ನವದೆಹಲಿ[ಮೇ.22]: ಭಾರತ ಕ್ರಿಕೆಟ್‌ ತಂಡದ ಲೆಗ್‌ ಸ್ಪಿನ್ನರ್‌ ಯಜುವೇಂದ್ರ ಚಹಲ್‌, ಖಾಸಗಿ ಸಂಸ್ಥೆ ಜತೆ ಸೇರಿ ‘ಚೆಕ್‌ಮೇಟ್‌’ ಎನ್ನುವ ಹೆಸರಲ್ಲಿ ಲೈಫ್‌ಸ್ಟೈಲ್‌ ಉದ್ಯಮ ಆರಂಭಿಸಿದ್ದಾರೆ. 

ಸ್ಪಿನ್ನರ್‌ ಚಹಲ್‌ ಕಾಲೆಳೆದ ಮಹಿಳಾ ಕ್ರಿಕೆಟರ್‌ ಸ್ಮೃತಿ

ಮಂಗಳವಾರ ಅವರು ತಮ್ಮ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು. ಇದರೊಂದಿಗೆ ಕೊಹ್ಲಿ, ಧೋನಿ, ರಾಹುಲ್‌ ಸೇರಿದಂತೆ ಹಲವು ಭಾರತೀಯ ಕ್ರಿಕೆಟಿಗರ ಸಾಲಿಗೆ ಚಹಲ್‌ ಸೇರಿಕೊಂಡರು. 

ಚೆಕ್‌ಮೇಟ್‌ ಸಂಸ್ಥೆ ಲೈಫ್‌ಸ್ಟೈಲ್‌ ಉತ್ಪನ್ನಗಳು, ಆನ್‌ಲೈನ್‌ ಗೇಮ್‌ಗಳು ಸೇರಿದಂತೆ ಇನ್ನೂ ಹಲವು ಮಾರುಕಟ್ಟೆಗಳಿಗೆ ಪ್ರವೇಶಿಸಲಿದೆ ಎಂದು ಚಹಲ್‌ ಹೇಳಿದ್ದಾರೆ.