ಸೈನಿಕರ ಜತೆ ಧೋನಿ ವಾಲಿಬಾಲ್!
ಸೈನಿಕರ ಜತೆ ಧೋನಿ ವಾಲಿಬಾಲ್| ವಾಲಿಬಾಲ್ ಆಡುತ್ತಿರುವ ವಿಡಿಯೋ ಈಗ ವೈರಲ್
ನವದೆಹಲಿ[ಆ.05]: ಸೇನಾ ತರಬೇತಿ ಪಡೆಯುತ್ತಿರುವ ಕ್ರಿಕೆಟಿಗ, ಗೌರವ ಲೆಫ್ಟಿನೆಂಟ್ ಕರ್ನಲ್ ಮಹೇಂದ್ರ ಸಿಂಗ್ ಧೋನಿ ಸೈನಿಕರೊಂದಿಗೆ ವಾಲಿಬಾಲ್ ಆಡುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.
ಸೇನಾ ತರಬೇತಿ ಪಡೆಯಲು ಬಯಸಿದ್ದ ದೋನಿಗೆ ಜೂನ್. 31ರಿಂದ ಪ್ಯಾರಾ ಮಿಲಿಟರಿ ಪಡೆಯೊಂದಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ತರಬೇತಿಗೆ ಅನುಮತಿ ನೀಡಲಾಗಿತ್ತು. ಅದರಂತೆ ಸೇನಾ ಶಿಬಿರದಲ್ಲಿ ತರಬೇತಿ ಆರಂಭಿಸಿರುವ ದೋನಿ, ವಿರಾಮದ ವೇಳೆ ಸೈನಿಕರ ಜತೆ ವಾಲಿಬಾಲ್ ಆಡಿದ್ದಾರೆ.
ಧೋನಿಗೆ ಆ.15 ರವರೆಗೂ ಸೇನಾ ತರಬೇತಿ ನೀಡಲಾಗುತ್ತಿದೆ. ಈ ವೇಳೆ ಅವರು ಸೇನೆ ನಡೆಸುವ ಎಲ್ಲ ಕಾರ್ಯಗಳಲ್ಲಿ (ಕಾರ್ಯಾಚರಣೆ ಹೊರತುಪಡಿಸಿ)ಭಾಗವಹಿಸಲಿದ್ದಾರೆ.