Asianet Suvarna News Asianet Suvarna News

ವಾರದೊಳಗೆ ಕಾಶ್ಮೀರ ಸಮಸ್ಯೆ ಬಗೆಹರಿಸಿದ MSD

ಕಾಶ್ಮೀರಕ್ಕೆ ನೀಡಲಾಗಿದ್ದ ಸಂವಿಧಾನದ 370 ಹಾಗೂ 35ಎ ವಿಧಿಗಳನ್ನು ರದ್ದು ಪಡಿಸಿದ ಬೆನ್ನಲ್ಲೇ ನಗೆ ಚಟಾಕಿಗಳು ಹೊರಹೊಮ್ಮಿವೆ. ಅದರಲ್ಲೂ ಧೋನಿ ಕಾಶ್ಮೀರದಲ್ಲಿ ಗಸ್ತು ತಿರುಗುತ್ತಿದ್ದಂತೆ ದಶಕಗಳ ಕಾಲದ ಸಮಸ್ಯೆ ಬಗೆಹರಿದಿದೆ. ಈ ಕುರಿತಾದ ವಿಡಿಯೋ ಇಲ್ಲಿದೆ ನೋಡಿ...

Cricketer MS Dhoni resolves issue of Jammu and Kashmir after a week of army deputed him in valley
Author
Bengaluru, First Published Aug 6, 2019, 4:00 PM IST
  • Facebook
  • Twitter
  • Whatsapp

ಬೆಂಗಳೂರು[ಆ.06]:  ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370 ಹಾಗೂ 35ಎ ವಿಧಿಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಈ ನಿರ್ಣಯ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲೂ ನಗೆ ಚಟಾಕಿಗಳು ಹೊರಹೊಮ್ಮಿವೆ.

ಕಾಶ್ಮೀರ ಮೈನಸ್ ಆರ್ಟಿಕಲ್ 370: ವಿಶ್ವ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆ

ಅದರಲ್ಲೂ ವೆಸ್ಟ್ ಇಂಡೀಸ್ ಪ್ರವಾಸದಿಂದ ಹಿಂದೆ ಸರಿದು, ಕಾಶ್ಮೀರದಲ್ಲಿ ಗಸ್ತು ಕಾಯುತ್ತಿರುವ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕಣಿವೆ ರಾಜ್ಯಕ್ಕೆ ಕಾಲಿಟ್ಟು ವಾರ ತುಂಬುವುದರೊಳಗಾಗಿ ಕಾಶ್ಮೀರ ಸಮಸ್ಯೆ ಇತ್ಯರ್ಥ ಮಾಡಿದ್ದಾರೆ ಎಂದು ಟ್ವಿಟರಿಗರು ನಗೆ ಚಟಾಕಿ ಹಾರಿಸಿದ್ದಾರೆ. ಅರೆಸೇನಾ ಪಡೆಯಲ್ಲಿ ಲೆಫ್ಟಿನೆಂಟ್‌ ಕರ್ನಲ್‌ ಗೌರವ ಹುದ್ದೆ ಹೊಂದಿರುವ ಧೋನಿ ಜುಲೈ 31ರಿಂದ ಆಗಸ್ಟ್ 15ರವರೆಗೂ 15 ದಿನಗಳ ಕಾಲ ಧೋನಿ ಅರೆಸೇನಾಪಡೆಯ ವಿಕ್ಟರ್‌ ಫೋರ್ಸ್’ನೊಂದಿಗೆ ಗಸ್ತು ತಿರುಗುವುದು, ಪಹರೆ ವಹಿಸುವುದನ್ನು ಮಾಡಲಿದ್ದಾರೆ. ಈ ಪಡೆಯ ಸೈನಿಕರ ಜೊತೆಜೊತೆಗೇ ಇದ್ದು, ಅವರು ನಿರ್ವಹಿಸುವ ಎಲ್ಲಾ ಕೆಲಸಗಳನ್ನೂ ಮಾಡಲಿದ್ದಾರೆ. 

"

ಸೈನಿಕರ ಜತೆ ಧೋನಿ ವಾಲಿಬಾಲ್‌!

370 ಹಾಗೂ 35ಎ ವಿಧಿಗಳನ್ನು ರದ್ದು ಪಡಿಸಿದ ಬೆನ್ನಲ್ಲೇ ಹರಿದಾಡಿದ ಕೆಲವು ಅಪರೂಪದ ನಗೆ ಚಟಾಕಿಗಳನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

ಜಮ್ಮು ಕಾಶ್ಮೀರದಲ್ಲಿ ಸೇನಾ ತರಬೇತಿ ಪಡೆಯುತ್ತಿರುವ ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿ ಭಾರತದ ಬೆಸ್ಟ್‌ ಫಿನಿಷರ್‌ ಎಂಬುದು ಮತ್ತೆ ಸಾಬೀತಾಯ್ತು. ಕಾಶ್ಮೀರಕ್ಕೆ ಹೋಗಿದ್ದೇ ತಡ 370, 35ಎ ವಿಧಿ ಫಿನಿಷ್‌!

==

ಕಾಶ್ಮೀರ ಕಾಯೋಕೆ ಒಬ್ಬ MSDನ ಕಳ್ಸಿ.. ಈ ಮೂರು ಜನ MSDಗಳು ಕಣಿವೆಯಲ್ಲಿ ಅಲ್ಲೋಲ ಕಲ್ಲೋಲ ಮಾಡಿದರು.

ಎಂಎಸ್‌ಡಿ-ಮಹೇಂದ್ರ ಸಿಂಗ್‌ ಧೋನಿ

M-ಮೋದಿ

S-ಶಾ

D-ದೋವಲ್‌

==

ಶ್ರೀನ​ಗ​ರ​ದ​ಲ್ಲಿ ಒಂದು 4 BHK ವಿಲ್ಲಾ ಬೇಕಿತ್ತು. ದಾಲ್‌ ನದಿ ತೀರ​ದಲ್ಲಿ ಆದ್ರೆ ಒಳ್ಳೆ​ಯ​ದಿ​ತ್ತು.

==

ಗುಂಡ ಕಾಶ್ಮೀ​ರಿ​ಯೊಂದಿಗೆ 500 ರು. ಕೊಟ್ಟು ಚೇಂಜ್‌ ಇದ್ರೆ ಕೊಡಿ ಎಂದು ಕೇಳಿದ್ದ​ಕ್ಕೆ ಕಾಶ್ಮೀರಿ 130 ಹಿಂದೆ ಕೊಡ್ತಾ​ನೆ. ಉಳಿದ 370 ಎಲ್ಲಿ ಎಂದು ಕೇಳಿದ್ರೆ ಅಮಿತ್‌ ಶಾ ತೆಗೆ​ದು​ಕೊಂಡು ಹೋಗಿ​ದ್ದಾರೆ ಎಂದು ಹೇಳೋ​ದಾ..!

==

ಮೋದಿ: ನಾನು ಏನು ಹೇಳು​ತ್ತೇನೆ ಅದನ್ನು ಮಾಡು​ತ್ತೇ​ನೆ

ಶಾ: ನಂದೇನು ಫಿಕ್ಸ್‌ ಇಲ್ಲ, ಹೇಳಲ್ಲ ಕೇಳಲ್ಲ ಏನ್‌ ಬೇಕಾದ್ರೂ ಮಾಡ್ತೇ​ನೆ

ರಾಗಾ: ಇವ​ರಿ​ಬ್ಬರು ಏನ್‌ ಹೇಳ್ತಾರೆ ಏನ್‌ ಮಾಡ್ತಾರೆ ಅನ್ನೋದು ನನಗೆ ಗೊತ್ತೇ ಆಗೋ​ದಿ​ಲ್ಲ

==

ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಇನ್ನು 370, 35 ಎ ರದ್ದಾಗಿದೆ. ಆದರೆ, ನಮ್ಮ ಬೆಂಗಳೂರಿನ ಬಿಎಂಟಿಸಿಯಲ್ಲಿ ಇವು ಚಾಲ್ತಿಯಲ್ಲಿವೆ. 35ಎ ಶ್ರೀನಗರದಿಂದ- ಕೆ.ಆರ್‌. ಮಾರ್ಕೆಟ್‌ ಹೋದರೆ, 370 ಬನ್ನೇರುಘಟ್ಟದಿಂದ- ಕೆ.ಆರ್‌.ಮಾರ್ಕೆಟ್‌ಗೆ ಹೋಗುತ್ತದೆ. ಜೈ ಬಿಎಂಟಿಸಿ!

 

Follow Us:
Download App:
  • android
  • ios