ಆಫ್ಘಾನಿಸ್ತಾನ ಖಂಡಿತಾ ಮುಂದಿನ ಟೆಸ್ಟ್ ಪಂದ್ಯ ಗೆಲ್ಲಬಹುದು..!

Afghanistan set to play their next Test match in 2019
Highlights

ಆಫ್ಘಾನ್ ಬೌಲರ್ ಮೊದಲ ಇನ್ನಿಂಗ್ಸ್’ನಲ್ಲಿ ಭಾರತದ 10 ವಿಕೆಟ್ ಕಬಳಿಸುವಲ್ಲಿ ಸಫಲರಾಗಿದ್ದರು. ಆದರೆ ಬ್ಯಾಟ್ಸ್’ಮನ್’ಗಳ ದಯಾನೀಯ ವೈಫಲ್ಯ ಆಫ್ಘಾನ್ ಪಡೆಗೆ ಮುಳುವಾಯಿತು. ಆದರೆ ಇದೀಗ ಆಫ್ಘಾನ್ ಮುಂದಿನ ಟೆಸ್ಟ್ ಸರಣಿಯಾಡಲು ವೇದಿಕೆ ಸಜ್ಜಾಗಿದೆ. 

ಬೆಂಗಳೂರು[ಜೂ.16]: ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಭಾರತದೆದುರು ಹೀನಾಯ ಸೋಲು ಕಂಡಿದೆ. ಕೇವಲ ಎರಡು ದಿನಗಳೊಳಗಾಗಿ ನಂ.1 ಟೆಸ್ಟ್ ತಂಡ ಭಾರತದೆದುರು ಆಫ್ಘಾನ್ ಶರಣಾಗಿದೆ.

ಆಫ್ಘಾನ್ ಬೌಲರ್ ಮೊದಲ ಇನ್ನಿಂಗ್ಸ್’ನಲ್ಲಿ ಭಾರತದ 10 ವಿಕೆಟ್ ಕಬಳಿಸುವಲ್ಲಿ ಸಫಲರಾಗಿದ್ದರು. ಆದರೆ ಬ್ಯಾಟ್ಸ್’ಮನ್’ಗಳ ದಯಾನೀಯ ವೈಫಲ್ಯ ಆಫ್ಘಾನ್ ಪಡೆಗೆ ಮುಳುವಾಯಿತು. ಆದರೆ ಇದೀಗ ಆಫ್ಘಾನ್ ಮುಂದಿನ ಟೆಸ್ಟ್ ಸರಣಿಯಾಡಲು ವೇದಿಕೆ ಸಜ್ಜಾಗಿದೆ. 

ಹೌದು, 2019ರ ಫೆಬ್ರವರಿಯಲ್ಲಿ ಆಫ್ಘಾನಿಸ್ತಾನ ತಂಡವು ಐರ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯವನ್ನಾಡಲಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಆಫ್ಘಾನಿಸ್ತಾನ ಟೆಸ್ಟ್ ತಂಡದ ಸಿಇಓ ಶಫೀಕ್ ಸ್ಟಾನಿಕ್ಜೈ, ನಾವೀಗ 2019ರ ವಿಶ್ವಕಪ್ ಗುರಿಯಾಗಿಟ್ಟುಕೊಂಡು ಅಭ್ಯಾಸ ನಡೆಸುತ್ತೇವೆ. ಆಗಸ್ಟ್ ತಿಂಗಳಲ್ಲಿ ತಂಡ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. 2019ರ ವಿಶ್ವಕಪ್ ಜತೆಗೆ ಫೆಬ್ರವರಿಯಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯದ ಕುರಿತೂ ಗಮನ ಹರಿಸುತ್ತೇವೆ ಎಂದು ಹೇಳಿದ್ದಾರೆ. 
ಐರ್ಲೆಂಡ್ ಹಾಗೂ ಆಫ್ಘಾನಿಸ್ತಾನ ತಂಡಗಳು ಕ್ರಮವಾಗಿ [11 ಮತ್ತು 12] ಐಸಿಸಿ ಟೆಸ್ಟ್ ಮಾನ್ಯತೆ ಪಡೆದಿವೆ. ಐರ್ಲೆಂಡ್ ಪಾಕಿಸ್ತಾನದ ವಿರುದ್ಧ ಚೊಚ್ಚಲ ಪಂದ್ಯವನ್ನಾಡಿ ಸೋಲು ಅನುಭವಿಸಿತ್ತು.

loader