ವಿವಾಹಿತೆಯರು ತಮ್ಮ ಅತ್ತೆ ಮಾವನ ಜೊತೆ ಇರೋಕೆ ಬಯಸೋಲ್ಲ ಏಕೆ?
ಇಂದು ಬಹುತೇಕ ಹುಡುಗಿಯರು ವಿವಾಹದ ಬಳಿಕ ಅತ್ತೆ ಮಾವನೊಂದಿಗೆ ಬದುಕಲು ಇಷ್ಟಪಡುವುದಿಲ್ಲ. ಇದಕ್ಕೆ ಒಬ್ಬೊಬ್ಬರದು ಒಂದೊಂದು ಕಾರಣವಿರಬಹುದು. ಕೋರಾ ಬಳಕೆದಾರ್ಥಿ ಸೃಷ್ಟಿ ಅವರ ಕಾರಣ ನೀಡಿದ್ದಾರೆ. ನೀವೇನಂತೀರಾ?
ಸಾಂಪ್ರದಾಯಿಕವಾಗಿ, ಮದುವೆಯಾದ ನಂತರ ಮಹಿಳೆ ತನ್ನ ಅತ್ತೆಯ ಮನೆಗೆ ಸ್ಥಳಾಂತರಗೊಳ್ಳುವುದು ವಾಡಿಕೆ. ಮದುವೆಯವರೆಗೆ ತನ್ನದಷ್ಟೇ ವಿಚಾರ ಮಾಡಿಕೊಂಡಿರುವ ಮಹಿಳೆ ಇದ್ದಕ್ಕಿದ್ದಂತೆ ಗಂಡ, ಅತ್ತೆ ಮಾವ, ಕಡೆಗೆ ಮಕ್ಕಳಾದ ಮೇಲೆ ಅವರ ಜವಾಬ್ದಾರಿಯನ್ನೂ ತಲೆ ಮೇಲೆ ಹೊತ್ತುಕೊಳ್ಳಬೇಕು ಎಂಬುದು ನಿರೀಕ್ಷೆ. ಇಂದಿನ ಮಹಿಳೆಯರಿಗೆ ಇವೆಲ್ಲದರ ಜೊತೆಗೆ ಗಂಡನಷ್ಟೇ ಆದಾಯ ಸಂಪಾದಿಸುವ ಕನಸು ಬೇರೆ.
ಇಂದು ಮಹಿಳೆ ಸಾಕಷ್ಟು ಭವಿಷ್ಯದ ಯೋಚನೆಯನ್ನೂ ಮಾಡಬಲ್ಲಳು, ಆರ್ಥಿಕವಾಗಿ ಸ್ವತಂತ್ರವಾಗಿರುವ ಆಕೆ ತನ್ನ ಅಭಿಪ್ರಾಯವನ್ನು ನಿರ್ಭಿಡೆಯಿಂದ ಹೇಳಬಲ್ಲಳು. ಹಾಗಾಗಿ, ಇಂದು ಸಾಕಷ್ಟು ಯುವತಿಯರು ವಿವಾಹದ ಬಳಿಕ ಅತ್ತೆ ಮಾವನ ಜೊತೆಗಿರಲು ಒಪ್ಪುವುದಿಲ್ಲ. ಅವರು ಗಂಡನೊಡನೆ ಪ್ರತ್ಯೇಕವಾಗಿರಲು ಬಯಸುತ್ತಾರೆ. ಈ ಕಾರಣಕ್ಕಾಗಿ ಇಂದಿನ ಮಹಿಳೆ ಕುಟುಂಬಕ್ಕೆ ಆದ್ಯತೆ ಕೊಡುವುದಿಲ್ಲ, ಆಕೆ ಸ್ವಾರ್ಥಿ ಎಂಬ ಆರೋಪವನ್ನೂ ಹೊತ್ತಿದ್ದಾಳೆ.
ಸಾರಾ ತೆಂಡೂಲ್ಕರ್ಗೂ ಇತ್ತು ಪಿಸಿಒಎಸ್, ಮೊಡವೆ ಕಾಟ; ಆಕೆ ಪರಿಹಾರ ಪ್ರ ...
ಮದುವೆಯಾದ ನಂತರ ಹೆಚ್ಚು ಹೆಚ್ಚು ವಿವಾಹಿತ ಮಹಿಳೆಯರು ತಮ್ಮ ಅತ್ತೆಯೊಂದಿಗೆ ವಾಸಿಸದಿರಲು ಏಕೆ ನಿರ್ಧರಿಸುತ್ತಾರೆ ಎಂಬ ಪ್ರಶ್ನೆಗೆ ಕೋರಾ ಪ್ರಶ್ನೋತ್ತರ ತಾಣದಲ್ಲಿ ಟಿಸಿಎಸ್‌ನ ಮಾಜಿ ಸಾಫ್ಟ್‌ವೇರ್ ಇಂಜಿನಿಯರ್ ಸೃಷ್ಟಿ ರಾಜ್ ಹೀಗೆ ಉತ್ತರಿಸಿದ್ದಾರೆ. 2010ರಲ್ಲಿ ಶಾಲಾ ಶಿಕ್ಷಣ ಪೂರೈಸಿದಂದಿನಿಂದ ಓದಿಗಾಗಿ ಪೋಷಕರ ಮನೆಯಿಂದ ದೂರ ವಾಸಿಸುತ್ತಿರುವ ಸೃಷ್ಟಿಯ ಉತ್ತರವಿದು,
'ಕಛೇರಿಯಲ್ಲಿ ಹಲವಾರು ವಿವಾಹಿತ ಮಹಿಳೆಯರ ಕಥೆಗಳನ್ನು ಕೇಳಿದಾಗ, ಕಾನೂನು, ನಿಯಮಗಳೊಂದಿಗೆ ಬದುಕುವುದು ಕಷ್ಟ ಎಂದು ನಾನು ಅಭಿಪ್ರಾಯಪಟ್ಟಿದ್ದೇನೆ, ಏಕೆಂದರೆ ಪ್ರತಿಯೊಬ್ಬ ಸೊಸೆಯು ಹತಾಶೆ ಅನುಭವಿಸುತ್ತಾಳೆ ಮತ್ತು ಅಳುತ್ತಾಳೆ. ನಾನು ಆಫೀಸ್ ವಾಶ್‌ರೂಮ್‌ನ ಬೆಂಚ್‌ನಲ್ಲಿ ಇಂಥ ಸೊಸೆಯ ಪ್ರಾಮಾಣಿಕ ಕಣ್ಣೀರನ್ನು ನೋಡಿದ್ದೇನೆ' ಎಂದು ಸೃಷ್ಟಿ ಬರೆದಿದ್ದಾರೆ.
ಹತ್ತು ವರ್ಷಗಳ ನಂತರ, COVID-19 ಲಾಕ್‌ಡೌನ್‌ನಿಂದಾಗಿ 2020 ರಲ್ಲಿ ಮತ್ತೆ ತನ್ನ ಹೆತ್ತವರೊಂದಿಗೆ ವಾಸಿಸಲು ಪ್ರಾರಂಭಿಸಿದಾಗ ಸೃಷ್ಟಿಗೆ ಹಿರಿಯರ ಜೊತೆಗಿರುವುದು ಏಕೆ ಕಷ್ಟ ಎಂದು ಅರಿವಾಯಿತಂತೆ. ಅವರ ಪ್ರಕಾರ, ಹಿರಿಯರು ಯಾವಾಗಲೂ ತಾವು ಹೇಳಿದಂತೆಯೇ ಮನೆಯಲ್ಲಿರುವವರು ಕೇಳಬೇಕೆಂದು, ಅವರು ಹಾಕಿದ ನಿಯಮ ಪಾಲಿಸಬೇಕೆಂದು ಬಯಸುತ್ತಾರೆ ಮತ್ತು ಸೂಚನೆಗಳನ್ನು ನೀಡಲು ಇಷ್ಟಪಡುತ್ತಾರೆ.
ತಡವಾಗಿ ಬಂದರೆಂದು ಶಿಕ್ಷಕಿಗೆ ಹೊಡೆದ ಪ್ರಾಂಶುಪಾಲೆ; ವಿಡಿಯೋ ವೈರಲ್
'ಈಗ, ಅತ್ತೆ ಮಾವ ಅಷ್ಟೇ ಅಲ್ಲ, ಒಟ್ಟಾರೆ ಪೋಷಕರೊಂದಿಗೆ ಬದುಕುವುದು ಕಷ್ಟ ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ. ಒಂದೆರಡು ವರ್ಷಗಳು ಹೊಂದಾಣಿಕೆಗೆ ಹೋಗುತ್ತವೆ. ಮತ್ತು ಅತ್ತೆಯ ವಿಷಯದಲ್ಲೂ ಅದೇ ಆಗಿರುತ್ತದೆ' ಎಂದು ಅವರು ಹೇಳಿದ್ದಾರೆ.
ಮತ್ತೊಂದು ಪ್ರಮುಖ ಸಮಸ್ಯೆ, ಸೃಷ್ಟಿ ಅವರು ಮನೆಗೆ ತನಗೆ ಬೇಕಾದ ನೋಟ ಮತ್ತು ಭಾವನೆಯನ್ನು ನೀಡಲು ಪೋಷಕರು ಹೇಗೆ ಅವಕಾಶ ನೀಡಲಿಲ್ಲ ಎಂಬುದನ್ನು ಹೇಳಿದ್ದಾರೆ. ಆ ಮನೆ ನಮ್ಮದೆಂದು ಅನಿಸುವಂತೆ ಅವರೆಂದೂ ನಡೆದುಕೊಳ್ಳುವುದಿಲ್ಲ. ಅವರ ಮನೆಯಲ್ಲಿ ಹಂಗಿಗೆ ಇರುವಂತೆ ನಡೆಸಿಕೊಳ್ಳುತ್ತಾರೆ. ಅವರೆಲ್ಲ ನಿಯಮ ಪಾಲಿಸಿಕೊಂಡು, ಅವರಿಷ್ಟದಂತಿದ್ದರೆ ಮಾತ್ರ ಹೊಂದಾಣಿಕೆ ಸಾಧ್ಯವಾಗುತ್ತದೆ ಎಂಬುದು ಸೃಷ್ಟಿಯ ಆಂಬೋಣ. ಇದಕ್ಕೆ ಹಲವು ಮಹಿಳೆಯರು ಹೌದು ಎಂದಿದ್ದಾರೆ. ಈ ಪೋಸ್ಟ್ ಹಲವಾರು ರೀತಿಯ ಚರ್ಚೆಗೆ ಗ್ರಾಸವಾಗಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?