ಯಾರದೋ ಕೇಸಲ್ಲಿ ಸಿಲುಕಿದ ಭಾರತ ಕ್ರಿಕೆಟ್ ಸಿಬ್ಬಂದಿ..!
ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಭಾರತದ ಸಹಾಯಕ ಸಿಬ್ಬಂದಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ಈ ಬಗ್ಗೆ ನಿಜವಾದ ಸತ್ಯ ಹೊರಬಿದ್ದಿದೆ. ಯಾರು ಮಾಡಿದ ತಪ್ಪಿಗೆ ಭಾರತೀಯನನ್ನು ಸಿಕ್ಕಿಸಲಾಗಿತ್ತು. ತನಿಖೆ ನಂತರ ಸತ್ಯ ಬಯಲಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ: ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಭಾರತ ಕ್ರಿಕೆಟ್ ತಂಡ ತೀವ್ರ ಮುಜುಗರಕ್ಕೊಳಗಾದ ಘಟನೆಯೊಂದು ಬೆಳಕಿಗೆ ಬಂದಿದೆ.
ಮುಗಿಯಿತಾ ಶಿಖರ್ ಧವನ್ ಟೀಂ ಇಂಡಿಯಾ ಜರ್ನಿ..?
ಭಾರತ ಕ್ರಿಕೆಟ್ ತಂಡದ ಕಿರಿಯ ಸಹಾಯಕ ಸಿಬ್ಬಂದಿ ಆ್ಯಂಟಿಗಾದ ಮಹಿಳಾ ಹೋಟೆಲ್ ಸಿಬ್ಬಂದಿ ಜೊತೆ ಅನುಚಿತ ವರ್ತನೆ ತೋರಿದ್ದ ಆರೋಪ ಎದುರಿಸಿದ್ದರು. ಆದರೆ ಬೇರೊಬ್ಬ ವ್ಯಕ್ತಿ ಬದಲಿಗೆ ಕಿರಿಯ ಸಹಾಯಕ ಸಿಬ್ಬಂದಿಯನ್ನು ತಪ್ಪಾಗಿ ಗುರುತಿಸಲಾಗಿತ್ತು ಎನ್ನಲಾಗಿದೆ.
ಕೊಹ್ಲಿ ಪಡೆ ವ್ಯವಸ್ಥಾಪಕನಿಗೆ BCCI ಛೀಮಾರಿ!
ಮಹಿಳಾ ಹೋಟೆಲ್ ಸಿಬ್ಬಂದಿ ದೂರಿನ ಮೇರೆಗೆ ಆ್ಯಂಟಿಗಾ ಪೊಲೀಸರು ತನಿಖೆ ನಡೆಸಿದ್ದು, ತನಿಖೆ ವೇಳೆ ಪ್ರಕರಣದಲ್ಲಿ ಭಾರತ ತಂಡದ ಕಿರಿಯ ಸಹಾಯಕ ಸಿಬ್ಬಂದಿ ಪಾತ್ರವಿಲ್ಲ ಎಂಬುದು ಸ್ಪಷ್ಟವಾಗಿದೆ. ಪೊಲೀಸರು ಮಹಿಳೆಗೆ ಭಾರತ ತಂಡದ ಸಹಾಯಕ ಸಿಬ್ಬಂದಿಗಳ ಚಿತ್ರಗಳನ್ನು ನೀಡಿ ವ್ಯಕ್ತಿಯನ್ನು ಗುರುತಿಸುವಂತೆ ಹೇಳಿದ್ದರು. ಈ ವೇಳೆ ಕಿರಿಯ ಸಹಾಯಕ ಸಿಬ್ಬಂದಿಯನ್ನು ಗುರುತಿಸಿಲ್ಲ.
KSCA ಚುನಾವಣೆ: KSCAಗೆ ಬಿನ್ನಿ ಅಧ್ಯಕ್ಷ..?
ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದ ಕೊಠಡಿಯಲ್ಲಿ ಭಾರತ ತಂಡಕ್ಕೆ ಸಂಬಂಧಿಸಿದ ಯಾವುದೇ ವ್ಯಕ್ತಿ ವಾಸ್ತವ್ಯವಿರಲಿಲ್ಲ. ವಿಂಡೀಸ್ ಪ್ರವಾಸಕ್ಕೆ ತಂಡದ ವ್ಯವಸ್ಥಾಪಕರಾಗಿದ್ದ ಸುನಿಲ್ ಸುಬ್ರಮಣಿಯಂ, ಬಿಸಿಸಿಐಗೆ ಇ-ಮೇಲ್ ಮೂಲಕ ವಿವರಿಸಿದ್ದಾರೆ.
ಶೀಘ್ರದಲ್ಲೇ ಭಾರತದ ನಂ.4 ಸಮಸ್ಯೆಗೆ ಪರಿಹಾರ; ಹಳೇ ಹುಲಿ ಮತ್ತೆ ತಂಡಕ್ಕೆ!
ಭಾರತ ತಂಡವು ಕಳೆದ ತಿಂಗಳಲ್ಲಿ ವೆಸ್ಟ್ ಇಂಡೀಸ್ ಪ್ರವಾಸವನ್ನು ಕೈಗೊಂಡಿತ್ತು. ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ್ದ ವಿರಾಟ್ ಪಡೆ ಆ ಬಳಿಕ ಏಕದಿನ ಸರಣಿಯನ್ನು 2-0 ಅಂತರದಲ್ಲಿ ಜಯಿಸಿತ್ತು. ಇನ್ನು ಟೆಸ್ಟ್ ಸರಣಿಯನ್ನು ಕೂಡಾ 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡುವುದರೊಂದಿಗೆ ಅಜೇಯವಾಗಿ ಕೆರಿಬಿಯನ್ ಪ್ರವಾಸವನ್ನು ಮುಗಿಸಿತ್ತು. ಇದೇ ವೇಳೆ ವಿರಾಟ್ ಕೊಹ್ಲಿ ಭಾರತ ಪರ ಅತಿಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದುಕೊಟ್ಟ ನಾಯಕ ಎನ್ನುವ ಕೀರ್ತಿಗೂ ಭಾಜನರಾಗಿದ್ದಾರು.