ತೋಟದ ಮನೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ಚಿರತೆ ದಾಳಿ ನಡೆಸಿ ಬಲಿ ಪಡೆದ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಜಾಲಹಳ್ಳಿ ಗ್ರಾಮದ ಮುದ್ದುರಂಗಪ್ಪ ಎಂಬುವವರಿಗೆ ಸೇರಿದ ಹಸು. ಎರಡು ವರ್ಷ ಪ್ರಾಯದ ಹಸುವಿನ ಮೇಲೆ ದಾಳಿ ನಡೆಸಿರುವ ಚಿರತೆ ಅರ್ಧ ತಿಂದು ಓಡಿಹೋಗಿದೆ.
Karnataka Districts Mar 4, 2024, 9:45 AM IST
ಬೇಸಿಗೆ ಆರಂಭಕ್ಕೂ ಮುನ್ನವೇ ಚಿತ್ರದುರ್ಗದ ಜೋಗಿಮಟ್ಟಿ ಅರಣ್ಯಧಾಮದಲ್ಲಿ ಎಲ್ಲ ವನ್ಯಜೀವಿಗಳಿಗೆ ನೀರಿನ ಹಾಹಾಕಾರ ಶುರುವಾಗಿದೆ.
Karnataka Districts Mar 3, 2024, 6:37 PM IST
ದೇಶಾದ್ಯಂತ 2018-2022ರ 4 ವರ್ಷದ ಅವಧಿಯಲ್ಲಿ 1,022 ಚಿರತೆಗಳು ಹೆಚ್ಚಳವಾಗಿದ್ದು, 2022ರ ಅಂತ್ಯದಲ್ಲಿ ಸುಮಾರು 13,874 ಚಿರತೆಗಳಿವೆ ಎಂದು 'ಭಾರತದಲ್ಲಿ ಚಿರತೆಗಳ ಸ್ಥಿತಿಗತಿ' ಎಂಬ ಕೇಂದ್ರ ಪರಿಸರ ಸಚಿವಾಲಯದ ವರದಿ ತಿಳಿಸಿದೆ.
India Mar 1, 2024, 12:17 PM IST
ಮದುವೆಗೂ ಮುನ್ನ ಖಾಸಗಿ ಟಿವಿಗೆ ನೀಡಿದ ಸಂದರ್ಶನಲ್ಲಿ ಅನಂತ್ ಅಂಬಾನಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ತಂದೆ ಮುಖೇಶ್ ಅಂಬಾನಿ, ಸಹೋದರ ಆಕಾಶ್ ಹಾಗೂ ಸಹೋದರಿ ಇಶಾ ಅಂಬಾನಿ ಜೊತೆಗಿನ ಸಂಬಂಧದ ಬಗ್ಗೆಯೂ ಅವರವು ವಿವರವಾಗಿ ತಿಳಿಸಿದ್ದಾರೆ.
India Feb 29, 2024, 5:10 PM IST
ಅಗತ್ಯ ಮಾಹಿತಿ ನೀಡಿದರೆ ಸಚಿವ ಭೂಪೇಂದ್ರ ಯಾಧವ್ ಅವರೊಂದಿಗೆ ಮಾತನಾಡಿ ಅನುಮತಿ ಕೊಡಿಸುತ್ತೇನೆ. ಕಳಸಾ-ಬಂಡೂರಿ, ಮಹದಾಯಿಗೆ ಅತಿ ಹೆಚ್ಚು ಅಡ್ಡಗಾಲು ಹಾಕಿದ್ದೇ ಕಾಂಗ್ರೆಸ್. ಸೋನಿಯಾ ಗಾಂಧಿ ಗೋವಾಕ್ಕೆ ಹೋಗಿ ಕರ್ನಾಟಕಕ್ಕೆ ಹನಿ ನೀರು ಕೊಡಬೇಡಿ ಎಂದಿದ್ದರು ಎಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
state Feb 27, 2024, 8:30 AM IST
ಕಾಲುವೆಗೆ ಬಿದ್ದ ತನ್ನ ಮರಿಯನ್ನು ರಕ್ಷಿಸಿದ ಅರಣ್ಯ ಇಲಾಖೆ ಹಾಗೂ ನಾಗರಿಕರಿಗೆ ತಾಯಿ ಆನೆಯೊಂದು ಸೊಂಡಿಲೆತ್ತಿ ನಮಸ್ಕರಿಸಿದ ಅಚ್ಚರಿಯ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
India Feb 26, 2024, 12:31 PM IST
ಕೆಲ ದಿನಗಳ ಹಿಂದಷ್ಟೇ ನೈಜೀರಿಯಾದ ಮೃಗಾಲಯವೊಂದರಲ್ಲಿ ಹುಟ್ಟಿದಾಗಿನಿಂದ ತನ್ನ ಆರೈಕೆ ಮಾಡಿದ ಝೂ ಕೀಪರ್‌ನನ್ನುಸಿಂಹವೊಂದು ಸಾಯಿಸಿದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮೊದಲೇ ಈಗ ಅಮೆರಿಕಾ ಕೊಲೆರಾಡೋದಲ್ಲಿ ವ್ಯಕ್ತಿಯೋರ್ವ ಸಾಕಿದ್ದ ಹಲ್ಲಿಯೊಂದು ಮಾಲೀಕನ್ನು ಕಚ್ಚಿ ಸಾಯಿಸಿದ ವಿಚಿತ್ರ ಘಟನೆ ನಡೆದಿದೆ.
International Feb 22, 2024, 2:30 PM IST
ಇದು ಮುಂದೆಯೂ ಕೊಡಗಿನ ಜನರ ಪಾಲಿಗೆ ಮುಳುವಾಗಬಹುದು. ಹೀಗಾಗಿ ಸರ್ಕಾರದ ಆ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ ಮಾಜಿ ಸ್ವೀಪಕರ್ ಕೆ.ಜಿ. ಬೋಪಯ್ಯ
Karnataka Districts Feb 20, 2024, 9:04 PM IST
ರಾಜ್ಯ ಸರ್ಕಾರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಹೊರಡಿಸಿದ್ದ ವನ್ಯಜೀವಿ ಪಳಯುಳಿಕೆಗಳ ವಾಪಸ್ ನಿಯಮಕ್ಕೆ ಜಿಲ್ಲೆಯಲ್ಲಿ ಆತಂಕ ಶುರುವಾಗಿತ್ತು. ಸದ್ಯ ಈ ಕಾನೂನಿಗೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
state Feb 20, 2024, 7:15 PM IST
36 ವರ್ಷದ ಮೊಸಳೆಯ ಹೊಟ್ಟೆಯೊಳಗೆ 70ಕ್ಕೂ ಹೆಚ್ಚು ನಾಣ್ಯಗಳು ಪತ್ತೆಯಾದ ಘಟನೆ ವಿದೇಶದ ಮೃಗಾಲಯವೊಂದರಲ್ಲಿ ನಡೆದಿದೆ. ಘಟನೆಯಿಂದ ಕಳವಳಗೊಂಡಿರುವ ಝೂ ಅಧಿಕಾರಿಗಳು ಹಾಗೂ ಪಶು ವೈದ್ಯರು ಪ್ರಾಣಿಗಳಿರುವ ಸ್ಥಳದಲ್ಲಿ ನಾಣ್ಯಗಳನ್ನು ಎಸೆಯದಂತೆ ಮನವಿ ಮಾಡಿದ್ದಾರೆ.
International Feb 20, 2024, 3:32 PM IST
ಕೇರಳದ ವೈನಾಡಿನಲ್ಲಿ ಕಾಡಾನೆ ತುಳಿತಕ್ಕೆ ಬಲಿಯಾದ ವ್ಯಕ್ತಿಗೆ ಕರ್ನಾಟಕ ಸರ್ಕಾರ ಬರೋಬ್ಬರಿ 15 ಲಕ್ಷ ರೂಪಾಯಿ ಪರಿಹಾರ ನೀಡಿರುವುದು ಸರ್ಕಾರದ ನಡೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ
state Feb 20, 2024, 2:08 PM IST
ಕಾನೂನು ಗೊತ್ತಿಲ್ಲದೆ ವನ್ಯಜೀವಿಗಳ ಅಂಗಾಂಗಗಳನ್ನಿಟ್ಟುಕೊಂಡಿರುವ, ಅವುಗಳನ್ನು ಅರಣ್ಯ ಇಲಾಖೆ ಸುಪರ್ದಿಗೆ ನೀಡಿದ್ರೆ ಯಾವುದೇ ಪ್ರಕರಣ ದಾಖಲಾಗಲ್ಲ ಆದರೆ ನಿರ್ಲಕ್ಷಿಸಿದ್ದೆಯಾದಲ್ಲಿ ಅಂಥವರ ಮೇಲೆ ದೂರು ದಾಖಲಾಗುವದು ಪಕ್ಕಾ ಎಂದ ಸಚಿವ ಈಶ್ವರ ಖಂಡ್ರೆ
state Feb 18, 2024, 9:26 AM IST
ಬೇಸಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಆಕಸ್ಮಿಕವಾಗಿ ಸಂಭವಿಸುವ ಕಾಡ್ಗಿಚ್ಚು ನಿಯಂತ್ರಿಸಲು ಅರಣ್ಯ ಇಲಾಖೆ 2000 ಕಿಲೋಮೀಟರ್‌ಗೂ ಹೆಚ್ಚು ಫೈರ್‌ಲೈನ್ ಎಳೆಯಲು ಮುಂದಾಗಿದೆ. ನಾಗರಹೊಳೆ ಅಭಯಾರಣ್ಯದ 840 ಚದರ ಕಿಲೋಮೀಟರ್ ಪ್ರದೇಶದಲ್ಲಿ ಅಗ್ನಿಶಾಮಕ ರೇಖೆಗಳನ್ನು ಎಳೆಯಲು ಹೆಚ್ಚುವರಿಯಾಗಿ 400 ಅರಣ್ಯ ವೀಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
state Feb 16, 2024, 8:31 PM IST
ಬೀಟಮ್ಮ ಗುಂಪಿನ ಆನೆಗಳ ಉಪಟಳದಿಂದ ಬೇಸತ್ತ ಚಿಕ್ಕಮಗಳೂರು ತಾಲೂಕಿನ ಇಂದಾವರ ಹಾಗೂ ಸುತ್ತಲಿನ ಗ್ರಾಮಸ್ಥರು ಇಂದು ಮಧ್ಯಾಹ್ನ ದಿಢೀರ್ ರಸ್ತೆ ತಡೆ ನಡೆಸಿ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದರು
Karnataka Districts Feb 15, 2024, 8:36 PM IST
ವನ್ಯಜೀವಿ ಛಾಯಾಗ್ರಾಹಕರೊಬ್ಬರು ಸೆರೆ ಹಿಡಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸೆರೆಯಾಗಿದೆ. ಚಾರಣಗಿರಣ ಅಂತ ಕಾಡು ಬೆಟ್ಟ ಗುಡ್ಡಗಳನ್ನು ಸುತ್ತುತ್ತಾ ಅಲ್ಲೆಲ್ಲಾ ಪ್ಲಾಸ್ಟಿಕ್ ಕವರ್‌ಗಳು ಬಾಟಲ್‌ಗಳನ್ನು ತೂರಾಡುತ್ತಾ ಪರಿಸರದ ವಿನಾಶಕ್ಕೆ ಕೊಡುಗೆ ನೀಡುತ್ತಿರುವ ಮನುಷ್ಯರಿಗೆ ವನ್ಯಜೀವಿಯಾಗಿರುವ ಹುಲಿಯೊಂದು ಬುದ್ದಿ ಹೇಳುವಂತೆ ಇದೆ ಈ ವೀಡಿಯೋ...
India Feb 14, 2024, 4:14 PM IST