ಡೆಹ್ರಾಡೂನ್[ಮಾ.18] ಅಸ್ಗರ್ ಆಫ್ಘಾನ್ ನೇತೃತ್ವದ ಆಫ್ಘಾನಿಸ್ತಾನ ಚೊಚ್ಚಲ ಟೆಸ್ಟ್ ಪಂದ್ಯ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಐರ್ಲೆಂಡ್ ವಿರುದ್ಧ 7 ವಿಕೆಟ್’ಗಳ ಅಂತರದಲ್ಲಿ ಜಯ ಸಾಧಿಸುವ ಮೂಲಕ ಆಫ್ಘಾನಿಸ್ತಾನ ಮೊದಲ ಟೆಸ್ಟ್ ಗೆಲುವಿನ ಸಿಹಿಯುಂಡಿದೆ.

ಇಂಡೋ-ಆಫ್ಘಾನ್ ಟೆಸ್ಟ್: ಎರಡೇ ದಿನಕ್ಕೆ ಆಟ ಮುಗಿಸಿದ ಆಫ್ಘಾನ್..!

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಐರ್ಲೆಂಡ್ ಮೊದಲ ಇನ್ನಿಂಗ್ಸ್’ನಲ್ಲಿ ಕೇವಲ 172 ರನ್’ಗಳಿಗೆ ಸರ್ವಪತನ ಕಂಡಿತ್ತು. ಇನ್ನು ಮೊದಲ ಇನ್ನಿಂಗ್ಸ್ ಆರಂಭಿಸಿದ ಆಫ್ಘನ್ ರೆಹಮತ್ ಶಾ[98] ಶತಕವಂಚಿತ ಬ್ಯಾಟಿಂಗ್ ಹಾಗೂ ಹಸ್ಮತುಲ್ಲಾ ಶಾಹಿದಿ[61] ಹಾಗೂ ಅಸ್ಗರ್ ಅಫ್ಘಾನ್[67] ಆಕರ್ಷಕ ಅರ್ಧಶತಕಗಳ ನೆರವಿನಿಂದ 314 ರನ್ ಬಾರಿಸಿ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆಯಿತು. ಇನ್ನು ಎರಡನೇ ಇನ್ನಿಂಗ್ಸ್ ಆರಂಭಿಸಿದ ಐರ್ಲೆಂಡ್ ಆ್ಯಂಡ್ರೂ ಬಲ್ಬಿರಿನ್[82] ಹಾಗೂ ಕೆವಿನ್ ಓ’ಬ್ರಿಯಾನ್[52] ಬ್ಯಾಟಿಂಗ್ ಹೊರತಾಗಿಯೂ ರಶೀದ್ ಖಾನ್[82/5] ದಾಳಿಗೆ ನಲುಗಿದ ಐರ್ಲೆಂಡ್ ಕೇವಲ 288 ರನ್’ಗಳಿಗೆ ಆಲೌಟ್ ಆಯಿತು. ಈ ಮೂಲಕ ರಶೀದ್ ಖಾನ್ ಟೆಸ್ಟ್ ಏಕದಿನ ಹಾಗೂ ಟಿ20 ಕ್ರಿಕೆಟ್’ನಲ್ಲಿ 5+ ವಿಕೆಟ್ ಪಡೆದ ಜಗತ್ತಿನ 9ನೇ ಬೌಲರ್ ಎನ್ನುವ ದಾಖಲೆಯನ್ನು ಬರೆದರು. ಗೆಲುವಿಗೆ 146 ರನ್’ಗಳ ಗುರಿ ಪಡೆದಿದ್ದ ಆಫ್ಘಾನಿಸ್ತಾನ 3ನೇ ದಿನದಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 29 ರನ್ ಬಾರಿಸಿತ್ತು. ನಾಲ್ಕನೇ ಇಶ್ನಾತುಲ್ಲಾ ಜನ್ನತ್[65] ಹಾಗೂ ರೆಹಮತ್ ಶಾ[76] ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಭರ್ಜರಿ ಜಯ ದಾಖಲಿಸಿತು.

ಕಳೆದ ವರ್ಷವಷ್ಟೇ ಭಾರತ ವಿರುದ್ಧ ಚೊಚ್ಚಲ ಪಂದ್ಯವಾಡಿದ್ದ ಆಫ್ಘಾನಿಸ್ತಾನ ಕೇವಲ ಎರಡು ದಿನದಲ್ಲೇ ಸೋಲೊಪ್ಪಿಕೊಂಡಿತ್ತು. ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಕ್ರಿಕೆಟ್ ಶಿಶು ಆಫ್ಘನ್ ತಂಡವನ್ನು ಟೀಂ ಇಂಡಿಯಾ ಅನಾಯಾಸವಾಗಿ ಮಣಿಸಿತ್ತು. 

ಟೆಸ್ಟ್ ಸರಣಿ ಗೆದ್ದರೂ ಆಫ್ಘಾನ್‌ಗೆ ಚಾಂಪಿಯನ್ ಪಟ್ಟ ನೀಡಿದ ಭಾರತ

ಐರ್ಲೆಂಡ್ ವಿರುದ್ಧ ಆಫ್ಘಾನಿಸ್ತಾನ ಟೆಸ್ಟ್ ಪಂದ್ಯವನ್ನು ಜಯಿಸುವ ಮೂಲಕ ಅತಿ ಕಡಿಮೆ ಟೆಸ್ಟ್ ಪಂದ್ಯಗಳನ್ನಾಡಿ ಗೆಲುವು ಸಾಧಿಸಿದ ತಂಡಗಳಲ್ಲಿ ಒಂದು ಎಂಬ ಕೀರ್ತಿಗೆ ಆಫ್ಘಾನ್ ತಂಡ ಪಾತ್ರವಾಗಿದೆ. ಆಡಿದ ಕೇವಲ 2 ಪಂದ್ಯಗಳಲ್ಲೇ ಆಫ್ಘನ್ ಗೆಲುವಿನ ಸಿಹಿ ಕಂಡಿದ್ದರೆ, ಭಾರತ ಬರೋಬ್ಬರಿ 20 ವರ್ಷಗಳ ಬಳಿಕ 25 ಪಂದ್ಯಗಳನ್ನಾಡಿ ಮೊದಲ ಗೆಲುವು ಕಂಡಿತ್ತು. 1933ರಿಂದ ಟೆಸ್ಟ್ ಆಡಲು ಆರಂಭಿಸಿದ್ದ ಟೀಂ ಇಂಡಿಯಾ, 1952ರಲ್ಲಿ ಮೊದಲ ಟೆಸ್ಟ್ ಗೆಲುವು ದಾಖಲಿಸಿತ್ತು. ಇಂಗ್ಲೆಂಡ್ ವಿರುದ್ಧ ಮದ್ರಾಸ್’ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಚೊಚ್ಚಲ ಗೆಲುವು ದಾಖಲಿಸಿತ್ತು. ಇನ್ನು ನ್ಯೂಜಿಲೆಂಡ್ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿ 25 ವರ್ಷಗಳ ಬಳಿಕ 45 ಪಂದ್ಯಗಳನ್ನಾಡಿ ಚೊಚ್ಚಲ ಟೆಸ್ಟ್  ಗೆಲುವು ದಾಖಲಿಸಿತ್ತು. ಇನ್ನು ಆಸ್ಟ್ರೇಲಿಯಾ 1877ರಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ಮೊದಲ ಟೆಸ್ಟ್ ಪಂದ್ಯದಲ್ಲೇ ಗೆಲುವು ಸಾಧಿಸಿ ಚಾರಿತ್ರಿಕ ಸಾಧನೆ ಮಾಡಿತ್ತು. 

ಯಾವ ತಂಡ ಎಷ್ಟು ಪಂದ್ಯಗಳನ್ನಾಡಿದ ಬಳಿಕ ಮೊದಲ ಟೆಸ್ಟ್ ಗೆಲುವು ಸಾಧಿಸಿತ್ತು ಎನ್ನುವುದರ ವಿವರ ಇಲ್ಲಿದೆ ನೋಡಿ...

ಇದನ್ನೂ ಓದಿ: ಆಫ್ಘಾನಿಸ್ತಾನ ಖಂಡಿತಾ ಮುಂದಿನ ಟೆಸ್ಟ್ ಪಂದ್ಯ ಗೆಲ್ಲಬಹುದು..!