ಕಾಮನ್‌ವೆಲ್ತ್ ಗೇಮ್ಸ್‌ನಿಂದ ಭಾರತದ ಸಮಯ, ಹಣ ವ್ಯರ್ಥ; IOA ಮುಖ್ಯಸ್ಥ!
ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟವನ್ನು ಬಹಿಷ್ಕರಿಸುವ ಭಾರತದ ನಿರ್ಧಾರ ಇದೀಗ ಬಲಗೊಳ್ಳುತ್ತಿದೆ. ಕ್ರೀಡಾಕೂಟದಿಂದ ಶೂಟಿಂಗ್ ತೆಗೆದುಹಾಕಿದ ಕಾರಣ ಭಾರತ ಕ್ರೀಡಾಕೂಟವನ್ನು ಬಹಿಷ್ಕರಿಸಲು ನಿರ್ಧರಿಸಿದೆ. ಈ ಕುರಿತು IOA ಮುಖ್ಯಸ್ಥ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ನವದೆಹಲಿ(ಸೆ.25): ಮುಂಬರುವ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಶೂಟಿಂಗ್ ತೆಗೆದು ಹಾಕಿದ ಮೇಲೆ ಭಾರತೀಯ ಒಲಿಂಪಿಕ್ ಅಸೋಸಿಯೇಶನ್(IOA) ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಶೂಟಿಂಗ್ ಸೇರಿಸದಿದ್ದರೆ, 2022ರ ಕಾಮನ್‌ವೆಲ್ತ್ ಗೇಮ್ಸ್‌ಗೆ ಬಹಿಷ್ಕಾರ ಹಾಕುವ ಎಚ್ಚರಿಕೆ ನೀಡಿದ IOA ಇದೀಗ, ಶೂಟಿಂಗ್ ಇಲ್ಲದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ನಮ್ಮ ಸಮಯವೂ ವ್ಯರ್ಥ, ಹಣವೂ ವ್ಯರ್ಥ ಎಂದಿದೆ.
ಇದನ್ನೂ ಓದಿ: 2 ಕೋಟಿ ಬಹುಮಾನ ಕೇಳಿದ್ದಕ್ಕೆ ಸಚಿವನಿಗೆ ಸಿಟ್ಟು..!
ಕಳೆದ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿನ 66 ಪದಕಗಳ ಪೈಕಿ 16 ಪದಕ ಶೂಟಿಂಗ್‌ನಿಂದ ಬಂದಿದೆ. ಇದರಲ್ಲಿ 7 ಚಿನ್ನದ ಪದಕಗಳಿವೆ. ಇದೀಗ ಉದ್ದೇಶ ಪೂರ್ವಕವಾಗಿ ಶೂಟಿಂಗ್ ತೆಗೆದುಕಾಕಿದರೆ ಆ ಕ್ರೀಡಾಕೂಟದಿಂದ ಭಾರತಕ್ಕೇನು ಪ್ರಯೋಜನವಿಲ್ಲ ಎಂದು IOA ಮುಖ್ಯಸ್ಥ ನರೀಂದರ್ ಬಾತ್ರ ಹೇಳಿದ್ದಾರೆ.
ಇದನ್ನೂ ಓದಿ: ಫೋಟೋದಲ್ಲಿ ಹಲ್ಲು ಬಿಟ್ಟಿದ್ದಕ್ಕೆ ಅಥ್ಲೀಟ್’ಗಳ ಮಾನ್ಯತೆ ರದ್ದು..!
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಶೂಟಿಂಗ್‌ನಲ್ಲಿ ಗರಿಷ್ಠ ಪದಕ ಗೆಲ್ಲುತ್ತಿದೆ. ಇದು ನಮ್ಮ ಶಕ್ತಿ. ಇದಕ್ಕಿದ್ದಂತೆ ಶೂಟಿಂಗ್ ತೆಗೆದು ಹಾಕಿದ್ದೇಕೆ? ಶೂಟಿಂಗ್ ತೆಗೆದುಹಾಕಿದ ಕಾಮನ್‌ವೆಲ್ತ್ ಫೆಡರೇಶನ್‌ಗೆ ಸಿಕ್ಕೇದ್ದೇನು? ಸುಮ್ಮಣೆ ಹಣ, ಸಮಯ ವ್ಯರ್ಥ ಮಾಡುವುದಕ್ಕಿಂತೆ ಇದೇ ಸಮಯದಲ್ಲಿ ಬೇರೆ ಕ್ರೀಡಾಕೂಟಕ್ಕೆ ಸಜ್ಜಾದರೆ ಒಲಿಂಪಿಕ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಬಹುದು ಎಂದು ಬಾತ್ರ ಹೇಳಿದ್ದಾರೆ. ಈ ಮೂಲಕ ಕಾಮನ್‌ವೆಲ್ತ್ ಗೇಮ್ಸ್ ಬಹಿಷ್ಕರಿಸುವುದು ಬಹುತೇಕ ಪಕ್ಕ ಎಂದಿದ್ದಾರೆ.
ಇದನ್ನೂ ಓದಿ: ಕಾಮನ್‌ವೆಲ್ತ್‌ಗೆ ಬಹಿಷ್ಕಾರ: ಐಒಎಗೆ ಹಿನ್ನಡೆ!
ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಶೂಟಿಂಗ್ ಸೇರಿಸುವಂತೆ ಭಾರತ ನಿರಂತರ ಒತ್ತಡ ತರುತ್ತಿದೆ. ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಕೂಡ ಈ ನಿಟ್ಟಿನಲ್ಲಿ ಗಮನ ಹರಿಸಿದ್ದಾರೆ. ನವೆಂಬರ್ 14 ರಂದು ಈ ಕುರಿತು ಕಾಮನ್‌ವೆಲ್ತ್ ಗೇಮ್ಸ್ ಫೆಡರೇಶನ್ ಹಾಗೂ ಭಾರತೀಯ ಒಲಿಂಪಿಕ್ಸ ಸಂಸ್ಥೆ ಸಭೆ ಸೇರಲಿದೆ.