ಫೋಟೋದಲ್ಲಿ ಹಲ್ಲು ಬಿಟ್ಟಿದ್ದಕ್ಕೆ ಅಥ್ಲೀಟ್’ಗಳ ಮಾನ್ಯತೆ ರದ್ದು..!
19 ಅಥ್ಲೀಟ್’ಗಳ ಪಟ್ಟಿಯಲ್ಲಿ ನಿರ್ಮಲಾ ಶಿರೋನ್ ಹೊರತುಪಡಿಸಿ ಅಂತಹ ದೊಡ್ಡ ಹೆಸರುಗಳೇನು ಇಲ್ಲ. ಮಹಿಳೆಯರ 400 ಮೀಟರ್ ವಿಭಾಗದಲ್ಲಿ ಏಷ್ಯಾನ್ ಗೇಮ್ಸ್ ಹಾಗೂ ರಿಯೊ ಒಲಿಂಪಿಕ್ಸ್ ಪ್ರತಿನಿಧಿಸಿದ್ದ ನಿರ್ಮಲಾ ಶಿರೋನ್ ಫೋಟೊ ಹಿನ್ನಲೆ ಬಿಳಿಯಿಲ್ಲ ಎಂದು ಅರ್ಜಿಯನ್ನು ರದ್ದುಗೊಳಿಸಿದೆ.
ನವದೆಹಲಿ[ಮೇ.23]: ವಿಚಿತ್ರ ಎನಿಸಿದರೂ ಇದು ನಿಜ. ಮುಂಬರುವ ಏಷ್ಯನ್ ಗೇಮ್ಸ್‌ಗೆ ಸಲ್ಲಿಸಿರುವ ಮಾನ್ಯತೆ ಅರ್ಜಿ ಜತೆ ಅಗತ್ಯಕ್ಕಿಂತ ಹೆಚ್ಚು ನಗು ಮುಖದ ಫೋಟೋವನ್ನು ಲಗತ್ತಿಸಿರುವ ಕಾರಣ, ಭಾರತದ 19 ಅಥ್ಲೀಟ್‌ಗಳು ಹಾಗೂ ಇಬ್ಬರು ಅಧಿಕಾರಿಗಳ ಮಾನ್ಯತೆಯನ್ನು ಆಯೋಜಕರು ರದ್ದುಪಡಿಸಿದ್ದಾರೆ.
ಮಾನದಂಡಕ್ಕೆ ಅನುಗುಣವಾದ ಫೋಟೋಗಳನ್ನು ಲಗತ್ತಿಸಿ ಮರು ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಅರ್ಜಿ ಸಲ್ಲಿಸಲು ಗಡುವು ಮುಗಿದಿದ್ದರೂ, ವಿಶೇಷ ಪ್ರಕರಣವಾಗಿರುವ ಕಾರಣ ಭಾರತಕ್ಕೆ ಮರು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತಿದೆ. ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಸಂಭವನೀಯರು ಹಲವು ತಿಂಗಳು ಮುಂಚಿತವಾಗಿಯೇ ಮಾನ್ಯತೆಗೆ ಅರ್ಜಿ ಸಲ್ಲಿಸಬೇಕಿದೆ. ಅಂತಿಮವಾಗಿ ಆಯ್ಕೆಯಾಗುವ ಅಥ್ಲೀಟ್‌ಗಳು ಕ್ರೀಡಾಕೂಟಕ್ಕೆ ತೆರಳಲಿದ್ದಾರೆ.