್ ಗೇಲ್ ಅದ್ಭುತ ಡ್ಯಾನ್ಸ್- ನಾಚಿ ನೀರಾದ ಕೊರಿಯೋಗ್ರಾಫರ್!

ಅಭ್ಯಾಸದಿಂದ ಬಿಡುವು ಮಾಡಿಕೊಂಡ RCB ಪ್ರಮೋಶನಲ್ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿತ್ತು. ಈ ವೇಳೆ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಜೊತೆ ಯಜುವೇಂದ್ರ ಚೆಹಾಲ್ ಅದ್ಭುತ ಡ್ಯಾನ್ಸ್ ಮಾಡಿ ಗಮನಸೆಳೆದರು. ಗಲ್ಲಿ ಡ್ಯಾನ್ಸ್ ಸ್ಟೆಪ್ಸ್ ಹಾಕಿದ ಚಹಾಲ್, ಕೊಹ್ಲಿ ಹಾಗೂ ಎಬಿಡಿಗೆ ಸರ್ಪ್ರೈಸ್ ನೀಡಿದರು.

ಇದನ್ನೂ ಓದಿ: 12ನೇ ಆವೃತ್ತಿ IPLನಲ್ಲಿ ಚೊಚ್ಚಲ ಶತಕ- ದಾಖಲೆ ಬರೆದ ಸಂಜು ಸಾಮ್ಸನ್ !

ಕೊಹ್ಲಿ ಹಾಗೂ ಚಹಾಲ್ ಜೊತೆ ಎಬಿಡಿ ಕೂಡ  ಸ್ಟೆಪ್ಸ್ ಹಾಕಿದರು. ಆರಂಭಿಕ ಹಂತದಲ್ಲಿ ಕೊರಿಯೊಗ್ರಾಫರ್ ಹೇಳಿದ ಸ್ಟೆಪ್ ಹಾಕಿದ ಚಹಾಲ್, ಅಂತಿಮ ಹಂತದಲ್ಲಿ ತಮ್ಮದೇ ಶೈಲಿಯಲ್ಲಿ ಡ್ಯಾನ್ಸ್ ಮಾಡಿದರು. ಇದು ಕೊಹ್ಲಿ ಹಾಗೂ ಎಬಿಡಿಗೆ ನಗು ತರಿಸಿತು.