ಚಹಲ್ ಟೀವಿ ಮೂಲಕ ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಹಲ್ ಮಹಿಳಾ ಆಟಗಾರ್ತಿ ಸ್ಮೃತಿ ಮಂಧನಾ ಸಂದರ್ಶನ ನಡೆಸಿದ್ದಾರೆ. ಸಂದರ್ಶನದ ವೇಳೆ ಸ್ಮೃತಿ, ಚಹಲ್ ಕಾಲೆಳೆದಿದ್ದಾರೆ.
ವೆಲ್ಲಿಂಗ್ಟನ್(ಫೆ.08): ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ, ಭಾರತದ ಅಗ್ರ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್‌ರ ಕಾಲೆಳೆದಿದ್ದಾರೆ. ‘ಚಹಲ್ ಟೀವಿ’ ಹೆಸರಿನಲ್ಲಿ ಲೆಗ್ ಸ್ಪಿನ್ನರ್ ಸಂದರ್ಶನ ನಡೆಸಲಿದ್ದು, ಬಿಸಿಸಿಐ ವೆಬ್‌ಸೈಟ್‌ನಲ್ಲಿ ವಿಡಿಯೋ ಪ್ರಸಾರವಾಗಲಿದೆ.
ಇದನ್ನೂ ಓದಿ: ಭಾರತ-ನ್ಯೂಜಿಲೆಂಡ್ 2ನೇ ಟಿ20- ಟೀಂ ಇಂಡಿಯಾದಲ್ಲಿ ಬದಲಾವಣೆ ಸಾಧ್ಯತೆ!
ಈ ವೇಳೆ ಚಹಲ್ ಜತೆ ಮಾತನಾಡಿರುವ ಸ್ಮೃತಿ, ‘ನ್ಯೂಜಿಲೆಂಡ್ ವಿರುದ್ಧ 4ನೇ ಏಕದಿನದಲ್ಲಿ ನಿಮ್ಮ ಬ್ಯಾಟಿಂಗ್ ನೋಡಿದೆ. ನಿಮ್ಮ ಆಟದಿಂದ ಸ್ಫೂರ್ತಿ ಪಡೆದು, ಸುಧಾರಣೆ ಕಾಣಬೇಕು’ ಎಂದಿದ್ದಾರೆ. ಭಾರತ 92 ರನ್‌ಗೆ ಆಲೌಟ್ ಆದ ಪಂದ್ಯದಲ್ಲಿ ಚಹಲ್ 18 ರನ್ ಗಳಿಸಿದ್ದರು.
ಇದನ್ನೂ ಓದಿ: ಮಾಜಿ ಕ್ರಿಕೆಟಿಗನ ಚಿಕಿತ್ಸೆಗೆ ನೆರವಾದ ಕೆ.ಎಲ್.ರಾಹುಲ್!
ಚಹಾಲ್ ಟೀವಿ ಮೂಲಕ ಯಜುವೇಂದ್ರ ಚಹಾಲ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮೊಹಮ್ಮದ್ ಶಮಿ, ಯುವ ಕ್ರಿಕೆಟಿಗರಾದ ಖಲೀಲ್ ಅಹ್ಮಮ್ಮದ್ ಸೇರಿದಂತೆ ಹಲವು ಕ್ರಿಕೆಟಿಗರನ್ನ ಸಂದರ್ಶನ ನಡೆಸಿದ್ದಾರೆ
