200 ಮೀಟರ್ ರೇಸ್ ಗೆದ್ದ 81 ವರ್ಷದ ಬೆಂಗಳೂರಿನ ಅಜ್ಜಿ..!
ನಾವು ಕಥೆ ಹೇಳೋಕು ಸೈ, ರೇಸ್‌ನಲ್ಲಿ ಗೆಲ್ಲೋಕು ಜೈ ಎನ್ನುವಂತಿದೆ ಬೆಂಗಳೂರಿನ ಈ ಅಜ್ಜಿಯರ ಕಥೆ. ವಯಸ್ಸು ಎನ್ನುವುದು ಕೇವಲ ಸಂಖ್ಯೆ ಅಷ್ಟೇ ಎನ್ನುವುದನ್ನು ಬೆಂಗಳೂರಿನ ಅಜ್ಜಿಯರು ಸಾಬೀತು ಮಾಡಿದ್ದಾರೆ. ಈ ಅಜ್ಜಿಯರ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಅಷ್ಟಕ್ಕೂ ಏನಿದು ರೇಸ್ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ..
ಬೆಂಗಳೂರು[ಸೆ.22]: ಹಿರಿಯರ ದಿನಾಚರಣೆ ಅಂಗವಾಗಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ನಡಿಗೆ ಸ್ಪರ್ಧೆಯಲ್ಲಿ 81 ವರ್ಷದ ಲಲಿತಮ್ಮ ಎನ್ನುವ ಅಜ್ಜಿ ಜಯಶಾಲಿಯಾಗುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಅಲ್ಲದೇ ವಯಸ್ಸು ಬರೀ ಸಂಖ್ಯೆಯಷ್ಟೇ ಎನ್ನುವುದನ್ನು ಸಾಬೀತು ಮಾಡಿದ್ದಾರೆ.
ಬೇಡವೇ ಬೇಡ ಎಲಿವೇಟೆಡ್ ಕಾರಿಡಾರ್...!: ಬದಲಿ ಪರಿಹಾರವೂ ಇಲ್ಲಿದೆ!
ಹೌದು, ಅಕ್ಟೋಬರ್ 01ರಂದು ವಿಶ್ವ ಹಿರಿಯರ ದಿನವನ್ನಾಗಿ ಆಚರಿಸಲಾಗುತ್ತದೆ. ಇದರ ಅಂಗವಾಗಿ ರಾಜ್ಯ ಸರ್ಕಾರವು ನಗರದ ಹೃದಯ ಭಾಗದಲ್ಲಿರುವ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಹಿರಿಯ ನಾಗರೀಕರಿಗಾಗಿ ನಡಿಗೆ ಸ್ಪರ್ಧೆಯನ್ನು ಆಯೋಜಿಸಿತ್ತು. ಇದರಲ್ಲಿ ಈ ಸ್ಫರ್ಧೆಯಲ್ಲಿ 250ಕ್ಕೂ ಅಧಿಕ ಹಿರಿಯ ನಾಗರೀಕರು ಭಾಗವಹಿಸಿದ್ದರು. 100 ಮೀಟರ್ ನಡಿಗೆ ಸ್ಪರ್ಧೆಯಲ್ಲಿ 72 ವರ್ಷದ ಸರೋಜಮ್ಮ ಮೊದಲು ಗುರಿ ಮುಟ್ಟಿದರೆ, 200 ಮೀಟರ್ ರೇಸ್’ನಲ್ಲಿ 81 ವರ್ಷದ ಅಜ್ಜಿ ಲಲಿತಮ್ಮ ಎಲ್ಲರನ್ನು ಹಿಂದಿಕ್ಕಿ ಗೆಲುವಿನ ನಗೆ ಬೀರಿದರು.
ಸುಪ್ರೀಂ ಆದೇಶದಂತೆ ಹೆಚ್ಚುತ್ತಾ ವೃದ್ಧರ ಪಿಂಚಣಿ?
ಈ ಇಬ್ಬರು ಅಜ್ಜಿಯರ ಸಾಧನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.