Asianet Suvarna News Asianet Suvarna News

ವನ್ಯ ಜೀವಿಗಳ ಅಂಗಾಂಗ ವಾಪಸ್‌ಗೆ ಏ.10ರ ಗಡುವು: ಸಚಿವ ಈಶ್ವರ ಖಂಡ್ರೆ

ಕಾನೂನು ಗೊತ್ತಿಲ್ಲದೆ ವನ್ಯಜೀವಿಗಳ ಅಂಗಾಂಗಗಳನ್ನಿಟ್ಟುಕೊಂಡಿರುವ, ಅವುಗಳನ್ನು ಅರಣ್ಯ ಇಲಾಖೆ ಸುಪರ್ದಿಗೆ ನೀಡಿದ್ರೆ ಯಾವುದೇ ಪ್ರಕರಣ ದಾಖಲಾಗಲ್ಲ ಆದರೆ ನಿರ್ಲಕ್ಷಿಸಿದ್ದೆಯಾದಲ್ಲಿ ಅಂಥವರ ಮೇಲೆ‌ ದೂರು ದಾಖಲಾಗುವದು ಪಕ್ಕಾ ಎಂದ ಸಚಿವ ಈಶ್ವರ ಖಂಡ್ರೆ 

April 10th Deadline for Wildlife Organ Return Says Minister Eshwar Khandre grg
Author
First Published Feb 18, 2024, 9:26 AM IST

ಬೀದರ್‌(ಫೆ.18): ವನ್ಯ ಜೀವಿಗಳ ಅಂಗಾಂಗಗಳಾದ ಹಲ್ಲು, ಕೊಂಬು, ಕೂದಲು ಸೇರಿದಂತೆ ಮತ್ತಿತರವುಗಳನ್ನು ಬರುವ ಏ.10ರ ಒಳಗಾಗಿ ಅರಣ್ಯ ಇಲಾಖೆ ಸುಪರ್ದಿಗೆ ನೀಡಬೇಕು‌ ಇಲ್ಲವಾದಲ್ಲಿ ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಲಾಗುವದು ಎಂದು ಅರಣ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಎಚ್ಚರಿಸಿದರು.

ವನ್ಯಜೀವಿಗಳ ಅಂಗಾಂಗಳ ಸಂಗ್ರಹದ ಕುರಿತಾಗಿ ಇತ್ತೀಚಿಗೆ ಅರಣ್ಯ ಇಲಾಖೆಯ ಕಾರ್ಯಾಚರಣೆ ಹಲವರ ನಿದ್ದೆಗೆಡಿಸಿತ್ತಲ್ಲದೆ ಖ್ಯಾತನಾಮರೂ ಸೇರಿದಂತೆ ಅನೇಕರ ಮೇಲೆ ದೂರು ದಾಖಲಾಗುವಂತೆ ಆಗಿ ಕೊನೆಗೆ ಕಾನೂನಿನ ಅರಿವಿಲ್ಲದೆ ಸಂಗ್ರಹ ಮಾಡಿದ್ದವರ ಮೇಲೆ ಸರ್ಕಾರ ಅನುಕಂಪ ತೋರಿ ವಾಪಸ್‌ ನೀಡುವಿಕೆಗೆ ಗಡುವು ನಿರ್ಧರಿಸುವ ಮಾತನಾಡಿದ್ದು, ಇದೀಗ ಗಡುವು ನಿರ್ಧರಿತವಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.

ಸಿದ್ದರಾಮಯ್ಯಗೆ ಸರ್ಕಾರ 5 ವರ್ಷ ನಡೆಯುತ್ತೆ ಅನ್ನೋದೆ ಖಾತ್ರಿಯಿಲ್ಲ: ಭಗವಂತ ಖೂಬಾ

ಬೀದರ್‌ನಲ್ಲಿ ಭೇಟಿಯಾದ ಸುದ್ದಿಗಾರರಿಗೆ ಮಾತನಾಡಿ, ಕಾನೂನು ಗೊತ್ತಿಲ್ಲದೆ ವನ್ಯಜೀವಿಗಳ ಅಂಗಾಂಗಗಳನ್ನಿಟ್ಟುಕೊಂಡಿರುವ, ಅವುಗಳನ್ನು ಅರಣ್ಯ ಇಲಾಖೆ ಸುಪರ್ದಿಗೆ ನೀಡಿದ್ರೆ ಯಾವುದೇ ಪ್ರಕರಣ ದಾಖಲಾಗಲ್ಲ ಆದರೆ ನಿರ್ಲಕ್ಷಿಸಿದ್ದೆಯಾದಲ್ಲಿ ಅಂಥವರ ಮೇಲೆ‌ ದೂರು ದಾಖಲಾಗುವದು ಪಕ್ಕಾ ಎಂದರು.

ವನ್ಯ ಜೀವಿಗಳ ಅಂಗಾಂಗಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ, ಒಂದು ವೇಳೆ ಇಟ್ಟುಕೊಂಡ್ರೆ ಶಿಕ್ಷಾರ್ಹ ಅಪರಾಧವಾಗುತ್ತದೆ. ಹೀಗಾಗಿ ಪ್ರಮಾಣ ಪತ್ರ ಇದ್ರೆ ಮಾತ್ರ ವನ್ಯಜೀವಿಗಳ ಅಂಗಾಂಗಗಳನ್ನಿಟ್ಟುಕೊಳ್ಳಬಹುದು ಎಂದು ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.

Follow Us:
Download App:
  • android
  • ios