ಸಚಿನ್ ತೆಂಡೂಲ್ಕರ್ ಹೆಸರಲ್ಲಿರೋ ಈ ರೆಕಾರ್ಡ್ ಮುರಿಯೋಕೆ ವಿರಾಟ್ ಕೊಹ್ಲಿಗೂ ಆಗೋಲ್ಲ ಬಿಡಿ!
ಬೆಂಗಳೂರು: ಕಳೆದ ಕೆಲ ವರ್ಷಗಳಿಂದ ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡುಲ್ಕರ್ ಹಾಗೂ ಆಧುನಿಕ ಕ್ರಿಕೆಟ್‌ನ ರನ್ ಮಷೀನ್ ವಿರಾಟ್ ಕೊಹ್ಲಿ ನಡುವೆ ಹೋಲಿಕೆ ಮಾಡಲಾಗುತ್ತಿದೆ. ಆದರೆ ತೆಂಡುಲ್ಕರ್ ಅವರ ಹೆಸರಿನಲ್ಲಿರುವ ಈ ದಾಖಲೆ ಮುರಿಯೋದು ಕೊಹ್ಲಿ ಪಾಲಿಗೆ ಕನಸಿನ ಮಾತು. ಯಾವುದದು ರೆಕಾರ್ಡ್ ಅಂತೀರಾ..?
ಮಾಸ್ಟರ್ ಬ್ಲಾಸ್ಟರ್ ಖ್ಯಾತಿಯ ಸಚಿನ್ ತೆಂಡುಲ್ಕರ್, ಎರಡೂವರೆ ದಶಕಗಳ ತಮ್ಮ ಕ್ರಿಕೆಟ್ ಬದುಕಿನಲ್ಲಿ ಹಲವಾರು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ದಾಖಲೆಗಳ ಪೈಕಿ ಇತ್ತೀಚೆಗಷ್ಟೇ ಒಂದು ರೆಕಾರ್ಡ್ ಬ್ರೇಕ್ ಮಾಡುವಲ್ಲಿ ವಿರಾಟ್ ಕೊಹ್ಲಿ ಯಶಸ್ವಿಯಾಗಿದ್ದರು. ಇದೀಗ ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಸಿಡಿಸಿದ ದಾಖಲೆ ವಿರಾಟ್ ಕೊಹ್ಲಿ ಪಾಲಾಗಿದೆ. ಹೀಗಿದ್ದೂ ಹಲವು ದಾಖಲೆಗಳು ಸಚಿನ್ ಹೆಸರಿನಲ್ಲಿವೆ.
sachin kohli
ಈಗಾಗಲೇ ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ, ಸಚಿನ್ ತೆಂಡುಲ್ಕರ್ ಹೆಸರಿನಲ್ಲಿರುವ ಕೆಲವು ಅಪರೂಪದ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಆ ಒಂದು ರೆಕಾರ್ಡ್ ಮುರಿಯುವುದು ಕೊಹ್ಲಿ ಪಾಲಿಗೂ ಕನಸಿನ ಮಾತು ಎನಿಸತೊಡಗಿದೆ.
ಯಾವುದದು ರೆಕಾರ್ಡ್?
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಬೌಂಡರಿ ಬಾರಿಸಿದ ದಾಖಲೆ ಮುಂಬೈಕರ್ ತೆಂಡುಲ್ಕರ್ ಹೆಸರಿನಲ್ಲಿದೆ. ಇದೊಂದು ದಾಖಲೆ ಮುರಿಯೋಕೆ ಕೊಹ್ಲಿಗೂ ಅಸಾಧ್ಯವಾದ ಮಾತು ಎನಿಸತೊಡಗಿದೆ.
ಸಚಿನ್ ತೆಂಡುಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬರೋಬ್ಬರಿ 4076 ಬೌಂಡರಿಗಳನ್ನು ಬಾರಿಸಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಬೌಂಡರಿ ಬಾರಿಸಿದ ದಾಖಲೆ ತೆಂಡುಲ್ಕರ್ ರಿಟೈರ್ಡ್ ಆಗಿ ಒಂದು ದಶಕ ಕಳೆದರೂ ಅಚ್ಚಳಿಯದೇ ಉಳಿದಿದೆ.
Kohli, 31, is one of the best batsmen across formats. Time and again he has proved his batting ability at home and overseas.
ಸದ್ಯ ಸಕ್ರಿಯ ಆಟಗಾರರ ಪೈಕಿ ವಿರಾಟ್ ಕೊಹ್ಲಿ 2646 ಬೌಂಡರಿ ಬಾರಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನೂ ತೆಂಡುಲ್ಕರ್ ದಾಖಲೆ ಬ್ರೇಕ್ ಮಾಡಬೇಕಿದ್ದರೇ, ಕೊಹ್ಲಿ ಇನ್ನೂ 1431 ಬೌಂಡರಿ ಬಾರಿಸಬೇಕಿದೆ.
ಯಾಕೆ ಅಸಾಧ್ಯ?
ವಿರಾಟ್ ಕೊಹ್ಲಿಯ ಸದ್ಯದ ಟ್ರ್ಯಾಕ್ ರೆಕಾರ್ಡ್ ಗಮನಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ರತಿ ವರ್ಷ ಸರಾಸರಿ 165 ಬೌಂಡರಿಗಳನ್ನು ಬಾರಿಸುತ್ತಾ ಬಂದಿದ್ದಾರೆ.
ಒಂದು ವೇಳೆ ವಿರಾಟ್ ಕೊಹ್ಲಿ 2028ರವರೆಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದರೆ, ಪ್ರತಿ ವರ್ಷ 358 ಬೌಂಡರಿ ಬಾರಿಸಿದರಷ್ಟೇ ತೆಂಡುಲ್ಕರ್ ದಾಖಲೆ ಮುರಿಯಬಹುದು.
ಅಂದರೆ ಈಗ ಬಾರಿಸಿರುವ ಬೌಂಡರಿ ಸರಾಸರಿಗಿಂತ ಎರಡು ಪಟ್ಟು ಹೆಚ್ಚಿಗೆ ಬೌಂಡರಿ ಬಾರಿಸಬೇಕಾಗುತ್ತದೆ. ವಯಸ್ಸು ಹಾಗೂ ಇನ್ನಿತರ ಕಾರಣಗಳಿಂದ ಕೊಹ್ಲಿ ಮುಂದಿನ 4 ವರ್ಷಗಳ ಪ್ರತಿವರ್ಷ 358 ಬೌಂಡರಿ ಬಾರಿಸುವುದು ಸುಲಭವಲ್ಲ.