ಶೀಘ್ರದಲ್ಲೇ ಭಾರತದ ನಂ.4 ಸಮಸ್ಯೆಗೆ ಪರಿಹಾರ; ಹಳೇ ಹುಲಿ ಮತ್ತೆ ತಂಡಕ್ಕೆ!

ಟೀಂ ಇಂಡಿಯಾ ಸದ್ಯ ನಾಲ್ಕನೇ ಕ್ರಮಾಂಕದ ಸಮಸ್ಯೆ ಎದುರಿಸುತ್ತಿದೆ. ಶೀಘ್ರದಲ್ಲೇ ಈ  ಸಮಸ್ಯೆ ಪರಿಹಾರವಾಗಲಿದೆ. ಕಾರಣ ಹಳೇ ಹುಲಿ ಮತ್ತೆ ತಂಡ ಸೇರಿಕೊಳ್ಳಲು ಸಜ್ಜಾಗಿದ್ದಾರೆ. 

Suresh raina practice hard to come back team india

ಚೆನ್ನೈ(ಸೆ.27): ಕಳೆದ 2 ವರ್ಷದಿಂದ ಟೀಂ ಇಂಡಿಯಾ ಮಧ್ಯಮ ಕ್ರಮಾಂಕದಲ್ಲಿ ಸಮಸ್ಯೆ ಎದುರಿಸುತ್ತಿದೆ. ಅದರಲ್ಲೂ ನಂ.4ರಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡೋ ಬ್ಯಾಟ್ಸ್‌ಮನ್ ಹುಡುಕಾಟ ಇನ್ನೂ ನಿಂತಿಲ್ಲ. ನಾಲ್ಕನೇ ಕ್ರಮಾಂಕದಲ್ಲಿನ ಸಮಸ್ಯೆಯಿಂದಲೇ ಭಾರತ 2019ರ ವಿಶ್ವಕಪ್ ಟೂರ್ನಿಯಲ್ಲೂ ಹಿನ್ನಡೆ ಅನುಭವಿಸಿತ್ತು. ಶೀಘ್ರದಲ್ಲೇ ನಂ.4ರ ಸಮಸ್ಯೆಗೆ ಪರಿಹಾರ ಸಿಗಲಿದೆ.

ಇದನ್ನೂ ಓದಿ: ಆರ್ಟಿಕಲ್ 370 ರದ್ದು: ಕಾಶ್ಮೀರಿ ಪಂಡಿತ್ ಸುರೇಶ್ ರೈನಾ ಸಂತಸ!

2011ರ ವಿಶ್ವಕಪ್, 2013ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಳಲ್ಲಿ ಭಾರತ ನಂ.4ರ ಸಮಸ್ಯೆ ಎದುರಿಸಿಲ್ಲ. 2016ರ ವರೆಗೂ ನಾಲ್ಕನೇ ಕ್ರಮಾಂಕದಲ್ಲಿ ಹಲವು ಆಯ್ಕೆಗಳಿತ್ತು. ಇದೀಗ ಆಯ್ಕೆಗಳಿದ್ದರೂ ಯಾರೂ ಖಾಯಂ ಆಗುತ್ತಿಲ್ಲ. ಭಾರತ ತಂಡದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಸಮರ್ಥವಾಗಿ ಬ್ಯಾಟ್ ಬೀಸಿ, ಹಲವು ಐತಿಹಾಸಿಕ ಗೆಲುವಿನಲ್ಲಿ ಕಾರಣರಾಗಿರುವ ಸುರೇಶ್ ರೈನಾ ಇದೀಗ ತಂಡಕ್ಕೆ ಕಮ್‌ಬ್ಯಾಕ್ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಮೂಲಕ ಭಾರತದ ನಂ.4 ಸಮಸ್ಯೆಗೆ ಪರಿಹಾರ ನೀಡುವ ವಿಶ್ವಾಸದಲ್ಲಿದ್ದಾರೆ.

ಇದನ್ನೂ ಓದಿ: CSK ವಿಸಿಲ್ ಪೋಡು ಸಾಂಗ್ ಹಾಡಿದ ರೈನಾ!

32ರ ಹರೆಯದ  ಸುರೇಶ್ ರೈನಾ 2018ರಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಫಿಟ್ನೆಸ್ ಹಾಗೂ ಫಾರ್ಮ್ ಸಮಸ್ಯೆಯಿಂದ  ತಂಡದಿಂದ ಹೊರಬಿದ್ದ ರೈನಾ ಇದೀಗ 2020ರ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ತಂಡ ಸೇರಿಕೊಳ್ಳೋ ವಿಶ್ವಾಸದಲ್ಲಿದ್ದಾರೆ. 

ಟೀಂ ಇಂಡಿಯಾದ ನಾಲ್ಕನೇ ಕ್ರಮಾಂಕದಲ್ಲಿನ ಸಮಸ್ಯೆಗೆ ನಾನು ಉತ್ತರ ನೀಡಲಿದ್ದೇನೆ. ಈಗಾಗಲೇ ನಂ.4ರಲ್ಲಿ ಬ್ಯಾಟಿಂಗ್ ಮಾಡಿದ್ದೇನೆ. ಒತ್ತಡದ ಸಂದರ್ಭದಲ್ಲಿ ರನ್‌ಗಳಿಸಿದ್ದೇನೆ. ಇದೀಗ ದೇಸಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡೋ ವಿಶ್ವಾಸವಿದೆ. ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕರೆ ಖಂಡಿತ  ಭಾರತದ ಮಧ್ಯಮಕ್ರಮಾಂಕಕ್ಕೆ ನೆರವಾಗಲಿದ್ದೇನೆ ಎಂದು ರೈನಾ ಹೇಳಿದ್ದಾರೆ.

ಏಕದಿನದಲ್ಲಿ ಸುರೇಶ್ ರೈನಾ 226 ಪಂದ್ಯಗಳಿಂದ 5615 ರನ್ ಸಿಡಿಸಿದ್ದಾರೆ. 5 ಶತಕ ಹಾಗೂ 36 ಅರ್ಧಶತಕ ದಾಖಲಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 78 ಪಂದ್ಯಗಳಿಂದ 1604 ರನ್ ಸಿಡಿಸಿದ್ದಾರೆ. ಚುಟುಕು ಮಾದರಿಯಲ್ಲಿ 1 ಶತಕ ಹಾಗೂ 5 ಹಾಫ್ ಸೆಂಚುರಿ ಸಿಡಿಸಿದ್ದಾರೆ. 

ಸೆ.27ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Latest Videos
Follow Us:
Download App:
  • android
  • ios